ಕೃಷಿ ಕಾಯ್ದೆಗೆ ಮತ್ತೊಂದು ಬಲಿ: ಟಿಕ್ರಿ ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಶವ ಪತ್ತೆ!

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಹರಿಯಾಣದ ರೈತರೊಬ್ಬರು ಟಿಕ್ರಿ ಗಡಿಯ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಕ್ರಿ ಗಡಿಯ ಪ್ರತಿಭಟನಾ ಸ್ಥಳದಿಂದ 02 ಕಿ.ಮೀ ದೂರದಲ್ಲಿದ್ದ ಉದ್ಯಾನವನದ ಮರವೊಂದರ್ಲಿ ನೇಣು ಬಿಗಿದು ಸ್ಥಿತಿಯಲ್ಲಿ 52 ವರ್ಷದ ರೈತನ ಶವ ಪತ್ತೆಯಾಗಿದ್ದು, ಅವರ ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕರಮ್ವೀರ್ ಸಿಂಗ್ ಅವರು ಹರಿಯಾಣದ ಜಿಂದ್‌ನ ಹಳ್ಳಿಯವರು ಎಂದು ಗುರುತಿಸಲಾಗಿದೆ.

“ಆತ್ಮೀಯ ರೈತ ಸಹೋದರರೇ, ಮೋದಿ ಸರ್ಕಾರವು ಒಂದಾದ ಮೇಲೊಂದು ದಿನಾಂಕವನ್ನು ನೀಡುತ್ತಿದೆ. ಈ ರೈತ ವಿರೋಧಿ ಕೃಷಿ ಕಾನೂನುಗಳನ್ನು ಯಾವಾಗ ಹಿಂದಕ್ಕೆ ಪಡೆಯುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ” ಎಂದು ಅವರು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎಂದು ಬರದ್ದೂರ್‌ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಜಯ್ ಕುಮಾರ್ ತಿಳಿಸಿದ್ದಾರೆ.

ಹದಿನೈದು ದಿನಗಳ ಹಿಂದೆ, ಹರಿಯಾಣದ ಮತ್ತೊಬ್ಬ ರೈತ ಟಿಕ್ರಿ ಗಡಿಯಲ್ಲಿ ವಿಷಕಾರಿ ವಸ್ತುವನ್ನು ಸೇವಿಸಿದ್ದರು. ಅವರನ್ನು ಆಸ್ಪತ್ರೆಗೆ ಕೊಂಡೋಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಡಿಸೆಂಬರ್‌ನಲ್ಲಿ, ಟಿಕ್ರಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಪಂಜಾಬ್‌ನ ವಕೀಲರೊಬ್ಬರು ರೈತ ಹೋರಾಟ ಬೆಂಬಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಈ ಹಿಂದೆ, ಸಿಖ್ ಧರ್ಮಗುರು ಸಂತ ರಾಮ್ ಸಿಂಗ್ ಅವರು ರೈತರ ನೋವನ್ನು ಸಹಿಸಲಾರೆ ಎಂದು ಶೂಟ್‌ ಮಾಡಿಕೊಂಡು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದರು.

ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ನೀತಿಗಳು ವಿರುದ್ದ ರೈತರು ಪ್ರತಿಭಟನೆ ಆರಂಭಿಸಿದ ನಂತರ ನೂರಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ಧಾರೆ. ಅದರೆ, ಸರ್ಕಾರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ತಂತ್ರ ಎಣೆಯುತ್ತಿದೆ ಎಂದು ರೈತ ಮುಖಂಡರು ಅರೋಪಸಿದ್ದಾರೆ.

ಇದನ್ನೂ ಓದಿ: 50 ಸಾವಿರ ಜನರ ದಾದ್ರಿ ಮಹಾಪಂಚಾಯತ್‌; ರೈತರು ಕೈಗೊಂಡ 5 ನಿರ್ಣಯಗಳು ಹೀಗಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights