ರೈತರು ದೆಹಲಿ ತಲುಪದಂತೆ ತಡೆಯಲು ರೈಲನ್ನೇ ತಿರುಗಿಸಿದ ಸರ್ಕಾರ!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸೇರಲು ಹೊರಟಿದ್ದ ರೈತರು ದೆಹಲಿ ತಲುಪದಂತೆ ತಡೆಯುವ ಉದ್ದೇಶದಿಂದ ಸೋಮವಾರ ಬೆಳಗ್ಗೆ ರೈಲಿನ ಮಾರ್ಗವನ್ನೇ ಸರ್ಕಾರ ಬದಲಿಸಿದೆ ಎಂದು ರೈತ ಹೋರಾಟದಲ್ಲಿ ಮುಂಚುಣಿಯಲ್ಲಿರುವ ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಗೆ ಬರುತ್ತಿದ್ದರು. ಅವರು ದೆಹಲಿ ತಲುಪದಂತೆ ತಡೆಯುವ ಉದ್ದೇಶದಿಂದ ಫೆರೋಜ್‌ಪುರ್, ಮುಂಬೈ, ಪಂಜಾಬ್ ಮಾರ್ಗವಾಗಿ ದೆಹಲಿ ತಲುಪಲಿದ್ದ ಮೈಲ್ ಎಕ್ಸ್‌ಪ್ರೆಸ್‌ ರೈಲನ್ನು ರೋಹಟಕ್ ನಿಂದ ರೇವಾಗೆ ಸೋಮವಾರ ಬೆಳಗ್ಗೆ ತಿರುಗಿಸಲಾಗಿದೆ. ಇದರಿಂದಾಗಿ ಈ ರೈಲಿನಲ್ಲಿದ್ದ ಸಾವಿರಾರು ರೈತರು ದೆಹಲಿಗೆ ತಲುಪಲು ಸಾಧ್ಯವಾಗಿಲ್ಲ ಎಂದು ಯೋಗೇಂದ್ರ ಯಾದವ್‌ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

ಗಣರಾಜ್ಯೋತ್ಸವ ದಿನದಂದು ನಡೆದ ಅಹಿತರ ಘಟನೆಯ ನಂತರ, ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಹೀಗಾಗಿ, ರೈತರ ಮೇಲೆ ಬಿಜಪಿಗರು ದಾಳಿ-ಹಿಂಸಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಪೊಲೀಸರು ಸಹಕರಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಅಲ್ಲದೆ, ಕಳೆದ ಮೂರು ದಿನಗಳಲ್ಲಿ 200ಕ್ಕೂಹೆಚ್ಚು ರೈತರು ಕಾಣೆಯಾಗಿದ್ದಾರೆ ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights