ಸಿದ್ದರಾಮಯ್ಯ, ದಿನೇಶ್ ರಾಜೀನಾಮೆ, ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿ – ಎಸ್.ಆರ್.ಪಾಟೀಲ್

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ವಿಚಾರಕ್ಕೆ ಬಾಗಲಕೋಟೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ, ದಿನೇಶ್ ರಾಜೀನಾಮೆ ನೀಡಿದ್ದಾರೆ. ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ನೈತಿಕತೆ ಹೊತ್ತು ರಾಜೀನಾಮೆ ನೀಡಿದ್ದಾರೆ. ೧೫ರಲ್ಲಿ ೨ ಸ್ಥಾನ ಬಂದಿದ್ದಕ್ಕೆ ಅವರು ನೊಂದುಕೊಂಡಿದ್ದಾರೆ. ಇವರಿಬ್ಬರ ರಾಜೀನಾಮೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿಧಾ೯ರ ತೆಗೆದುಕೊಳ್ತಾರೆ. ಸಿದ್ದರಾಮಯ್ಯರನ್ನ ರಾಜ್ಯದಲ್ಲಿ ಯಾರೂ ಮನವೊಲಿಸೋ ಪ್ರಶ್ನೆ ಬರೋದಿಲ್ಲ.ನಮ್ಮ ಪಕ್ಷದ ಪರಮೋಚ್ಚ ನಾಯಕಿ ಸೋನಿಯಗಾಂಧಿ,ರಾಹುಲ್ ಗಾಂಧಿ ಚಚೆ೯ ಮಾಡ್ತಿದಾರೆ. ನಮ್ಮ ರಾಜ್ಯದ ಎಲ್ಲ ಹಿರಿಯ ನಾಯಕರನ್ನ ಕರೆಯಿಸಿ ಚಚೆ೯ ಮಾಡ್ತಾರೆ ಎಂದರು.
ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಭೇಟಿಯಿಂದ ಬಿಜೆಪಿಗೆ ಬ್ಲ್ಯಾಕ್ ಅನ್ನೋ ಲಖನ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೃದಯ ಚಿಕಿತ್ಸೆ ಹಿನ್ನೆಲೆ ರಮೇಶ್ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಇದಕ್ಕೆ ಬೇರೆ ವಿಶೇಷ ಅಥ೯ ಕಲ್ಪಿಸೋದು ಬೇಡ. ಇಂತಹ ಅನಾರೋಗ್ಯ ಪರಿಸ್ಥಿತಿ ಇದ್ದಾಗ, ಕಾಂಗ್ರೆಸ್ ಬಿಜೆಪಿಯವರ ಮನೆಗೆ, ಬಿಜೆಪಿಯವರು ಕಾಂಗ್ರೆಸ್ ಮನೆಗೆ ಹೋಗೋದು ಸಾಮಾನ್ಯ. ಯಾರದಾದ್ರೂ ಮದುವೆ, ಕಷ್ಟದ ಸಮಯದಲ್ಲಿ ಹೋಗೋದು ಸಾಮಾನ್ಯ. ಇಂತಹದರಲ್ಲಿ ರಾಜಕೀಯ ಬೆರೆಸೋದು ನನಗೆ ಸರಿ ಎನಿಸಲ್ಲ ಎಂದರು.

ಸಿದ್ದರಾಮಯ್ಯ ರಾಜಕಾರಣ ಸಾಕು ಎಂದಿದ್ದಾರೆನ್ನುವ ವಿಚಾರವಾಗಿ ಮಾತನಾಡಿದ ಪಾಟೀಲ್, ಫಲಿತಾಂಶ ಸರಿಯಾಗಿ ಬಂದಿಲ್ಲ. ಹೀಗಾಗಿ ಸಿದ್ದರಾಮಯ್ತ ನೈತಿಕತೆ ಹೊತ್ತು ರಾಜೀನಾಮೆ ನೀಡಿದ್ದಾರೆ‌. ಈ ಹಿಂದೆ ಉತ್ತರ ಕನಾ೯ಟಕದ ಜವಾಬ್ದಾರಿ ಕೊಟ್ಟಿದ್ರು. ಆಗ ರಾಹುಲ್ ಗಾಂಧಿ ಉತ್ತರ ಕನಾ೯ಟಕದಲ್ಲಿ ಹೆಚ್ಚಿನ ಸ್ಥಾನಮಾನ ಗಳಿಸಬೇಕು ಅಂತ ಹೇಳಿದ್ರು‌. ೯೬ರಲ್ಲಿ ೪೦ ಸ್ಥಾನ ನಮ್ಮಲ್ಲಿಂದ ಬಂದವು. ನನ್ನ ಪ್ರಕಾರ ಇನ್ನೂ ೨೦ ಸ್ಥಾನ ಬರಬೇಕಿತ್ತು. ಆಗ ನಾನು ಸಹ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದೆ. ಯಾರೂ ನನಗೆ ಕಾಯಾ೯ದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು ಅಂದಿರಲಿಲ್ಲ.

ಯಡಿಯೂರಪ್ಪ ಸಂಪುಟ ರಚನೆಗೆ ಕಸರತ್ತು ವಿಚಾರ, ಸಕಾ೯ರ ಭದ್ರ ಅನ್ನೋದು ಹಗಲುಗನಸು. ಅನಹ೯ರು ಗೆದ್ದರೆ ಮಂತ್ರಿ ಅಂದಿದ್ರು, ಈಗ ನೋಡಬೇಕು. ಬಿಜೆಪಿಯಲ್ಲಿ ಐದಾರು ಬಾರಿ ಗೆದ್ದ ಶಾಸಕರಿದ್ದಾರೆ..ಅವರ ಪರಿಸ್ಥಿತಿ ಏನು? ಸಂಪುಟ ವಿಸ್ತರಣೆ ಬಳಿಕ ಮೂರುವರೆ ವಷ೯ ಅವರೇ ಆಡಳಿತ ಮಾಡಲಿ, ನಾವೇನು ಮಾಡೋದಿಲ್ಲ. ಅದು ೬ ತಿಂಗಳ, ಒಂದು ವಷ೯, ಒಂದೂವರೆ ವಷ೯ ಇರಿಸಿಕೊಳ್ತಾರೋ ಅವರಿಗೆ ಬಿಟ್ಟಿದ್ದು. ಹಿಂದೆ ಮೂರು ಜನ ಮುಖ್ಯಮಂತ್ರಿ ಆಗಿ ಬಿಜೆಪಿ ಮೂರಾಬಟ್ಟೆ ಆಗಿತ್ತು. ಈಗಲೂ ಕಾದು ನೋಡಿ ಎಂದರು.

ಉಪ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಇತಿಹಾಸದಲ್ಲಿ ಎಲ್ಲ ಉಪ ಚುನಾವಣೆಗಳು ಆಡಳಿತ ಪಕ್ಷದ ಪರವಾಗಿಯೇ ಬಂದಿವೆ. ಬಿಜೆಪಿಯವರು ಗೆಲುವಿಗಾಗಿ ಹಣ,ಹೆಂಡದ ಹೊಳೆ ‌ಹರಿಸಿದ್ದಾರೆ‌. ಮತಕ್ಷೇತ್ರಕ್ಕೆ ೫೦ ರಿಂದ ೧೦೦ ಕೋಟಿವರೆಗೆ ಖಚು೯ ಮಾಡಿದ್ದಾರೆ. ಈ ಆಯಾರಾಮ, ಗಯಾರಾಮ ಸಂಸ್ಕೃತಿ ಪರವಾಗಿ ಜನ್ರು ನಿಣ೯ಯ ಕೊಟ್ಟಿದ್ದಾರೆ. ಅನಹ೯ರಿಗೆ ಪಾಠ ಕಲಿಸ್ತಾರೆ ಅಂತ ಮಾಡಿದ್ವಿ. ಅವಧಿಪೂವ೯ ಚುನಾವಣೆ ಬೇಡ ಅಂತ ಜನ್ರು ಈ ತೀಪು೯ ನೀಡಿರಬಹುದು ಎಂದರು.

ಪೌರತ್ವ ಕಾಯ್ದೆ ವಿಚಾರ, ಇದ್ರಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲವಾದ ವಾತಾವರಣ ಉಂಟಾಗಿದೆ‌. ಈ ಮಸೂದೆಯಿಂದ ದೇಶದಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ. ಶಾಂತಿ ಸೌಹಾದ೯, ಭಾತೃತ್ವದಿಂದ ಬದುಕುವಂತ ಲಕ್ಷಣ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ಪೋಲಿಸರ ದೌಜ೯ನ್ಯದಿಂದ ಇನ್ನಷ್ಟು ವಿಕೋಪಕ್ಕೆ ಹೋಗುವಂತಹ ಪರಿಸ್ಥಿತಿಗೆ ಬಂದಿದೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights