ಟೂಲ್‌ಕಿಟ್‌ ಪ್ರರಕಣ: ರೈತ ಹೋರಾಟವನ್ನು ಬೆಂಬಲಿಸಿದ್ದ ಪರಿಸರ ಕಾರ್ಯಕರ್ತೆಗೆ ಜಾಮೀನು!

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ದೆಹಲಿಯ ಸೆಷನ್ ಕೋರ್ಟ್ ಇಂದು ಜಾಮೀನು ನೀಡಿದೆ.

ಫೆಬ್ರವರಿ 20 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. 1 ಲಕ್ಷ ರೂ ಗಳ ಎರಡು ಬಾಂಡ್‌ನೊಂದಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಫೆಬ್ರವರಿ 13 ರಂದು ದಿಶಾ ರವಿ ಅವರನ್ನು ಬೆಂಗಳೂರಿನ ಅವರ ನಿವಾಸದ ಬಳಿ ಬಂಧಿಸಲಾಗಿತ್ತು.

“ಗ್ರೇಟಾ ಥನ್‌ಬರ್ಗ್ ಟೂಲ್‌ಕಿಟ್ ಆರೋಪದಲ್ಲಿ ಬಂಧಿಸಲಾಗಿರುವ ದಿಶಾ ರವಿಗೆ ಜಾಮೀನು ನೀಡುವುದನ್ನು ತಡೆಯುತ್ತಿರುವ ಕಾನೂನು ಯಾವುದು? ದಿಶಾ ರವಿ ವಿರುದ್ಧದ ಆರೋಪಗಳು ಯಾವುವು? ಆಕೆಯ ವಿರುದ್ಧದ ಸಾಕ್ಷ್ಯಗಳು ಯಾವುವು?” ಎಂಬ ಮೂರು ಪ್ರಶ್ನೆಗಳನ್ನು ನ್ಯಾಯಾಲಯ ಪೊಲೀಸರಿಗೆ ಕೇಳಿತ್ತು.

ಪಟಿಯಾಲ ಹೌಸ್‌ ಕೋರ್ಟ್ ಕಾಂಪ್ಲೆಕ್ಸ್‌ನ ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಧರ್ಮೇಂದರ್ ರಾಣಾರವರು ಫೆಬ್ರವರಿ 20 ರಂದು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಮುಂದೂಡಿದ್ದರು.

Read Also: ದೆಹಲಿ ಹಿಂಸಾಚಾರ ಭಾಷಣ: ಅಗತ್ಯ ಬಿದ್ದರೆ ಈಗಲೂ ಹಾಗೇ ಮಾಡುತ್ತೇವೆ: ಬಿಜೆಪಿ ನಾಯಕ ಕಪಿಲ್ ಮಿಶ್ರಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights