ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಸಂಜೆ ಕೆಜಿಎಫ್-2 ರಿಲೀಸ್ ಡೇಟ್ ಅನೌನ್ಸ್..!

ಕನ್ನಡದ ಮಟ್ಟಿಗೆ ಒಂದು ದೊಡ್ಡ ಇತಿಹಾಸ ಸೃಷ್ಟಿ ಮಾಡಿದ ಸಿನಿಮಾ ಕೆಜಿಎಫ್-2. ಟೀಸರ್ ಮೂಲಕ ಧೂಳೆಬ್ಬಿಸಿ ಭಾರೀ ನೀರೀಕ್ಷೆ ಹುಟ್ಟಿಸಿ ಹೊಸ ದಾಖಲೆಯನ್ನೇ ಬರೆದಿರುವ ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗುವುದು ಯಾವಾಗ ಎನ್ನುವ ಪ್ರಶ್ನಿಗೆ ಇಂದು ಉತ್ತರ ಸಿಗಲಿದೆ.

ಹೌದು… ಕೆಜಿಎಫ್ 2 ರಿಲೀಸ್ ಡೇಟ್ ಫಿಕ್ಸ್ ಆಗಿದ್ದು ಇಂದು ಸಂಜೆ 6.32ಕ್ಕೆ ಡೇಟ್ ಅನೌನ್ಸ್ ಮಾಡುವುದಾಗಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸ್ವತ: ನಿರ್ದೇಶಕರೇ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿದೆ.

ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ 16 ಕೋಟಿಗೂ ಅಧಿಕ ಜನ ನೋಡಿದ್ದರು. ಕನ್ನಡ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಲ್ಲಿ ಟೀಸರ್ ಭಾರೀ ವೀಕ್ಷಣೆ ಪಡೆದುಕೊಂಡಿದೆ. ಹೀಗಾಗಿ ಜನ ಒಂದೊಂದು ರಿಲೀಸ್ ಡೇಟ್ ಹೇಳುವ ಮೂಲಕ ಭಾರೀ ಗೊಂದಲಗಳು ಸೃಷ್ಟಿಯಾಗಿವೆ. ಆದರೆ ಇದಕ್ಕೆಲ್ಲ ಪ್ರಶಾಂತ್ ನೀಲ್ ಇಂದು ತೆರೆ ಎಳೆಯಲಿದ್ದಾರೆ. ಇದಕ್ಕೂ ಮೊದಲು ಕೆಜಿಎಫ್1 ದೊಡ್ಡ ಮಟ್ಟದ ಗೆಲುವು ಸಾಧಿಸಿತ್ತು. ಸದ್ಯ ಇದಕ್ಕಿಂತಲೂ ಭಾರೀ ಪ್ರಮಾಣದ ಕುತೂಹಲ ಯಶ್ ಅಭಿಮಾನಿಗಳಲ್ಲಿ ಕೆಜಿಎಫ್-2 ಹೆಚ್ಚಿಸಿದೆ.

ಬಹುಭಾಷೆಯಲ್ಲಿ ರಿಲೀಸ್ ಆಗುವಂತಹ ಸಿನಿಮಾ ಜೂನ್ ಅಥವಾ ಜುಲೈ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ. ಆದರೆ ಅಧಿಕೃತವಾಗಿ ಇಂದು ನಿರ್ದೇಶಕರೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದಾರೆ. ರಿಲೀಸ್ ಬಳಿಕ ಚಿತ್ರ ದೊಡ್ಡ ಮಟ್ಟಿಗೆ ಎಲ್ಲಾ ಭಾಷೆಯ ಜನರನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ಬೇರೆ ಸಿನಿಮಾಗಳು ಕೆಜಿಎಫ್-2 ಸಿನಿಮಾ ರಿಲೀಸ್ ಸಮಯದಲ್ಲಿ ರಿಲೀಸ್ ಆದರೆ ದೊಡ್ಡ ಮಟ್ಟದ ಹೊಡೆತ ಬೀಳುವ ಸಾಧ್ಯತೆ ಇದೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಪ್ಲಾನ್ ಮಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights