ಪಂಚಮಸಾಲಿ ಹೋರಾಟ: ಪ್ರಶ್ನಾತೀತ ಲಿಂಗಾಯತ ನಾಯಕ ಬಿಎಸ್‌ವೈಗೆ ಬಿಕ್ಕಟ್ಟು!

ಕರ್ನಾಟಕದಲ್ಲಿ ಕನಿಷ್ಠ ಎಂಟು ವಿವಿಧ ಸಮುದಾಯಗಳು ವಿವಿಧ ವರ್ಗಗಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿವೆ. ಈ ಮಧ್ಯೆ ಪಂಚಮಸಾಲಿ ಲಿಂಗಾಯತರು ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯೊಂದಿಗೆ ನಡೆಸುತ್ತಿರವು ಆಂದೋಲನವು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಹೆಚ್ಚಿನ ಮುಜುಗರವನ್ನುಂಟು ಮಾಡಿದೆ.

ಹೆಚ್ಚಿನ ಮೀಸಲಾತಿ ಪಡೆದುಕೊಳ್ಳಲು ಪಂಚಮಸಾಲಿಯನ್ನು ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆಂದೋಲನದ ಸಮಯ, ಒತ್ತಡ, ಭಾವಾತಿರೇಕದ ತೀವ್ರತೆಯು ಅತಿ ಹೆಚ್ಚು ಪರಿಣಾಮ ಬೀರುವುದು ಲಿಂಗಾಯತ ನಾಯಕ ಯಡಿಯೂರಪ್ಪ ಮೇಲೆ ಮಾತ್ರ.

“ದಶಕಗಳಿಂದ ಯಡಿಯೂರಪ್ಪ ಅವರು ಪಂಚಮಸಾಲಿ ಲಿಂಗಾಯತರನ್ನು ಮತಬ್ಯಾಂಕ್‌ ಆಗಿ ಬಳಿಸಿಕೊಂಡಿದ್ದಾರೆ. ಆದರೆ, ಈ ಸಮುದಾಯ ಒಬ್ಬರು ಅಥವಾ ಇಬ್ಬರನ್ನು ಮಂತ್ರಿಗಳಾಗಿ ಮಾಡುವುದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಅವರು ನಮಗೆ ಮೀಸಲಾತಿ ಸ್ಥಾನಮಾನವನ್ನು ನೀಡಲಿ ಮತ್ತು ಸಮುದಾಯಕ್ಕೆ ಅವರ ಬಾಕಿ ಹಣವನ್ನು ಮರುಪಾವತಿಸಬೇಕು. ನೀವು ನಮ್ಮನ್ನು ಓಟಿಗಾಗಿ ಬಳಸಿಕೊಂಡಿದ್ದರೆ, ನೀವು ನಮಗೆ ನೀಡಲಾಬೇಕಾದ ಸೌಲತ್ತುಗಳು ಹಾಗೂ ಬಾಕಿಗಳನ್ನು ಸಹ ನೀವು ತೀರಿಸಬೇಕು.” ಈ ಸಮುದಾಯಕ್ಕೆ 2ಎ ವರ್ಗದ ಮೀಸಲಾತಿ  ನೀಡಬೇಕು ಎಂದು ಕುಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪಂಚಮಾಸಲಿ ಸಮುದಾಯ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯನ್ನು
ಮುರುಗೇಶ್ ನಿರಣಿ ಮತ್ತು ಸಿಸಿ ಪಾಟೀಲ್ ಅವರಂತಹ ಸಚಿವರು ಸೇರಿದಂತೆ ಬಿಜೆಪಿ ನಾಯಕರಿಗೆ ರಾಜಕೀಯ ಲಾಭ ಮಾಡಿಕೊಟ್ಟ ಮತ್ತು ಬಿಜೆಪಿಯನ್ನು ಬಲವಾಗಿ ಬೆಂಬಲಿಸಿದ ಸಮುದಾಯವನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರು ಈ ಪ್ರಚೋದನೆಯನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರು ಮೀಸಲಾತಿಯನ್ನು ಬದಲಾಯಿಸಲು ನಿರ್ದಿಷ್ಟ ಸಮಯದ ಲಿಖಿತ ಆಶ್ವಾಸನೆಯನ್ನು ನೀಡಬೇಕು ಎಂದು ಪಂಚಮಸಾಲಿ ಸಮುದಾಯ ಕೇಳಿದೆ. ಇಲ್ಲದಿದ್ದರೆ, ಅನಿರ್ದಿಷ್ಟಾವಧಿಯ ಉಪವಾಸ ಆರಂಭಿಸುವುದಾಗಿ ಬೆದರಿಕೆ ಹಾಕಿದೆ. ಆದರೆ.  “ಆರ್ಟಿಕಲ್ 342 ರ ಅಡಿಯಲ್ಲಿ ಮತ್ತು ಅನೇಕ ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ, ಯಾವುದೇ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನವನ್ನು ನೀಡಲು ಸರ್ಕಾರವು ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ. ವಿನಂತಿಯನ್ನು ಅರೆ-ನ್ಯಾಯಾಂಗ ಪ್ರಾಧಿಕಾರವಾದ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಬೇಕು. ಆಯೋಗದ ಮೇಲೆ  ಯಾರೂ ಪ್ರಭಾವ ಬೀರಲು ಸಾಧ್ಯವಿಲ್ಲ, ”ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ಪಂಚಮಾಸಲಿ ಲಿಂಗಾಯತನೂ ಆದ ಮೋಹನ್ ಲಿಂಬಿಕೈ ಹೇಳಿದ್ದಾರೆ.

ಸಮುದಾಯದ ಮೀಸಲಾತಿ ಸ್ಥಿತಿಯನ್ನು ಬದಲಾಯಿಸುವ ಮೊದಲು ಅದರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಕಂಡುಹಿಡಿಯಲು ಒಂದು ಅಧ್ಯಯನವು ಅಗತ್ಯವಾಗಿರುತ್ತದೆ ಎಂದೂ ಅವರು ಹೇಳಿದ್ದಾರೆ.

ಆಡಳಿತ, ನೇಮಕಾತಿಗಳು, ಮಂತ್ರಿ ಸ್ಥಾನಗಳು ಇತ್ಯಾದಿಗಳಿಂದ ಹೊರಗುಳಿದಿದ್ದಕ್ಕಾಗಿ ಸಮುದಾಯದ ನಾಯಕರು ಯಡಿಯೂರಪ್ಪ ವಿರುದ್ದ ಒಂದು ಮಾರ್ಗವಾಗಿ ಆಂದೋಲನವನ್ನು ಮುಂದಿಟ್ಟಿದ್ದರಿಂದ ಬಿಜೆಪಿಯೊಳಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಬಿಜೆಪಿ ಮೂಲಗಳು ಒತ್ತಾಯಿಸುತ್ತವೆ.

“ಈ ಆಂದೋಲನವು ಲಿಂಗಾಯತರ ಪ್ರಶ್ನಾತೀತ ನಾಯಕರಾಗಿದ್ದ ಯಡಿಯುರಪ್ಪ ಅವರ ನಾಯಕತ್ವವನ್ನು ದುರ್ಬಲಗೊಳಿಸಲು ಮತ್ತು ಅವರ ಸಮುದಾಯದಲ್ಲಿ ಅವರ ಚಿತ್ರಣವನ್ನು ನಾಶ ಮಾಡಲು ಉದ್ದೇಶಿಸಿದೆ. ಪಂಚಮಸಾಲಿಗರನ್ನು ಪ್ರತ್ಯೇಕಿಸಿ ಪರ್ಯಾಯ ನಾಯಕತ್ವ ಹೊರಹೊಮ್ಮಲು ದಾರಿ ಮಾಡಿಕೊಡುವ ಸಾಧ್ಯತೆಯಿದೆ” ಎಂದು ರಾಜಕೀಯ ವಿಶ್ಲೇಷಕ ಮಹಾದೇವ್ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಟಿಪ್ಪು ಜಯಂತಿ ವಿವಾದ: ಸಿ.ಟಿ ರವಿ ಮತ್ತು ಅನಂತ್‌ಕುಮಾರ್ ಹೆಗಡೆ ವಿರುದ್ಧ ದೂರು ಪರಿಗಣಿಸಲು ಹೈಕೋರ್ಟ್‌ ಸೂಚನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights