FACT CHECK | ಚುನಾವಣಾ ಭಾಷಣದ ವೇಳೆ ಸುಳ್ಳು ಹೇಳಿದ BJP ಅಭ್ಯರ್ಥಿ ಕಂಗನಾ

2024 ರ ಲೋಕಸಬಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ನಟಿ ಕಂಗನಾ ರಣಾವತ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಚುನಾವನಾ ಪ್ರಚಾರವನ್ನು ಚುರುಕುಗೊಳಿಸಿರುವ ಕಂಗನಾ 2 ಏಪ್ರಿಲ್ 2024 ರಂದು ಮಂಡಿಯ ಬಾಲ್ಹ್ ಕಣಿವೆಯಲ್ಲಿ ಮಾಡಿದ ಚುನಾವಣಾ ಭಾಷಣವೊಂದು ಈಗ ವಿವಾದಕ್ಕೆ ಕಾರಣವಾಗಿದೆ.

 

View this post on Instagram

 

A post shared by Kangana Ranaut (@kanganaranaut)

ಮಹಿಳೆಯರಿಗೆ ಶೇಕಡಾ 30 ರಷ್ಟು ಮೀಸಲಾತಿಯನ್ನು ಖಚಿತಪಡಿಸುವ ‘ಮಹಿಳಾ ಮೀಸಲಾತಿ ಮಸೂದೆ’ಯಿಂದಾಗಿ ನನಗೆ ಟಿಕೆಟ್ ಸಿಕ್ಕಿದೆ ಎನ್ನುವ ಮೂಲಕ,  2024ರ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗಲು ಮಹಿಳಾ ಮೀಸಲಾತಿ ಮಸೂದೆ ಕಾರಣ ಎಂದು ಹೇಳಿದ್ದರು. ಕಂಗನಾ ಹೇಳಿಕೆಯ ಇನ್‌ಸ್ಟಾಗ್ರಾಮ್ ವಿಡಿಯೋವನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ನಟಿ ಕಂಗನಾ ರಣಾವತ್ ಹೇಳಿರುವಂತೆ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಜಾರಿಯಾಗಿದೆಯೇ  ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಾಣಾವತ್ ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆ ತಪ್ಪಾಗಿದೆ. ವಾಸ್ತವವಾಗಿ 2023ರ ಸೆಪ್ಟೆಂಬರ್‌ನಲ್ಲಿ ಸಂಸತ್‌ನಲ್ಲಿ ಪಾಸ್ ಆದ ಮಹಿಳಾ ಮೀಸಲಾತಿ ಮಸೂದೆ ಇನ್ನೂ ಜಾರಿಗೆ ಬಂದಿಲ್ಲ.

ಮಹಿಳಾ ಮೀಸಲಾತಿ ಮಸೂದೆಯ ಕುರಿತಾದ ವಿವರಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 2023 ಸೆಪ್ಟೆಂಬರ್ 20 ರಂದು ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆದ ವರದಿಯನ್ನು DECCAN HERALD ಪ್ರಕಟಿಸಿದೆ. ಈ ವರದಿ ಪ್ರಕಾರ ಕಾಯ್ದೆಯ ಜಾರಿಗೆ ಯಾವುದೇ ದಿನಾಂಕ ನಿಗದಿ ಮಾಡಲಾಗಿಲ್ಲ.

ಈ ಲೇಖನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನೂ ಪ್ರಕಟಿಸಲಾಗಿತ್ತು. ಈ ಕಾಯ್ದೆಯನ್ನು ಎಂದಿನಿಂದ ಜಾರಿಗೆ ತರಲಾಗುತ್ತೆ ಅನ್ನೋದ್ರ ಸೂಕ್ತ ದಿನಾಂಕ ನಿರ್ಧಾರವಾಗಿಲ್ಲ ಅನ್ನೋದನ್ನೇ ಪ್ರಮುಖವಾಗಿ ಬಿಂಬಿಸಲಾಗಿತ್ತು.

ಮೊದಲಿಗೆ ಜನಗಣತಿ ನಡೆಯಬೇಕಿದೆ, ಬಳಿಕ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕಿದೆ. ಆ ಬಳಿಕ ಲೋಕಸಭೆಯಲ್ಲಿ, ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಹಾಗೂ ದಿಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲೂ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಅಮಿತ್ ಶಾ ಸಂಸತ್‌ನಲ್ಲಿ ಹೇಳಿದ್ದರು.

2021ರಲ್ಲಿ ದೇಶಾದ್ಯಂತ ಜನಗಣತಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಜನಗಣತಿ ನಡೆದ ಬಳಿಕ ಒಟ್ಟು ಜನಸಂಖ್ಯೆಯನ್ನು ಗಮನದಲ್ಲಿ ಇರಿಸಿಕೊಂಡು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತದೆ.

20ಸೆಪಂಬರ್ 2023ರಂದು ಸಂಸತ್‌ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಇರುವ ವಿಡಿಯೋದ 31:18 ನಿಮಿಷದಲ್ಲಿ ಅಮಿತ್ ಶಾ ಅವರು ಈ ಕುರಿತು ವಿವರಣೆ ನೀಡುತ್ತಾರೆ.

 

ನೀವು ಮಸೂದೆಗೆ ಬೆಂಬಲ ತೋರಿಸದಿದ್ದರೆ ಮೀಸಲಾತಿ ಜಾರಿ ಆಗಲಿದೆಯೇ ಎಂದು ನಾನು ಕೇಳಲು ಬಯಸುತ್ತೇನೆ. ನೀವು ಈಗ ಬೆಂಬಲಿಸಿದರೆ 2029ರ ನಂತರ ಜಾರಿಗೆ ಬರಲಿದೆ. 2029ಕ್ಕೆ ಅಧಿಕಾರಕ್ಕೆ ಬರುವ ಸರ್ಕಾರವು ಬಯಸಿದರೆ ಅದರಲ್ಲಿ ಬದಲಾವಣೆಯನ್ನೂ ಮಾಡಬಹುದು. ಹೀಗಾಗಿ, ಇದನ್ನು ಮೊದಲ ಹೆಜ್ಜೆ ಎಂದು ಭಾವಿಸಿರಿ. ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ಹೇಳಿದ್ದರು

ಅಮಿತ್ ಶಾ ಅವರ ಈ ಹೇಳಿಕೆ ಮತ್ತು ಮಸೂದೆಯಲ್ಲಿ ಇರುವ ಅಂಶಗಳನ್ನು ಗಮನಿಸಿದರೆ ಈ ಮಸೂದೆ ಇನ್ನೂ ಕಾಯ್ದೆಯಾಗಿ ಜಾರಿಗೆ ಬಂದಿಲ್ಲ. 2029ರ ಒಳಗೆ ಈ ಮಸೂದೆ ಕಾಯ್ದೆಯಾಗುವ ಸಾಧ್ಯತೆ ಕೂಡಾ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಂಗನಾ ರಾಣಾವತ್ ಅವರು ಲೋಕಸಭಾ ಚುನಾವಣೆಯಲ್ಲಿ ತಮಗೆ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗಲು ಮಹಿಳಾ ಮೀಸಲಾತಿ ಮಸೂದೆ ಕಾರಣ ಎಂದು ಹೇಳಿರುವ ಹೇಳಿಕೆ ತಪ್ಪಾಗಿದೆ. ವಾಸ್ತವವಾಗಿ ಮಸೂದೆ ಇನ್ನು ಜಾರಿಯಾಗಿಲ್ಲ. ಹಾಗಾಗಿ ಚುನಾವಣೆಗೂ ಮೊದಲೆ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ ಕಂಗನಾ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ಪ್ರಣಾಳಿಕೆ ದೇಶಕ್ಕೆ ಅಪಾಯಕಾರಿ ಎಂದು ಸುಳ್ಳು ಸುದ್ದಿ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಚುನಾವಣಾ ಭಾಷಣದ ವೇಳೆ ಸುಳ್ಳು ಹೇಳಿದ BJP ಅಭ್ಯರ್ಥಿ ಕಂಗನಾ

  • April 7, 2024 at 5:19 pm
    Permalink

    ಮಸೂದೆ /ಮಿಸಲಾತಿ ಅಂದರೆ ಎನು ಅಂತ ಗೋತ ಬೆತ್ತಲೆ ಗೌರಮ್ಮ ನಿಗೆ

    Reply

Leave a Reply

Your email address will not be published.

Verified by MonsterInsights