ಕಿಲ್ಲರ್ ಕೊರೊನಾಗೆ ತತ್ತರಿಸಿದ ಅಮೆರಿಕಾ : 13 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ!

ಕಿಲ್ಲರ್ ಕೊರೊನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಅಕ್ಷರಶ: ನಲುಗಿ ಹೋಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈವರೆಗೆ 12,92,623 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 76,928 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಹೌದು… ಮಾರಣಾಂತಿಕ ಕೊರೊನಾ ವೈರಸ್ ಹೊಡೆತಕ್ಕೆ ಏಪ್ರಿಲ್ ಎರಡನೇ ವಾರದಿಂದ ಅಮೇರಿಕಾದಲ್ಲಿ ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಹಾಗ್ನೋಡಿದ್ರೆ, 1967 ಬಳಿಕ ಇಷ್ಟೊಂದು ಸಾವು-ನೋವನ್ನು ಅಮೇರಿಕಾ ಕಂಡಿರಲಿಲ್ಲ. ಅಮೆರಿಕಾದಲ್ಲಿ ಏಡ್ಸ್ ನಿಂದ (1981-1991 ರ ಅವಧಿಯಲ್ಲಿ) ಮೃತಪಟ್ಟವರಿಗಿಂತ, ಈಗಿನ ಡೆಡ್ಲಿ ಕೋವಿಡ್-19 ಗೆ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾಗೆ ನೋಡುವುದಾದರೆ ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಯಲ್ಲಿ ಈಗೀಗ ಹೊಸ ಸೋಂಕಿತರ ಪ್ರಮಾಣದಲ್ಲಿ ಕುಸಿತ ಕಂಡುಬರುತ್ತಿದೆ. ಆದರೆ ಮಿನೆಸೋಟಾ,  ಮೇರಿಲ್ಯಾಂಡ್, ಟೆಕ್ಸಾಸ್, ವರ್ಜಿನಿಯಾ ಮುಂತಾದ ಕಡೆ ಕೊರೊನಾ ವೈರಸ್ ಸೋಂಕಿತ ಸಂಖ್ಯೆ ಉಲ್ಬಣಗೊಳ್ಳುತ್ತಿರುವುದು ದೊಡ್ಡ ತಲೆ ನೋವಾಗಿದೆ.

ಆಗಸ್ಟ್ 4 ರ ಹೊತ್ತಿಗೆ ಯುಎಸ್ಎ ನಲ್ಲಿ ಸಾವಿನ ಪ್ರಮಾಣ 134,000 ಕ್ಕೆ ಏರಿಕೆಯಾಗಲಿದೆ. ಮೇ ಅಂತ್ಯದ ವೇಳೆಗೆ ಯುಎಸ್ಎನಲ್ಲಿ ಪ್ರತಿ ದಿನ ಮೂರು ಸಾವಿರ ಮಂದಿ ಕೊರೊನಾಗೆ ಬಲಿಯಾಗಬಹುದು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯ ಅಂದಾಜಿಸಿದೆ ಎಂದು ಟ್ರಂಪ್ ಆಂತರಿಕ ಸಮೀಕ್ಷೆ ಕೂಡ ಒಪ್ಪಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights