ರಾಜಸ್ಥಾನ: 50 ನಗರಸಭೆಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರ; 37ಕ್ಕೆ ಕುಸಿದ BJP

ರಾಜಸ್ಥಾನದ 90 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 48 ನಗರ ಸಭೆಗಳಲ್ಲಿ ಕಾಂಗ್ರೆಸ್‌ ಅಡಳಿತ ಸ್ಥಾಪಿಸಿದ್ದು, ಬಿಜೆಪಿ 37 ಸಂಸ್ಥೆಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಬಿಜೆಪಿ ಕಳೆದ 2016ರ ಚುನಾವಣೆಯಲ್ಲಿ 60 ಸಂಸ್ಥೆಗಳಲ್ಲಿ ಅಧಿಕಾರ ರಚಿಸಿತ್ತು.

ಮೂರು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಉಳಿದ 87 ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದೆ.

ಕಾಂಗ್ರೆಸ್‌-ಬಿಜೆಪಿಯಂತಹ ಪ್ರಮುಖ ಪಕ್ಷಗಳ ಹೊರತಾಗಿಯೂ ಮೂರು ಸ್ವತಂತ್ರ ಅಭ್ಯರ್ಥಿಗಳು, ರಾಷ್ಟ್ರೀಯ ಲೋಕ್ತಂತ್ರಿಕ್ ಪಕ್ಷ ಮತ್ತು ಎನ್‌ಸಿಪಿಯಿಂದ ತಲಾ ಒಬ್ಬರು ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

“ರಾಜ್ಯದ 90 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವು ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿದೆ. ಒಟ್ಟು 90 ರಲ್ಲಿ ಕಾಂಗ್ರೆಸ್ ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ 50 ಸ್ಥಾನಗಳನ್ನು ಗೆದ್ದಿದೆ ಮತ್ತು ಕಳೆದ ಬಾರಿ 60 ಸ್ಥಂಸ್ಥೆಗಳಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಕೇವಲ 37 ಸ್ಥಾನಕ್ಕೆ ಕುಸಿದಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ನ ಬಲವನ್ನು ಹೆಚ್ಚಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಹೇಳಿದ್ದಾರೆ.

ಪಕ್ಷ ಉತ್ತಮ ಫಲಿತಾಂಶಗಳನ್ನು ಗಳಿಸಿದೆ. ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂಬುದನ್ನು ಜನರು ತೋರಿಸಿದ್ದಾರೆ. ಮುಂದಿನ ಗೆಲುವಿನ ಬಗ್ಗೆ ಇದ್ದ ಎಲ್ಲಾ ಅನುಮಾನಗಳನ್ನು ಮತದಾರರು ತೊಡೆದುಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದ 20 ಜಿಲ್ಲೆಗಳಲ್ಲಿ 90 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಒಟ್ಟು 3,034 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 1,194 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 1,146 ಮತ್ತು ಸ್ವತಂತ್ರ ಅಭ್ಯರ್ಥಿಗಳು 631 ಸ್ಥಾನಗಳನ್ನು ಗೆದ್ದಿದ್ದರು.  ಇದಲ್ಲದೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು 46, ರಾಷ್ಟ್ರೀಯ ಲೋಕ್ತಂತ್ರಿಕ್ ಪಕ್ಷ 13, ಸಿಪಿಐ (ಎಂ) 3 ಮತ್ತು ಬಹುಜನ ಸಮಾಜ ಪಕ್ಷದ ಒಂದು ವಾರ್ಡ್ ಗೆದ್ದಿತ್ತು.

ಇದನ್ನೂ ಓದಿ: ರಾಜಸ್ಥಾನ BJP ಯಾತ್ರಾ ರಾಜಕೀಯ: ವಸುಂಧರಾ ರಾಜೇ ಮತ್ತು ಸತೀಶ್ ಪೂನಿಯಾ ನಡುವೆ ನಾಯಕತ್ವ ಸೆಣೆಸಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights