FACT CHECK | ಹಿಂದೂ ಧರ್ಮ ನಮ್ಮ ಧರ್ಮವಲ್ಲ ಎಂದು ಹೇಳಿದ್ರಾ ರಾಹುಲ್ ಗಾಂಧಿ?
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಧರ್ಮದ ಬಗ್ಗೆ ಸಮಯ ಬಂದಾಗಲೆಲ್ಲಾ ಬಿಜೆಪಿ ನಾಯಕರು ಕಠಿಣ ಟೀಕೆ ಮತ್ತು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ ಹಿಂದೂ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈಗ ಇದೇ ರೀತಿಯ ಹೇಳಿಕೆಯೊಂದನ್ನು ರಾಹುಲ್ ಗಾಂಧಿ ವಿರುದ್ದ ಮಾಡಲಾಗುತ್ತಿದ್ದು, ಹಿಂದೂ ಧರ್ಮವು ಒಂದು ಧರ್ಮವೇ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ.
ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಮಾತನಾಡುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. “ನಾವು ನಮ್ಮನ್ನು ಹಿಂದೂಗಳು ಎಂದು ಕರೆಯುತ್ತೇವೆ, ಆದರೆ ಇದು ನಮ್ಮ ಧರ್ಮವಲ್ಲ” ಎಂದು ರಾಹುಲ್ ಗಾಂಧಿ ಹೇಳುವ 14 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರು ಹಿಂದೂಗಳ ಬಗ್ಗೆ ಮಾಡಿರುವ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ये हमारा धर्म नहीं है pic.twitter.com/zFlNc1yyIn
— Rakesh Kumar pandey (@RakeshK69661618) April 17, 2025
@RakeshK69661618 ಎಂಬ ಎಕ್ಸ್ ಬಳಕೆದಾರ ಈ ವೀಡಿಯೊವನ್ನು X ನಲ್ಲಿ “ಇದು ನಮ್ಮ ಧರ್ಮವಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಬರೆದಿದ್ದಾರೆ.
हिंदू धर्म हमारा धर्म नहीं है..
ये तो सिर्फ हिन्दुओं को ठगने और देश को लुटने के लिए अपनाया है।
हम तो बाबर के वंशज हैं, हमारे दादी तक अफगानिस्तान जाकर बाबर के मंजार पर सिर झुका कर आई है।
तेरा तो जो सरनेम है गाँधी.. वो भी तेरा नही है… pic.twitter.com/KosHrrVZMg
— Arun Yadav (@ArunKosli) April 17, 2025
@ArunKosli ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರನ್ ಈ ವೀಡಿಯೊವನ್ನು ಹಂಚಿಕೊಂಡು, “ಹಿಂದೂ ಧರ್ಮ ನಮ್ಮ ಧರ್ಮವಲ್ಲ. ಇದು ಕೇವಲ ಹಿಂದೂಗಳನ್ನು ಮೋಸಗೊಳಿಸಲು ಮತ್ತು ದೇಶವನ್ನು ಲೂಟಿ ಮಾಡಲು. ನಾವು ಬಾಬರ್ ವಂಶಸ್ಥರು. ನನ್ನ ಅಜ್ಜಿ ಕೂಡ ಅಫ್ಘಾನಿಸ್ತಾನಕ್ಕೆ ಹೋಗಿ ಬಾಬರ್ ಸಮಾಧಿಗೆ ತಲೆಬಾಗಿದರು. ಗಾಂಧಿ ಎಂಬ ನಿಮ್ಮ ಹೆಸರು ಕೂಡ ನಿಮ್ಮದಲ್ಲ” ಎಂದು ಶೀರ್ಷಿಕೆ ನೀಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿರುವಂತೆ ರಾಹುಲ್ ಗಾಂಧಿ ತಮ್ಮ ಧರ್ಮ ಹಿಂದೂ ಧರ್ಮವಲ್ಲ ಎಂದು ಹೇಳಿದ್ದಾರೆ ಎಂಬ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ INCಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ.
ಸಂಸದ ರಾಹುಲ್ ಗಾಂಧಿ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಮತ್ತು ತಪ್ಪು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರ ಹೇಳಿಕೆಯ ಒಂದು ಭಾಗವನ್ನು 29.53 ನಿಮಿಷಗಳಲ್ಲಿ ಕತ್ತರಿಸಲಾಗಿದೆ. “ರಾಜಸ್ಥಾನದಲ್ಲಿ ನಮ್ಮ ಸಿಎಲ್ಪಿ ಟೀಕರಾಮ್ ಜೂಲಿ, ಅವರು ದಲಿತ. ಅವರು ದೇವಸ್ಥಾನಕ್ಕೆ ಹೋಗಿದ್ದ ಕಾರಣಕ್ಕೆ, ಬಿಜೆಪಿ ನಾಯಕರು ದೇವಸ್ಥಾನವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿದರು. ಅವರು ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುತ್ತಾರೆ. ದಲಿತ ವ್ಯಕ್ತಿಗೆ ದೇವಸ್ಥಾನಕ್ಕೆ ಹೋಗುವ ಹಕ್ಕನ್ನು ನೀಡಲಾಗುವುದಿಲ್ಲ. ದಲಿತರು ಹೋದರೆ, ಅವರು ದೇವಸ್ಥಾನವನ್ನು ತೊಳೆಯುತ್ತಾರೆ. ಇದು ನಮ್ಮ ಧರ್ಮವಲ್ಲ. ನಾವು ನಮ್ಮನ್ನು ಹಿಂದೂಗಳು ಎಂದೂ ಕರೆಯುತ್ತೇವೆ. ಆದರೆ ಇದು ನಮ್ಮ ಧರ್ಮವಲ್ಲ. ಎಲ್ಲರನ್ನೂ ಗೌರವಿಸುವುದು, ಎಲ್ಲರಿಗೂ ಸೌಜನ್ಯ ನೀಡುವುದು ನಮ್ಮ ಧರ್ಮ.” ಎಂದು ಹೇಳಿರುವ ವಿಡಿಯೋವನ್ನು ಎಡಿಟ್ ಮಾಡಿ ಕೊನೆಯಲ್ಲಿ ವಾಕ್ಯಗಳನ್ನು ಕತ್ತರಿಸಿ ವೈರಲ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿಯನ್ನು ಟೀಕಿಸುವ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿದುಬಂದಿದೆ. ರಾಹುಲ್ ಭಾಷಣದ ಮೂಲ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದಲ್ಲಿ 10ವರ್ಷದ ದಲಿತ ಬಾಲಕನನ್ನು ಕೊಲೆ ಮಾಡಲಾಗಿದೆಯೇ?

