ದೆಹಲಿ ಹಿಂಸಾಚಾರ: ಗರ್ಭಿಣಿ ಸಪೂರಾಗೆ ಜೈಲು – ಗನ್ ಸಾಗಿಸಿದ ಸಿರೋಹಿಗೆ ಬೇಲು

ದೆಹಲಿಯಲ್ಲಿ 2020ರ ಫೆಬ್ರವರಿ 23 ರಿಂದ 25 ರವೆರೆಗೆ ನಡೆದ ಕೋಮು ಗಲಬೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಹಿಂಚಾರದ ಆರೊಪದ ಮೇಲೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ವಿದ್ಯಾರ್ಥಿನಿಯಾಗಿರುವ ಒಬ್ಬ ಮುಸ್ಲೀಂ ಗರ್ಭಿಣಿ ಮಹಿಳೆಯನ್ನು ಹಿಂಸಾಚಾರ ನಡೆದ ಆರು ವಾರಗಳ ನಂತರ ಬಂಧಿಸಲಾಗಿದೆ. ಆಕೆ ಯಾವುದೇ ಅಪರಾಧ ಚಟುವಟಿಕೆ (ಗಲಬೆ)ಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗಿದ್ದು, ಆಕೆಯನ್ನು ಬಂಧಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಮುಖ್ಯ ವಿಚಾರ.

ಇನ್ನೊಬ್ಬರು ಹಿಂದೂ ವ್ಯಕ್ತಿಯನ್ನೂ ಬಂಧಿಸಲಾಗಿದ್ದು, ಆತ ಕಳೆದ ಎರಡು ವರ್ಷಗಳಿಂದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರ ಮತ್ತು ಕಾರ್ಟ್ರಿಡ್ಜ್‌ಗಳನ್ನು ಖರೀದಿಸಿ ದೆಹಲಿಗೆ ಸಾಗಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದಾಗಲೂ ಆತನನ್ನು ಬಂಧಿಸಲಾಗಿತ್ತು ಮತ್ತು ಆತನಿಂದ ಐದು ಪಿಸ್ತೂಲ್ ಮತ್ತು 20 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ 55 ಜನರಲ್ಲಿ ಅನೇಕರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.

ಈ ಇಬ್ಬರ ಪ್ರಕರಣವನ್ನೂ ಮಾರ್ಚ್ 6, 2020ರಂದು ಎಫ್ಐಆರ್ -59ರ ಅಡಿಯಲ್ಲಿ ದಾಖಲಿಸಲಾಗಿದೆ. ಈ ಪ್ರಕರಣವು ಅಪರಾಧ ವಿಭಾಗದಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ವಿಶೇಷ ತಂಡದಿಂದ ತನಿಖೆ ನಡೆಸಲಾಗುತ್ತದೆ. ಆದರೆ, ಆರೋಪಿಗಳ ಬಗೆಗೆ ಅವರ ನಿಲುವು ವ್ಯತಿರಿಕ್ತತವಾಗಿದೆ ಎಂದು ಸ್ಪಷ್ಟವಾಗಿದೆ.

ಯಾವುದೇ ವೆಪನ್‌ಗಳು ಸಿಗದೇ ಇದ್ದರೂ, ಸಫೂರ ಜರ್ಫರ್ ಎಂಬ ಮಹಿಳೆಯ ಮೇಲೆ ಭಾರತದ anti-terrorism law ಮತ್ತು the stringent Unlawful Activities (Prevention) Act (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆ ಗರ್ಭಿಣಿಯಾಗಿದ್ದರೂ, ದೆಹಲಿಯ ಕಿಕ್ಕಿರಿದ ಜೈಲು ವ್ಯವಸ್ಥೆಯೊಳಗೆ ಕೊರೊನಾ ಸೋಂಕಿನ ಅಪಾಯದ ಹೊರತಾಗಿಯೂ, ಜಾಮೀನು ನಿರೀಕ್ಷೆಯಿಲ್ಲದೆ ಒಂದು ತಿಂಗಳ ಕಾಲ ಜೈಲಿನಲ್ಲಿದ್ದಾಳೆ.

ಸಪೂರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್-59ರ ಅಡಿಯಲ್ಲಿಯೇ ವೆಪನ್‌ಗಳೊಂದಿಗೆ ಸೆರೆಸಿಕ್ಕ ಮನೀಶ್ ಸಿರೋಹಿ ಎಂಬ ವ್ಯಕ್ತಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಮಾತ್ರ ಆರೋಪ ಹೊರಿಸಲಾಗಿದೆ, ಆದರೆ, ಕೊರೊನಾ ಅಪಾಯವನ್ನು ಉಲ್ಲೇಖಿಸಿ ದೆಹಲಿ ನ್ಯಾಯಾಲಯವು  25,000 ರೂಗಳ ಬಾಂಡ್‌ ಕಟ್ಟಿಸಿಕೊಂಡು ಅವನಿಗೆ ಜಾಮೀನು ನೀಡಿದೆ.

ಒಂದೇ ಎಫ್‌ಐಆರ್‌ – ಪೊಲೀಸರ ಎರಡು ನಿಲುವು

ಸಪೂರಾ ಮತ್ತು ಸಿರೋಹಿ ಪ್ರಕರಣವು ದೆಹಲಿ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ಮರೆದು ರಾಜಕೀಯ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ನಾಯಕರು ಮಾಡಿದ ದ್ವೇಷ ಮತ್ತು ಹಿಂಸಾಚಾರ ಭಾಷಣವನ್ನು ಪೊಲೀಸರು ಕಡೆಗಣಿಸಿರುವುದು ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದ ಸಫೂರಾ ಅವರನ್ನು ಏಪ್ರಿಲ್ 13 ರಂದು ಬಂಧಿಸಲಾಯಿತು. ಅದೇ ಎಫ್‌ಐಆರ್‌ ಅಡಿಯಲ್ಲಿ ಜಾಮಿಯಾ ವಿದ್ಯಾರ್ಥಿನಿ ಮೀರನ್ ಹೈದರ್, ವಿವಿಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ  ಶಿಫಾ-ಉರ್-ರೆಹಮಾನ್ ಮತ್ತು ಇತರ ಇಬ್ಬರು ಸಿಎಎ ವಿರೋಧಿ ಪ್ರತಿಭಟನಾಕಾರರಾದ ಖಾಲಿದ್ ಸೈಫಿ ಮತ್ತು ವಕೀಲ ಇಶ್ರತ್ ಜೆಹನ್ ಅವರನ್ನೂ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಇವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಫೆಬ್ರವರಿ 23 ರಿಂದ 25 ರವರೆಗೆ ನಡೆದ ಹಿಂಸಾಚಾರವು ಟ್ರಂಪ್‌ ಭೇಟಿಯ ಮೇಲೆ ಪರಿಣಾಮ ಬೀರಲು ನಡೆಸಿದ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಮಾರಣಾಂತಿಕ ಆಯುಧ ಬಳಕೆ ಮತ್ತು ಕಾನೂನುಬಾಹಿರ ಸಭೆಗಳನ್ನು ನಡೆಸಲಾಗಿದೆ ಎಂದು ಐಪಿಸಿ ಸೆಕ್ಷನ್ 147, 148, 149 ಮತ್ತು 120(ಬಿ) ಅಡಿಯಲ್ಲಿ ಕ್ರೈಮ್ ಬ್ರಾಂಚ್‌  ಎಫ್ಐಆರ್ ದಾಖಲಿಸಿದೆ. ಪ್ರಕರಣವನ್ನು ಸ್ಪೆಷಿಯಲ್ ಸೆಲ್‌ಗೆ ವರ್ಗಾಯಿಸಿದ ನಂತರ, ಕೊಲೆ ಸಂಚು (302), ಕೊಲೆ ಯತ್ನ (307), ದೇಶದ್ರೋಹ (124 ಎ), ಕೋಮುದ್ವೇಷಕ್ಕೆ ಉತ್ತೇಜಿಸುವುದು (153 ಎ) ಮತ್ತು ವಿಭಾಗಗಳು ಶಸ್ತ್ರಾಸ್ತ್ರ ಕಾಯ್ದೆಯನ್ನು ಸೇರಿಸಲಾಗಿದೆ.

ನಂತರ, ಏಪ್ರಿಲ್ 20 ರ ಸುಮಾರಿಗೆ, ವಿಶೇಷ ಕೋಶ (ಸ್ಪೆಷಿಯಲ್ ಸೆಲ್)ವು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯ ಭಯೋತ್ಪಾದಕ ಕೃತ್ಯಕ್ಕೆ ಹಣ ಸಂಗ್ರಹಿಸುವುದು ಮತ್ತು ಭಯೋತ್ಪಾದಕ ಕೃತ್ಯ ಎಸಗುವ ಸಂಚು ಆರೋಪದ ಮೇಲೆ 13, 16, 17 ಮತ್ತು 18 ವಿಭಾಗಗಳನ್ನು ಎಫ್‌ಐಆರ್‌ಗೆ ಸೇರಿಸಿದೆ. ಎಫ್‌ಐಆರ್‌ಗೆ ಯುಎಪಿಎ ಆರೋಪಗಳನ್ನು ಸೇರಿಸಿದ ನಂತರ, ಭಯೋತ್ಪಾದನಾ-ವಿರೋಧಿ ಕಾನೂನಿನೊಂದಿಗೆ ಬರುವ ಪೂರ್ವ-ಷರತ್ತುಗಳಿಂದಾಗಿ ಆರೋಪಿಗಳಿಗೆ ಜಾಮೀನು ನೀಡುವ ಸಾಧ್ಯತೆ ಕಡಿಮೆಯಾಗಿದೆ.

ಎಫ್‌ಐಆರ್ 59 ರ ಅಡಿಯಲ್ಲಿ ಯುಎಪಿಎ ಆರೋಪ ಎದುರಿಸುತ್ತಿರುವ ಮೂರು ತಿಂಗಳ ಗರ್ಭಿಣೀ ಸಫೂರಾ ಜರ್ಗರ್. ಮೀರನ್ ಹೈದರ್, ಶಿಫಾ-ಉರ್-ರೆಹಮಾನ್, ಖಾಲಿದ್ ಸೈಫಿ ಮತ್ತು ಇಶ್ರತ್ ಜೆಹಾನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಆದರೂ, ಮೇ 6 ರಂದು ಪಟಿಯಾಲ ಹೌಸ್ ಕೋರ್ಟ್ ಮನೀಶ್ ಸಿರೋಹಿಗೆ ಜಾಮೀನು ನೀಡಿದೆ.

ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಜಾಮೀನು ಆದೇಶದಲ್ಲಿ 2020ರ ಫೆಬ್ರವರಿ 26 ರಂದು ಸಿರೋಹಿಯನ್ನು ದೆಹಲಿ ಪೊಲೀಸರ ವಿಶೇಷ ಕೋಶವು ಬಂಧಿಸಿ  ಎಫ್‌ಐಆರ್ 59/2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿಆತನಿಂದ ಅವನಿಂದ 5 ಪಿಸ್ತೂಲ್ ಮತ್ತು 20 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾಮೀನು ಆದೇಶದಲ್ಲಿ ಹೇಳಲಾಗಿದೆ.

“ಆರೋಪಗಳ ಪ್ರಕಾರ, ಅರ್ಜಿದಾರ ಮತ್ತು ಸಹ-ಆರೋಪಿ ಜಾಹಿದ್ ಇಬ್ಬರನ್ನು ವಿಶೇಷ ಕೋಶದ ಅಧಿಕಾರಿಗಳು 26.02.2020 ರಂದು ಕೆಲವು ನಿರ್ದಿಷ್ಟ ಮಾಹಿತಿಯ ಮೇಲೆ ಬಂಧಿಸಿದ್ದಾರೆ. ಸಹ-ಆರೋಪಿ ಜಾಹಿದ್‌ನಿಂದ  20 ಪಿಸ್ತೂಲ್ ಮತ್ತು 80 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 5 ಪಿಸ್ತೂಲ್ ಮತ್ತು 20 ಕಾರ್ಟ್ರಿಡ್ಜ್‌ಗಳನ್ನು ಅರ್ಜಿದಾರ ಮನೀಶ್ ಸಿರೋಹಿ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅರ್ಜಿದಾರನ ತನಿಖೆ ಪೂರ್ಣಗೊಂಡಿದೆ ಮತ್ತು ಚಾರ್ಜ್‌ಶೀಟ್ ಸ್ಟ್ಯಾಂಡ್‌ಗಳನ್ನು ಈಗಾಗಲೇ 25.04.2020 ರಂದು ಸಂಬಂಧಪಟ್ಟ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಅರ್ಜಿದಾರ ಭಾಗಿಯಾಗಿಲ್ಲ ಎಂದು ಸಹ ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ ಎಂದು ಐಒ ವರದಿ ಮಾಡಿದೆ.

ಇದು ಗಲಭೆಯ ಪಿತೂರಿ ಪ್ರಕರಣವಾಗಿದ್ದು, ಯುಎಪಿಎ ಆರೋಪಗಳನ್ನು ಎಫ್‌ಐಆರ್‌ಗೆ ಸೇರಿಸಲಾಗಿದೆ ಮತ್ತು ತನಿಖೆ ಇನ್ನೂ ನಡೆಯುತ್ತಿದೆ. ಆದರೂ, ಇಡೀ ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದ್ದ ಮನೀಶ್ ಸಿರೋಹಿಗೆ ಜಾಮೀನು ನೀಡಲಾಗಿದೆ. ಈ ಜಾಮೀನು ಪ್ರಕರಣದಲ್ಲಿ ಅಸಂಗತತೆ ಸ್ಪಷ್ಟವಾಗಿದೆ ಎಂದು ಕಾನೂನು ತಜ್ಷರು ಹೇಳುತ್ತಾರೆ.

ಆರೋಪಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಲಭೆಯ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಗೆ ಗಲಭೆ ಪ್ರಕರಣದಲ್ಲಿ ಜಾಮೀನು ನೀಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

“ಮನೀಶ್ ಸಿರೋಹಿ ಬಂಧನದ ಸಮಯದಲ್ಲಿ ವಸ್ತು ಸಾಕ್ಷ್ಯಗಳನ್ನು ಇರಿಸಿಕೊಳ್ಳಲಾಗಿದೆ ಮತ್ತು ಕೆಲವು ಅಸ್ಪಷ್ಟ ಪಿತೂರಿಗಳನ್ನು ಉಲ್ಲೇಖಿಸುವುದನ್ನು ಹೊರತುಪಡಿಸಿದರೆ ಇತರರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಆದರೂ, ಇದೆಲ್ಲರ ಹೊರತಾಗಿಯೂ ಒಬ್ಬನನ್ನು ಬುಕ್‌ ಮಾಡಲಾಗಿದೆ. ನಂತರ ಆತನಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಜಾಮೀನು ನೀಡಲಾಗಿದೆ ಮತ್ತು ಇತರರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯುಎಪಿಯ ಅಡಿಯಲ್ಲಿ ಜಾಮೀನು ಪಡೆಯುವುದು ಕಠಿಣ ಮತ್ತು ಅಸಾಧ್ಯವಾಗಿದೆ” ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಸಫೂರಾಗೆ ಯುಎಪಿಎ, ಸಿರೋಹಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ದಾಖಲಿಸಿರುವ ವ್ಯತಿರಿಕ್ತ ಪ್ರಕರಣದ ಹೊರತಾಗಿಯೂ ಕೊರೊನಾ ಸೋಂಕಿನ ಮಧ್ಯೆ ಗರ್ಭಿಣಿ ಮಹಿಳೆಯನ್ನು ನಿರಂತರವಾಗಿ ಬಂಧಿಸುವುದು ಸಹ ಕಳವಳಕ್ಕೆ ಕಾರಣವಾಗಿದೆ.

ಭಾರತ ಸೇರಿದಂತೆ ಹಲವಾರು ದೇಶಗಳು ಸೋಂಕಿನ ಸಮಯದಲ್ಲಿ ಗರ್ಭಿಣಿಯರನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂದು ವಿಶೇಷ ಮಾರ್ಗಸೂಚಿಗಳನ್ನು ನೀಡಿವೆ. ಈ ಹಿಂದೆ ಆಕ್ರಮಿಸಿಕೊಂಡಿದ್ದ SARS, MERS, Ebola ಮತ್ತು Zika ವೈರಸ್‌ಗಳ ಹಾವಳಿಯ ಸಮಯದಲ್ಲಿ ಗರ್ಭಿಣಿಯರು ದುರ್ಬಲರಾಗಿರುವುದು ಕಂಡುಬಂದಿದೆ ಮತ್ತು ಅದರಿಂದ ದುಷ್ಪರಿನಾಮಗಳನ್ನು ಎದುರಿಸಿದ್ದಾರೆ. ಇಂತಹ ಅಪಾಯಕಾರಿ ಸೋಂಕುಗಳ ಸಂದರ್ಭದಲ್ಲಿ ಎಚ್ಚು ಅಪಾಯಕ್ಕೆ ಸಿಲುಕುವುದು ಗರ್ಭಿಣಿಯರು ಎಂದು ಹಲವಾರು ಅಧ್ಯಯನಗಳು ಘೋಷಿಸಿವೆ.

ಆದಾಗ್ಯೂ, ಇಲ್ಲಿಯವರೆಗೆ ದೆಹಲಿ ಪೊಲೀಸರು ಅಥವಾ ನ್ಯಾಯಾಲಯಗಳು ಸಫೂರಾ ಜಾರ್ಗರ್ ಅವರ ಗರ್ಭಧಾರಣೆಯನ್ನು ಗಮನಿಸಿಲ್ಲ ಹಾಗೂ ಆಕೆಯ ಮತ್ತು ಆಕೆಗೆ ಮಗುವನ್ನು ಅಪಾಯವನ್ನು ಎದುರಿಸಲು ಒತ್ತಾಯಿಸಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights