08 ದಿನದ ನವಜಾತ ಶಿಶುಗಳನ್ನು ಹೊತ್ತೊಯ್ದ ಕೋತಿಗಳು; ಅಸುನೀಗಿದ ಶಿಶು!

ಮನೆಯೊಳಕ್ಕೆ ನುಗ್ಗಿದ ಮಂಗಗಳು 08 ದಿನ ತುಂಬಿದ್ದ ಎರಡು ಮಗುಗಳನ್ನು ಎಳೆದೊಯ್ದಿದ್ದು, ಒಂದು ಮಗು ಸಾವನ್ನಪ್ಪಿದ್ದು, ಮತ್ತೊಂದು ಮಗುವನ್ನು ರಕ್ಷಿಸಲಾಗಿರುವ ಘಟನೆ ಕೇರಳದ ತಂಜಾವೂರಿನಲ್ಲಿ ನಡೆದಿದೆ.

ತಂಜಾವೂರಿನ ಅರಮನೆ ಬಳಿಯ ಮೇಳ ಅಲಂಗಂನಲ್ಲಿರುವ ಮೇಲ್ಚಾವಣಿ ತೆರೆದ ಮನೆಯೊಳಗೆ ನುಗ್ಗಿದ ಕೋತಿಗಳು , ಮಲಗಿದ್ದ ಶಿಶುಗಳನ್ನು ಹೊತ್ತೊಯ್ದಿವೆ. ಮಗುಗಳ ಅಳುವಿನ ಶಬ್ದ ಕೇಳಿ ಓಡಿ ಬಂದ ಮಗುಗಳ ತಾಯಿ ಭುವನೇಶ್ವರಿಯವರು ಶಿಶುಗಳ ರಕ್ಷಣೆಗಾಗಿ ನೆರೆಹೊರೆಯವರನ್ನು ಕೂಗಿದ್ದಾರೆ.

ಸ್ಥಳೀಯರು ಕೋತಿಯನ್ನು ಬೆನ್ನಟ್ಟಿ ಹೋದಾಗ ಒಂದು ಮಗುವನ್ನು ಕೈಬಿಟ್ಟು, ಇನ್ನೊಂದು ಮಗುವನ್ನು ಹೊತ್ತುಕೊಂಡು ಹೋಗಿವೆ. ಕೂಡಲೇ ಆ ಮಗುವನ್ನು ರಕ್ಷಿಸಿದ ಸ್ಥಳೀಯರು ಇನ್ನೊಂದು ಮಗುವಿನ ರಕ್ಷಣೆಗಾಗಿ ಹುಡುಕಾಡಿದ್ದಾರೆ. ಆ ವೇಳೆಗೆ 2ನೇ ಮಗು ನೀರಿನಲ್ಲಿ ಬಿದ್ದು ಸಾವನ್ನಪ್ಪಿದೆ.

ಕಳೆದ ವಾರವಷ್ಟೇ ಭುವನೇಶ್ವರಿ ಅವರು ಅವಳಿ ಮಕ್ಕಳಿಗೆ ಜನ್ಮನೀಡಿದ್ದರು. ಅವರ ಪತಿ ರಾಜಾ ಕೆಲಸಕ್ಕೆ ಹೋಗಿದ್ದರಂತೆ. ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ನಿತ್ಯ ವರದಿಯಾಗುತ್ತಿದೆ. ಇಷ್ಟು ದಿನ ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿದ್ದ ಮಂಗಗಳು ಇದೀಗ ಮಗುವನ್ನು ಹೊತ್ತೊಯ್ದಿರುವುದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಮಂಗಗಳ ಉಪಟಳ ಹೆಚ್ಚಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಭೀಕರ ಅಪಘಾತ: ಅಬಕಾರಿ ಅಧಿಕಾರಿ ಸೇರಿ ನಾಲ್ವರ ದಾರುಣ ಸಾವು!

Spread the love

Leave a Reply

Your email address will not be published. Required fields are marked *