ಗ್ರಾಮ ಪಂ.ನಲ್ಲೂ ಆಪರೇಷನ್ ಕಮಲ: ಬೆಳಿಗ್ಗೆ BJP ಸೇರಿ ಸಂಜೆ ಕಾಂಗ್ರೆಸ್‌ಗೆ ವಾಪಸ್‌!

ಬಂಟ್ವಾಳ ತಾಲ್ಲೂಕಿನ ವೀರಕಂಭ ಗ್ರಾಮ ಪಂಚಾಯತ್‍ನ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಬೆಳಗ್ಗೆ ಬಿಜೆಪಿ ಸೇರಿದ್ದು, ಸಂಜೆ ವೇಳೆಗೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಈ ಮೂಲಕ ಅಡಿಯಿಂದ ಮುಡಿವರೆಗೂ ಅಕ್ರಮದ ಕೂಸಾಗಿರುವ ಬಿಜೆಪಿಗರ ರಾಜಧರ್ಮದ ಮಾತು ಮತ್ತೆ ನಗೆಪಾಟಲಿಕೆಗೆ ಗುರಿಯಾಗಿದೆ ಎಂದು ಕಾಂಗ್ರೆಸ್‌ ಮಾಜಿ ಸಚಿವ ಬಿ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ವೀರಕಂಭ ಗ್ರಾಮ ಪಂಚಾಯತ್‍ಗೆ ಕಾಂಗ್ರೆಸ್‌ ಬೆಂಬಲದಿಂದ ಆಯ್ಕೆಯಾಗಿದ್ದ ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯೆ ಲಲಿತಾ ಎಂಬುವವರು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ನೇತೃತ್ವದಲ್ಲಿ ಬಂಟ್ವಾಳದ ಬಿಜೆಪಿಗೆ ಸೇಪರ್ಡೆಯಾಗಿದ್ದರು. ಆದರೆ, ಆದರೆ ಸಂಜೆ ವೇಳೆಗೆ ಅವರು ಕಾಂಗ್ರೆಸ್‌ಗೆ ಮರಳಿದ್ದಾರೆ.

ವೀರಕಂಭ ಗ್ರಾಮ ಪಂಚಾಯತ್‍ನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ 07 ಸ್ಥಾನಗಳನ್ನು ಗೆದ್ದುಕೊಂಡು ಸಮಪಾಲು ಪಡೆದಿದ್ದವು. ಇದರಿಂದಾಗಿ ಅಧಿಕಾರ ಯಾರಿಗೆ ಎಂಬುದು ಕಗ್ಗಂಟಾಗಿತ್ತು. ಅಧಿಕಾರಕ್ಕಾಗಿ ಆಪರೇಷನ್‌ ಕಮಪದ ಮೊರೆಹೋಗಿದ್ದ ಬಿಜೆಪಿಗರು ಬಲವಂತವಾಗಿ ಲಲಿತಾ ಅವರನ್ನು ಬಿಜೆಪಿಗೆ ಸೇರಿಸಿದ್ದರು.

congress ensuddi

ಬೆಜೆಪಿಗರ ಹೈಜಾಕ್‌ ಆಟಕ್ಕೆ ಮಣಿದು ಬಿಜೆಪಿ ಸೇರಿದ ಗ್ರಾಮ ಪಂಚಾಯತ್‌ ಸದಸ್ಯೆ ಸಂಜೆ ವೇಳೆಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಿಬಂದಿದ್ದಾರೆ.

ಮಾತು ಮಾತಿಗೂ ರಾಜಧರ್ಮದ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ಇದೀಗ ಪಂಚಾಯತ್ ಅಧಿಕಾರಕ್ಕಾಗಿ ವಾಮಮಾರ್ಗದ ಮೂಲಕ ಕಾಂಗ್ರೆಸ್ ಬೆಂಬಲಿತರನ್ನು ಬಲವಂತದಿಂದ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಧರ್ಮದ ಭಾಷಣ ಮಾಡುವ ಅವರು ಅಧಿಕಾರಕ್ಕಾಗಿ ಅಕ್ರಮ, ಅನ್ಯಾಯ, ಅನೈತಿಕ, ಅಪವಿತ್ರ ರಾಜಕೀಯ ನಡೆಸುತ್ತಿದ್ದಾರೆ. ನೇರವಾಗಿ ಜನಬೆಂಬಲ ಪಡೆದುಕೊಂಡು ಅಧಿಕಾರ ನಡೆಸುವ ಎಲ್ಲ ನೈತಿಕತೆಯನ್ನೂ ಬಿಜೆಪಿ ಕಳೆದು ಕೊಂಡಿದೆ ಎಂದು ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BJPಗೆ ಕೌಂಟರ್‌ ಕೊಡಲು 05 ಲಕ್ಷ ಸೋಷಿಯಲ್‌ ಮೀಡಿಯಾ ಕಾರ್ಯಕರ್ತರ ನೇಮಕಕ್ಕೆ ಮುಂದಾದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.