ಸ್ವಾವಲಂಭಿ ಭಾರತ; ‘ಹಳೆ ಸಿಂಹಕ್ಕೆ ಹೊಸ ಹೆಸರು’ ಎಂದ ಶಶಿ ತರೂರ್

20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವ ಮೋದಿ “ಸ್ವಾವಲಂಬಿ ಭಾರತ”ದ ಬಗ್ಗೆ ಒತ್ತಿಹೇಳಿದ್ದಾರೆ. ಆದರೆ, ಅದರಲ್ಲಿ ಹೊಸತೇನೂ ಇಲ್ಲ,  ಜಾರಿಯಲ್ಲಿದ್ದ “ಮೇಕ್ ಇನ್ ಇಂಡಿಯಾ” ಘೋಷಣೆಯನ್ನೇ ಮೋದಿ ಹೆಸರು ಬದಲಿಸಿ ಹೇಳಿದ್ದಾರೆ ಎಂದು , ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್ ಟೀಕಿಸಿದ್ದಾರೆ

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದಿರುವ ಶಶಿ ತರೂರ್  “ಮೋದಿ ಹಳೆಯ ಜೋಡಿ ಸಿಂಹಗಳನ್ನೇ ಹೊಸ ಹೆಸರಿನಲ್ಲಿ ಮಾರಾಟ ನಡೆಸಿದ್ದಾರೆ. ಇದರೊಡನೆ ಮತ್ತಷ್ಟು ಕನಸುಗಳನ್ನು ಸಹ ರಾಶಿ ಹಾಕಲಾಗಿದೆ” ಎಂದಿದ್ದಾರೆ.

ನಾಲ್ಕನೇ ಹಂತದ ಲಾಕ್‌ಡೌನ್ ಅನ್ನು ಹೊಸ ನಿಯಮಗಳೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸದೊಡನೆ ಜಾರಿಗೆ ತರಲಾಗುತ್ತದೆ. ಮೇ 18ರ ಒಳಗೆ ಇದರ ರೂಪುರೇಷೆಗಳನ್ನು ತಿಳಿಸಲಾಗುತ್ತದೆ ಎಂದು ಪ್ರಧಾನಿ ಘೋಷಿಸಿದ್ದು, ಹೊಸತೇನಿರಲಿದೆ ಎಂದು ಕಾದು ನೋಡಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights