FACT CHECK | ಹಿಂದೂ ಯುವತಿಯರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ

ಯುವಕ ಹಾಗೂ ಯುವತಿ ಜೊತೆಯಾಗಿ ಒಂದು ಮನೆಗೆ ನುಗ್ಗಿ ಅಲ್ಲಿದ್ದ ಮತ್ತೊಬ್ಬ ಯುವಕನ ಮೇಲೆ ಹಲ್ಲೆ ನಡೆಸಿ ಕೂಡಾಕಿದ್ದ ಮಹಿಳೆಯರನ್ನು ಬಿಡಿಸಿಕೊಂಡ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಹಿಂದೂ ಮಹಿಳೆಯರನ್ನು ಅರಬ್ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ದೆಹಲಿಯಲ್ಲಿ, ವಿದೇಶಿ ಕಾಲ್ ಸೆಂಟರ್‌ನಲ್ಲಿ ಉದ್ಯೋಗ ನಿಯೋಜನೆಯ ಹೆಸರಿನಲ್ಲಿ, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲವರು ಉದ್ಯೋಗ ಸಲಹಾ ಸಂಸ್ಥೆಯನ್ನು ನಡೆಸುತ್ತಾರೆ, ಅವರು ಉದ್ಯೋಗದ ನೆಪದಲ್ಲಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಮಾತ್ರ ಕರೆದು ಅವರೆಲ್ಲರನ್ನೂ ಅರಬ್ ದೇಶಗಳಿಗೆ ಮಾರಾಟ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜದ ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಅಮಲಿನಲ್ಲಿದ್ದಾರೆ, ಅದರಿಂದಾಗಿ ಇಂದು ದೆಹಲಿಯ ಯುವಕನೊಬ್ಬ 3 ಹುಡುಗಿಯರನ್ನು ಮಾರಾಟ ಮಾಡಲು ತಯಾರಿ ಮಾಡಿದ್ದ!! ಈ ಹುಡುಗಿಯರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವೀಡಿಯೊದ 10 ಸೆಕೆಂಡುಗಳಲ್ಲಿ, ಅವರು “ಈ ವೀಡಿಯೊ ಮನರಂಜನೆಗಾಗಿ ಮಾತ್ರ” ಎಂದು ಬರೆದಿರುವುದನ್ನು ಕಾಣಬಹುದು. ವೈರಲ್ ವಿಡಿಯೋವನ್ನು ಮನರಂಜನೆಗಾಗಿ ತೆಗೆದಿರುವುದು ಎಂದು ಇದರಿಂದ ತಿಳಿಯುತ್ತದೆ.

ಈ ವಿಡಿಯೋ ಎಲ್ಲಿಂದ ಬಂದಿದೆ ಎಂದು ತಿಳಿಯಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಫೆಬ್ರವರಿ 13, 2023 ರಂದು, ವೈರಲ್ ವೀಡಿಯೊದ ಪೂರ್ಣ- ರೆಕಾರ್ಡಿಂಗ್ ಅನ್ನು ಯೂಟ್ಯೂಬ್ ಚಾನೆಲ್ ನವೀನ್ ಜಂಗ್ರಾದಲ್ಲಿ ಬಿಡುಗಡೆ ಮಾಡಿರುವುದು ಲಭ್ಯವಾಗಿದೆ. ಅಲ್ಲದೆ, ಈ ಯೂಟ್ಯೂಬ್ ಚಾನಲ್ ಅನ್ನು ಎಕ್ಸ್‌ಪ್ಲೋರ್ ಮಾಡುವಾಗ ಈ ವಿಡಿಯೋ ಮನರಂಜನೆ ಉದ್ದೇಶಗಳಿಗಾಗಿ ಮಾತ್ರ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ವೈರಲ್ ವೀಡಿಯೊದಲ್ಲಿರುವಂತೆ ಈ ಚಾನೆಲ್​ನಲ್ಲಿ ಅನೇಕ ಮನರಂಜನಾ ವಿಡಿಯೋಗಳು ಇವೆ.

https://www.youtube.com/watch?v=gkcMa3negiU

ವಿದೇಶದಲ್ಲಿ ಕೆಲಸ ಮಾಡುವಂತೆ ನಟಿಸಿ ಅರಬ್ ದೇಶಗಳಲ್ಲಿ ಹಿಂದೂ ಮಹಿಳೆಯರನ್ನು ಮಾರಾಟ ಮಾಡುವುದನ್ನು ತಡೆದ ಹಿಂದೂ ಯುವಕನ ವೈರಲ್ ವೀಡಿಯೊವನ್ನು ನಿಜವಾಗಿಯೂ ಮನರಂಜನೆಗಾಗಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮನರಂಜನೆಯ ಉದ್ದೇಶಕ್ಕೆ ಸ್ಕ್ರಿಪ್ಟ್‌ ಮಾಡಿ ಹಂಚಿಕೊಳ್ಳಲಾದ ವಿಡಿಯೋವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights