BJP ಅಸ್ಸಾಂನಲ್ಲಿ ಮಾಫಿಯಾ, ಸಿಂಡಿಕೇಟ್‌ಗಳನ್ನು ನಡೆಸುತ್ತಿರುವಂತೆ ಕಾರ್ಯನಿರ್ವಹಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಅಸ್ಸಾಂನಲ್ಲಿ ಆಡಳಿತಾರೂಢ BJP ಮಾಫಿಯಾ ಮತ್ತು ಸಿಂಡಿಕೇಟ್‌ಗಳನ್ನು ನಡೆಸುತ್ತಿರುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಸರುಪತಾರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯದಲ್ಲಿ ಬಿಜೆಪಿ ಪಕ್ಷವು ಎರಡು “ಬಣಗಳನ್ನು” ಹೊಂದಿದೆ. ಇವೆರಡೂ ಜನರಿಗೆ ದ್ರೋಹ ಬಗೆದಿವೆ ಎಂದು ಹೇಳಿದ್ದಾರೆ.

ಅಸ್ಸಾಂನ ಬಿಜೆಪಿ ನಾಯಕತ್ವವಯ ಮಹಾಭಾರತದ ‘ಧೃತರಾಷ್ಟ್ರ’ ಮತ್ತು ‘ಶಕುನಿ’ ಪಾತ್ರಗಳಿದ್ದಂತೆ, ಧೃತರಾಷ್ಟ್ರ ಕುರುಡು ಆಡಳಿತಗಾರನಾಗಿದ್ದರೆ, ಶಕುನಿ ರಾಜಕೀಯ ಕುತಂತ್ರಿ ಎಂದು ಅವರು ವ್ಯಂಗ್ಯವಾಡಿದ್ದಾರೆ. ಆದರೆ, ಅವರು ಯಾರ ಹೆಸರನ್ನು ಉಲ್ಲೇಖಿಸಿಲ್ಲ.

ಒಬ್ಬ ನಾಯಕ “ಒಂದು ಕಾಲದಲ್ಲಿ ‘ಜತಿಯಾ ನಾಯಕ್’ (ಜನರ ನಾಯಕ) ಎಂದು ಕರೆಯಲ್ಪಡುವ ‘ದ್ರಿತರಾಷ್ಟ್ರ’ ಅವರು ಆರು ಜನಾಂಗೀಯ ಸಮುದಾಯಗಳಿಗೆ ದ್ರೋಹ ಬಗೆದರು, ಅವರು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಹಾಗೆ ಮಾಡಲಿಲ್ಲ” ಎಂದು ಅವರು ಹೇಳಿದರು.

ಮತ್ತೊಬ್ಬ ನಾಯಕ “ಜನರನ್ನು ಮೋಸ ಮಾಡುವ ಭ್ರಷ್ಟ ಸರ್ಕಾರವನ್ನು ನಡೆಸುತ್ತಿರುವ ಶಕುನಿ ಮಾಮಾ” ಎಂಬಂತಿದ್ದಾರೆ ಎಂದು ಅವರು ಆರೋಪಿಸಿದರು.

“ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅವರು ತಮ್ಮದೇ ಆದ ಮುಖ್ಯಮಂತ್ರಿಯನ್ನು ಗೌರವಿಸಲು ಮತ್ತು ಹೆಸರನ್ನು ಉಚ್ಚರಿಸಲು ಸಾಧ್ಯವಿಲ್ಲ” ಎಂದು ಬಿಜೆಪಿಯನ್ನು ಪ್ರಿಯಾಂಕಾಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: BJPಗೆ ಹಿನ್ನೆಡೆ: ಕೇರಳದ ಹಲವು BJP ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights