ಕುರಿಗಳ ಸಂತೆಯಲ್ಲಿ 126 ಕುರಿಗಳನ್ನ ಖರೀದಿಸಿದ ಮಾಜಿ ಸ್ಪೀಕರ್….

ಕುರಿಗಳ ಸಂತೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ 126 ಕುರಿಗಳನ್ನ ಖರೀದಿಸಿದ್ದು ಆಶ್ಚರ್ಯ ಮೂಡಿಸಿದೆ.

ಮಾಜಿ ಸ್ಪೀಕರ್, ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಶಾಸಕ, ಶ್ರೀನಿವಾಸಪುರ ಇಂದು ಬೆಳಿಗ್ಗೆ  ಕೋಲಾರ ತಾಲೂಕಿನ ರೋಜರನಹಳ್ಳಿ ಕುರಿಸಂತೆಯಲ್ಲಿ ಕುರಿಗಳ ಖರೀದಿ ಮಾಡಿದ್ದಾರೆ. ಪ್ರತಿ ಬುಧವಾರ ರೋಜರನಹಳ್ಳಿ ಗ್ರಾಮದಲ್ಲಿ ನಡೆಯೊ ಕುರಿಗಳ ಸಂತೆಯಲ್ಲಿ ರೈತರು ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗು ಆಂದ್ರದಿಂದಲೂ ಕುರಿಗಳನ್ನ ತಂದು ಮಾರುವರು.

ರಮೇಶ್ ಕುಮಾರ್ ಖುದ್ದು ಸಂತೆಯಲ್ಲಿ ಕುರಿಗಳನ್ನ ಪರಿಶೀಲಿಸಿ ಖರೀದಿಸಿದ್ದಾರೆ. ಇತ್ತೀಚೆಗೆ ಆಂದ್ರದ ಮದನಪಲ್ಲಿ ಗ್ರಾಮದಲ್ಲಿ ಕುರಿಗಳನ್ನ ಖರೀದಿಸಿದ್ದ ರಮೇಶ್ ಕುಮಾರ್ ಇಂದು ಕೋಲಾರದಲ್ಲಿ ಕುರಿ ಖರೀದಿಸಿದ್ದಾರೆ. ಜೊತೆಗೆ ರೈತರೊಂದಿಗೆ ಸೇರಿ ಕುರಿ ಖರೀದಿ ಮಾಡಿ ಕೆಲಕಾಲ ಸಮಯ ಕಳೆದರು.

ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ 40 ಎಕರೆ ಪ್ರದೇಶದಲ್ಲಿ ಕುರಿ ಮತ್ತು ಕೋಳಿ ಸಾಕಾಣಿಕಾ ಕೇಂದ್ರ ಹಾಗು ಕೃಷಿ ಚಟುವಟಿಕೆ ನಡೆಸ್ತಿರುವ ರಮೇಶ್ ಕುಮಾರ್, ರಮೇಶ್ ಕುಮಾರ್ ಕುರಿ ಖರೀದಿ ಮಾಡುವ ವಿಡಿಯೊ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights