ನಿರ್ಮಲಾ ಸೀತಾರಾಮನ್ ಅವರೊಂದಿಗೆ ಕೆಲಸ ಮಾಡುವುದು ಕಷ್ಟ: ಮಾಜಿ ಹಣಕಾಸು ಕಾರ್ಯದರ್ಶಿ

ಕೇಂ‌ದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಕೆಲಸ ಮಾಡುವುದು ತೀರಾ ಕಷ್ಟವಾಗಿತ್ತು. ಹಾಗಾಗಿ ಅವರೊಂದಿಗಿನ ವೈಯಕ್ತಿಕ ಸಂಘರ್ಷದ ಕಾರಣದಿಂದಾಗಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದೇನೆ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.

1983 ರ ರಾಜಸ್ಥಾನ್ ಕೇಡರ್‌‌ನ ಐಎಎಸ್ ಅಧಿಕಾರಿಯಾಗಿರುವ ಸುಭಾಶ್ ಚಂದ್ರ ಗರ್ಗ್ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮ್ಮ ಹುದ್ದೆಯಿಂದ ದಿಡೀರ್ ಸ್ವಯಂ ನಿವೃತ್ತಿ ಹೊಂದಿದ್ದರು. ಇದೀಗ ತಮ್ಮ ಸ್ವಯಂ ನಿವೃತ್ತಿಯ ಬಗ್ಗೆ ಅವರ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. (ಬ್ಲಾಗ್ ಓದಲು ಇಲ್ಲಿ ಕ್ಲಿಕ್ ಮಾಡಿ)

ಈ ಬ್ಲಾಗ್‌‌ನಲ್ಲಿ ದೇಶದ ಆರ್ಥಿಕತೆ ಕುರಿತು ಕೂಡಾ ಅವರು ಬರೆದಿದ್ದು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಸಾಮರ್ಥ್ಯದ ಕುರಿತು ಭಾರತದಲ್ಲಿ ಸಾಕಷ್ಟು ಸಿನಿಕತನವಿದೆ. 1% ಜನರಿಗೆ ಕೂಡಾ ವೈರಸ್ ಇಲ್ಲದಿರುವ ಸಂದರ್ಭ ಇಡೀ ದೇಶದಲ್ಲಿ ವಿಶ್ವದ ಅತ್ಯಂತ ಕಠಿಣ ಲಾಕ್ ಡೌನ್ ಹೇರಲಾಗಿತ್ತು. ಈ ಮೂಲಕ ಆರ್ಥಿಕ ಬೆಳವಣಿಗೆಯ ಕಣ್ಣು ಗುಡ್ಡೆಯನ್ನು ಕಿತ್ತುಹಾಕಲಾಗಿದೆ ಎಂದು ಅವರು ಬರೆದಿದ್ದಾರೆ.

“ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 23.9 ಶೇ.ರಷ್ಟು ಕುಗ್ಗಿತ್ತು. ಇದಕ್ಕೆ ಮುಖ್ಯ ಕಾರಣ ಮಾರ್ಚ್ 25 ರಂದು ಜಾರಿಗೆ ಬಂದ 68 ದಿನಗಳ ಕಠಿಣ ಲಾಕ್‌ಡೌನ್. ಇದರಿಂದಾಗಿ ಕಾರ್ಖಾನೆಗಳು ಹಾಗೂ ವ್ಯಾಪಾರ ಸಂಸ್ಥೆಗಳು ಸ್ಥಗಿತಗೊಂಡಿತು, ಸಾರ್ವಜನಿಕ ಸಾರಿಗೆ ಮುಚ್ಚಿತು ಮತ್ತು ಲಕ್ಷಾಂತರ ಕಾರ್ಮಿಕರ ವಲಸೆಗೂ ಕಾರಣವಾಯಿತು” ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.


ಇದನ್ನೂ ಓದಿ: ಮಲ್ಯ ಹಸ್ತಾಂತರ: 06 ವಾರಗಳಲ್ಲಿ ಸ್ಥಿತಿ ವರದಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ!

Spread the love

Leave a Reply

Your email address will not be published. Required fields are marked *