ಛತ್ತೀಸ್‌ಘಡದಲ್ಲಿ ವಿಶಾಕಾರಿ ಗ್ಯಾಸ್‌ ಲೀಕ್‌; 7 ಮಂದಿ ಅಸ್ವಸ್ಥ

ಚತ್ತೀಸ್‌ಘಡ್‌ ರಾಜ್ಯದ ರಾಯಗಡ್‌ನಲ್ಲಿ ಕಾಗದ ಗಿರಣಿಯಲ್ಲಿ ವಿಷಕಾರಿ ಅನಿಲ ಸೋಕಿಕೆಯಾಗಿದ್ದು, ಗಿರಣಿಯನ್ನು ಸ್ವಚ್ಛಗೊಳಿಸುತ್ತಿದ್ದ ಕನಿಷ್ಠ ಏಳು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅವರನ್ನು ರಾಯಗಡ್‌ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ರಾಜಧಾನಿ ರಾಯ್‌ಪುರಕ್ಕೆ ಸ್ಥಳಾಂತರಿಸಲಾಗಿದೆ.

“ಘಟನೆಯ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಆಸ್ಪತ್ರೆಯಿಂದ ನಾವು ಈ ಬಗ್ಗೆ ತಿಳಿದುಕೊಂಡಿದ್ದೇವೆ” ಎಂದು ರಾಯಗಡದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.

ಈ ಘಟನೆ ನಡೆಯುವುದಕ್ಕೂ ಕೆಲವು ಗಂಟೆಗಳ ಮುಂಚೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಾದ ಘಟನೆ ನಡೆದಿದ್ದು, ಇದರಲ್ಲಿ ಮಗು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ಹೇಳಲಾಗಿದೆ. ಸುಮಾರು 1,000 ಜನರನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights