ನೇಪಾಳ-ಶ್ರೀಲಂಕಾದಲ್ಲಿಯೂ BJP ಸರ್ಕಾರ ರಚಿಸಲು ಅಮಿತ್‌ ಶಾ ಯೋಜಿಸಿದ್ದಾರೆ: ತ್ರಿಪುರ ಸಿಎಂ

ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿ ಸರ್ಕಾರಗಳನ್ನು ಸ್ಥಾಪಿಸುವ ಯೋಜನೆ ಗೃಹ ಸಚಿವ ಅಮಿತ್ ಶಾ ಅವರಲ್ಲಿದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇಬ್ ಹೇಳಿದ್ದಾರೆ.

ತ್ರಿಪುರದಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಷಾ ಅವರು ಭಾರತದಲ್ಲಿ ಎಲ್ಲ ರಾಜ್ಯಗಳನ್ನು ಗೆದ್ದ ನಂತರ ಪಕ್ಷವನ್ನು ನೆರೆಯ ರಾಷ್ಟ್ರಗಳಲ್ಲಿ ಬೆಳೆಸಲು ಮತ್ತು ಸರ್ಕಾರಗಳನ್ನು ರಚಿಸಲು ಬಯಸಿದ್ದಾರೆ ಎಂದು ದೇಬ್ ಹೇಳಿದ್ದಾರೆ.

ಹಾಗಾಗಿ, ಅಮಿತ್ ಶಾ ಅವರು ನೇಪಾಳ ಮತ್ತು ಶ್ರೀಲಂಕಾದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸುವ ಯೋಜನೆ ಹೊಂದಿದ್ದಾರೆ ಎಂದು ಬಿಪ್ಲಬ್ ದೇಬ್ ಹೇಳಿದ್ದಾರೆ.

2018ರ ತ್ರಿಪುರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಅತಿಥಿ ಗೃಹದಲ್ಲಿ ಅಜಯ್ ಜಮ್ವಾಲ್ (ಬಿಜೆಪಿಯ ಈಶಾನ್ಯ ವಲಯ ಕಾರ್ಯದರ್ಶಿ) ಅವರು ಬಿಜೆಪಿ ಹಲವು ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ ಎಂದು ಹೇಳಿದ್ದರು. ಇದಕ್ಕೆ ಉತ್ತರವಾಗಿ ಅಮಿತ್ ಶಾ ಅವರು, ಶ್ರೀಲಂಕಾ ಮತ್ತು ನೇಪಾಳ ರಾಷ್ಟ್ರಗಳಲ್ಲೂ ನಾವು ಅಧಿಕಾರ ಹೊಂದಬೇಕು ಎಂದು ಹೇಳಿದ್ದರು ಎಂದು ಬಿಪ್ಲಬ್ ಹೇಳಿದ್ದಾರೆ.

ತ್ರಿಪುರ ಮುಖ್ಯಮಂತ್ರಿ ದೇವ್‌ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗ್ರೇಟಾ ಥನ್ಬರ್ಗ್ “ಟೂಲ್ಕಿಟ್” ಪ್ರಕರಣ : ಬೆಂಗಳೂರಿನ ಯುವ ಹೋರಾಟಗಾರ್ತಿ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights