ಮಲ್ಯ ಹಸ್ತಾಂತರ: 06 ವಾರಗಳಲ್ಲಿ ಸ್ಥಿತಿ ವರದಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ!

ದೇಶದಿಂದ ಪರಾರಿಯಾಗಿ, ಯುಕೆ ಜೈಲಿನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವ ಪ್ರಕರಣದ ಬಗ್ಗೆ ವಾರು ವಾರಗಳ ಒಳಗಾಗಿ ಸ್ಥಿತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.

ಮಲ್ಯರನ್ನು ಹಸ್ತಾಂತರಿಸುವ ಪ್ರಯತ್ನದಲ್ಲಿ ಯುಕೆ ನ್ಯಾಯಾಲಯಗಳಲ್ಲಿ ‘ರಹಸ್ಯ’ ವಿಚಾರಣೆಗಳು ನಡೆಯುತ್ತಿವೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸುಮಾರು ಒಂದು ತಿಂಗಳ ನಂತರ ಕೋರ್ಟ್‌ ಮತ್ತೆ ವರದಿ ಕೇಳಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ ಕೊನೆಯ ಸ್ಥಿತಿ ವರದಿಯಲ್ಲಿ, ಮಲ್ಯ ಅವರ ಹಸ್ತಾಂತರದ ಕೋರಿಕೆಯನ್ನು ಫೆಬ್ರವರಿ 9, 2017 ರಂದು ಯುಕೆಗೆ ರವಾನಿಸಲಾಗಿದೆ. ಡಿಸೆಂಬರ್ 2018 ರಲ್ಲಿ ಲಂಡನ್‌ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಿರಿಯ ಜಿಲ್ಲಾ ನ್ಯಾಯಾಧೀಶರು ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಶಿಫಾರಸು ಮಾಡಿದ್ದರು. ಮಲ್ಯ ಇದನ್ನು ಲಂಡನ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅದು 2020ರ ಏಪ್ರಿಲ್ 20ರಂದು ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್‌ ಅನುಮತಿ ಕೋರಿದ್ದರು. ಆದರೆ, 2020ರ ಮೇ 14ರಂದು ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿತು ಎಂದು ಗೃಹ ಸಚಿವಾಲಯ ಹೇಳಿದೆ.

ನಂತರ ಬೆಳವಣಿಗೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ಸ್ಥಿತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ನೀಡಿದೆ.


ಇದನ್ನೂ ಓದಿ: ಕಮಲ್‌ನಾಥ್‌ರನ್ನು ಸ್ಟಾರ್ ಪ್ರಚಾರಕರಿಂದ ಕೈಬಿಟ್ಟ ಚುನಾವಣಾ ಆಯೋಗ; ತರಾಟೆಗೆ ತೆಗೆದುಕೊಂಡ ಸುಪ್ರೀಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights