FACT CHECK | ಭಾರತ-ಪಾಕ್ ಯುದ್ದದ ದೃಶ್ಯಗಳು ಎಂದು ಹತ್ತಾರು ನಕಲಿ ವಿಡಿಯೋ ವೈರಲ್

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ದದ ಭೀಕರ ದೃಶ್ಯಗಳು ಎಂದು ಪ್ರತಿಪಾದಿಸಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಈ ವಿಡಿಯೋಗಳಲ್ಲಿ ಎಷ್ಟು ವಾಸ್ತವ ಎಷ್ಟು ಸುಳ್ಳು ಎಂದು ತಿಳಿಯದೆ ಎಲ್ಲವನ್ನು ಹಂಚಿಕೊಳ್ಳುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕೊಂಚ ಪರಿಶೀಲಿಸುವುದು ಒಳಿತು. ಇವುಗಳ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಹಲವು ಸುದ್ದಿಗಳನ್ನು ಪರಿಶೀಲಿಸಿ ಸುಳ್ಳು ಎಂದು ಘೋಷಿಸಿದೆ.

ಫೇಕ್ ವಿಡಿಯೋ – 1

ಏಪ್ರಿಲ್ 27 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಭಾರತೀಯ ಸೈನಿಕರು ತಮ್ಮ ಕೆಲಸಗಳನ್ನು ತ್ಯಜಿಸಿ ಅಳುತ್ತಿದ್ದಾರೆ ಎಂದು ವಿಡಿಯೋವೊಂದರಲ್ಲಿ ಹೇಳಲಾಗುತ್ತಿದೆ. ಆದರೆ, ಇದು ಭಾರತೀಯ ಸೇನೆಗೆ ಸಂಬಂಧಿಸಿಲ್ಲ. ಖಾಸಗಿ ರಕ್ಷಣಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾದಾಗ ಸಂಭ್ರಮಿಸುತ್ತಿರುವ ವಿಡಿಯೋ ಎಂದು ತಿಳಿದುಬಂದಿದೆ.

ಖಾಸಗಿ ರಕ್ಷಣಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾದ ಸಂಭ್ರಮವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವೀಡಿಯೊದಲ್ಲಿರುವ ಯುವಕರು ತಮ್ಮ ಯಶಸ್ವಿ ನೇಮಕಾತಿಯ ಸುದ್ದಿಯನ್ನು ಕೇಳಿ ಸಂತೋಷದಿಂದ ಭಾವುಕರಾದರು ಎಂದು ವರದಿಯಾಗಿದೆ.

ಫೇಕ್ ವಿಡಿಯೋ-2

ಜೈಪುರ ವಿಮಾನ ನಿಲ್ದಾಣದಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂಬ ಹೇಳಿಕೆಗಳು ಹರಡುತ್ತಿವೆ. ಆದರೆ, ಈ ಹೇಳಿಕೆಗಳು ನಕಲಿ ಆಗಿದೆ. ಜೈಪುರದ ಜಿಲ್ಲಾಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಭಾರತೀಯ ಅಂಚೆಯ ಮೇಲೆ ದಾಳಿ ನಡೆಸಲಾಗುವುದು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಈ ಪ್ರತಿಪಾದನೆ ನಕಲಿ. ಇದು ಹಳೆಯ ವಿಡಿಯೋ ಆಗಿದೆ. ಈ ವಿಡಿಯೋವನ್ನು ಮೂಲತಃ ಯೂಟ್ಯೂಬ್‌ನಲ್ಲಿ 15 ನವೆಂಬರ್ 2020 ರಂದು ಅಪ್‌ಲೋಡ್ ಮಾಡಲಾಗಿದೆ.

ಫೇಕ್ ವಿಡಿಯೋ -3

ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಸೆರೆಹಿಡಿಯಲ್ಪಟ್ಟಿದೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಪರವಾದ ಸಾಮಾಜಿಕ ಮಾಧ್ಯಮವು ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಅವರನ್ನು ಪಾಕಿಸ್ತಾನದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳುತ್ತಿದೆ. ಆದರೆ, ಇದು ಸುಳ್ಳು ಪ್ರತಿಪಾದನೆ.

ಫೇಕ್ ವಿಡಿಯೋ – 4

ಹಿಮಾಲಯದ ವಿವಿಧ ಪ್ರದೇಶಗಳಲ್ಲಿ ಮೂರು ಫೈಟರ್ ಜೆಟ್‌ಗಳು ಪತನಗೊಂಡಿವೆ ಎಂದು ಹಲವಾರು ಪಾಕಿಸ್ತಾನ ಪರವಾದ ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪಾಗಿ ಹೇಳುತ್ತಿವೆ. ಆದರೆ, ವೈರಲ್ ಆಗುತ್ತಿರುವ ಈ ಚಿತ್ರವು ಹಳೆಯದಾಗಿದ್ದು, 2016 ರ ಹಿಂದಿನದು ಎಂಬುದು ತಿಳಿದುಬಂದಿದೆ. ಹಿಮಾಲಯದಲ್ಲಿ ಮೂರು IAF ಜೆಟ್‌ಗಳು ಪತನಗೊಂಡಿಲ್ಲ.

ಫೇಕ್‌ ವಿಡಿಯೋ-5

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫೇಸ್‌ಬುಕ್ ಪೋಸ್ಟ್ ಮೂಲಕವೂ ನಕಲಿ ಸುದ್ದಿ ಹರಡಲಾಗಿದೆ. ಪಾಕಿಸ್ತಾನದ ಸೈಬರ್ ದಾಳಿಯ ವಿಷಯವನ್ನು ಬರೆಯಲಾಗಿದೆ ಎಂದು ಹೇಳಲಾಯಿತು. ಆದರೆ ವಾಸ್ತವವೆಂದರೆ . ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಜಿತ್ ದೋವಲ್ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಹೊಂದಿಲ್ಲ.

ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹತ್ತಾರು ಸುಳ್ಳು ಮತ್ತು ನಕಲಿ ವಿಡಿಯೋಗಳು ಪ್ರಸಾರವಾಗುತ್ತಿದ್ದು, ಇವುಗಳನ್ನು ಪರಿಶೀಲಿಸದೆ ಹಂಚಿಕೊಳ್ಳಲು ಹೋಗಬೇಡಿ. ಸಾಲದಕ್ಕೆ ಮುಖ್ಯವಾಹಿನಿ  ಮಾಧ್ಯಮಗಳೂ ಕೂಡ ಇಂತಹ ವಿಡಿಯೋಗಳನ್ನೆ ಅವಲಂಭಿಸಿರುವುದು ವಿಪರ್ಯಾಸ.

ಕೃಪೆ: PIB

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಎಲ್‌ಪಿಜಿ ಸಿಲಿಂಡರ್ ಸ್ಪೋಟದ ದೃಶ್ಯಗಳನ್ನು ಭಾರತ ಮತ್ತು ಪಾಕ್ ಯುದ್ದದ ವಿಡಿಯೋ ಎಂದು ತಪ್ಪಾಗಿ ಹಂಚಿಕೆ


 

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights