ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಬರ್ಬರ ಕೊಲೆ: ಅಪರಾಧಿಗಳಿಗೆ ಕೆಮಿಕಲ್‌ ಕ್ಯಾಸ್ಟ್ರೇಶನ್‌ ಶಿಕ್ಷೆ?

ಬಾಲಕನೊಬ್ಬರಿಗೆ ಚಿತ್ರಹಿಂಸೆ ನೀಡಿ, ಸಾಮೂಹಿಕ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿರುವ ಅಮಾನುಷ, ಹೇಯ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ. ಪ್ರಕರಣದ ಅಪರಾಧಿಗಳಿಗೆ ಕೆಮಿಕಲ್‌ ಕ್ಯಾಸ್ಟ್ರೇಶನ್‌ ಎಂಬ ಶಿಕ್ಷೆ ವಿಧಿಸಲು ಸರ್ಕಾರ ಚಿಂತಿಸುತ್ತಿದ್ದು, ಸಂಸತ್ತಿನಲ್ಲಿ ಕಾನೂನಿನ ಮಸೂದೆ ಮಂಡನೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದಿದೆ. 8 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹತ್ಯೆ ಮಾಡಲಾಗಿದೆ. ಬಾಲಕನ ಶವ ಖೈರ್‌ಪುರ್ ಮಿರ್ ಪ್ರದೇಶದ ಬಾಬರ್ಲೋಯ್ ಪಟ್ಟಣದಲ್ಲಿನ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ.

ಬಾಲಕನ ಮೃತದೇಹದ ಕುತ್ತಿಗೆ, ಬೆನ್ನು, ಸೊಂಟದಲ್ಲಿ ಪರಚಿರುವ ಗುರುತುಗಳು ಪತ್ತೆಯಾಗಿದ್ದು, ಕಾಮುಕರು ಬಾಲಕನ ಮೇಲೆ ಪೈಶಾಚಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ.

ಬಾಬರ್ಲೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧಾರೆ.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದಕ್ಕೂ ಮುನ್ನ, ಆತನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ ಎಂದು ಒಬ್ಬ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹೇಯ ಕೃತ್ಯದ ವಿರುದ್ದ ಪಾಕಿಸ್ಥಾನ ಜನರು ಆಕ್ರೋಶಗೊಂಡಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೀಗಾಗಿ, ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆಯನ್ನು ವಿಧಿಸಲು ಪಾಕ್‌ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಈ ಶಿಕ್ಷೆ ವಿಧಿಸಲು ಮುಂದಾಗಿದ್ದು, ಪಾಕ್‌ ಸಂಸತ್ತಿನಲ್ಲಿ ಈ ಕಾನೂನಿನ ಅಂಗೀಕಾರಕ್ಕೆ ಮಸೂದೆ ಸಿದ್ದವಾಗಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರಿಗಳ ಲೈಂಗಿಕ ಚಟುವಟಿಕೆ ಕಡಿಮೆ ಮಾಡಲು ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡಲಾಗುವ ಶಿಕ್ಷೆಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಎನ್ನಲಾಗುತ್ತದೆ. ಈ ಶಿಕ್ಷೆಯು ದಕ್ಷಿಣ ಕೊರಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್ ಮತ್ತು USನಲ್ಲಿನ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳ ಎದುರೇ ತಂದೆಯ ಭೀಕರ ಕೊಲೆ

Spread the love

Leave a Reply

Your email address will not be published. Required fields are marked *