ಔರಂಗಾಬಾದ್‌ನ ರೈಲ್ವೆ ಟ್ರಾಕ್ ಮೇಲೆ ಮಲಗಿದ್ದ 15 ವಲಸೆ ಕಾರ್ಮಿಕರ ಮೇಲೆ ಹರಿದ‌ ರೈಲು!

ಔರಂಗಾಬಾದ್‌ನ ಜಲ್ನಾ ರೈಲ್ವೆ ಟ್ರಾಕ್ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್‌ ರೈಲು ಹರಿದಿದ್ದು ಕನಿಷ್ಟ 15 ಜನ ಮೃತಪಟ್ಟಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೌದು… ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಈ ಎಲ್ಲಾ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ತಮ್ಮ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ತಮ್ಮ ಊರಿಗೆ ತೆರಳಿದ್ದರು.

ಆದರೆ ತಮ್ಮ ಊರುಗಳಿಗೆ ಹೋಗಲು ಇವರು ಹಿಡಿದಿದ್ದು ರಸ್ತೆ ಮಾರ್ಗವಲ್ಲ ರೈಲು ಮಾರ್ಗ. ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ಕೆಲಸವಿಲ್ಲದ ಕಾರಣ ಕಾರ್ಮಿಕರು ರೈಲ್ವೆ ಹಳಿಯ ದಾರಿ ಹಿಡಿದು ಊರಿಗೆ ಹೊರಟಿದ್ದರು. ಆದರೆ, ಮಾರ್ಗಮದ್ಯೆ ನಿನ್ನೆ ರಾತ್ರಿ ಕರ್ಮದ್ ಬಳಿಯ ರೈಲ್ವೆ ಹಳಿ ಮೇಲೆ ಮಲಗಿದ್ದಾರೆ.

ಈ ದುರ್ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಮಧ್ಯರಾತ್ರಿ ಗೂಡ್ಸ್‌ ರೈಲೊಂದು ಇದೇ ಮಾರ್ಗವಾಗಿ ಸಂಚರಿಸಿದ ಕಾರಣ ಇಂತಹ ದುರ್ಘಟನೆ ನಡೆದಿದೆ. ಪರಿಣಾಮ ಊರಿಗೆ ಹೊರಟಿದ್ದ 17 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಗೂಡ್ಸ್​ ರೈಲು ಹೋಗುವ ಹಳಿಯ ಮೇಲೆ ಜನರು ಮಲಗಿರುವುದು ಲೋಕೋ ಪೈಲಟ್ ಗಮನಕ್ಕೆ ಬಂದಿದೆ. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದೆ ರೈಲು ವಲಸೆ ಕಾರ್ಮಿಕರ ಮೇಲೆ ಹರಿದಿದೆ. ಬದ್ನಾಪುರ್ ಮತ್ತು ಕರ್ಮಾಡ್​ ರೈಲ್ವೆ ನಿಲ್ದಾಣಗಳ ನಡುವೆ ಈ ದುರಂತ ನಡೆದಿದೆ. ಗಾಯಗೊಂಡವರನ್ನು ಔರಂಗಾಬಾದ್​ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

https://twitter.com/RailMinIndia/status/1258595033260929029

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights