ಕುಂಭಮೇಳ ನಡೆದ ಹರಿದ್ವಾರದಲ್ಲಿ ಕೊರೊನಾ ಪಾಸಿಟಿವ್‌ ದರ ಭಾರೀ ಇಳಿಕೆ; ಉತ್ತರಾಖಂಡ್ ಸರ್ಕಾರ ಮಾಡಿದ್ದೇನು?

ಉತ್ತರಾಖಂಡ್ ರಾಜ್ಯದ ಎಲ್ಲಾ 13 ಜಿಲ್ಲೆಗಳಲ್ಲಿನ ಕೊರೊನಾ ಪ್ರಕರಣಗಳ ಪೈಕಿ ಹರಿದ್ವಾರ ಜಿಲ್ಲೆಯ ಅಂಕಿಅಂಶ ನಿಗೂಢ ರೀತಿಯಲ್ಲಿದೆ.

ರಾಜ್ಯದಲ್ಲಿ ಕಳೆದ ವಾರದಲ್ಲಿ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಿದರೂ, ಕೊರೊನಾ ಪಾಸಿಟಿವ್‌ ಪ್ರಮಾಣವು ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಉತ್ತರಾಖಂಡ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಏಪ್ರಿಲ್ 23-29ರ ಅವಧಿಯಲ್ಲಿ, ರಾಜ್ಯದಲ್ಲಿ ಒಟ್ಟು 1,44,664 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ 7584 ಮಾದರಿಗಳು ಕೊರೊನಾ ಪಾಸಿಟಿವ್‌ ಬಂದಿವೆ. ಉಳಿದೆಲ್ಲವೂ ನೆಗೆಟಿವ್‌ ಎಂದು ಹೇಳಲಾಗಿದೆ. ಪರೀಕ್ಷೆ ನಡೆದ ಒಟ್ಟು ಮಾದರಿಗಳ ಪೈಕಿ 5.2% ರಷ್ಟು ಮಾತ್ರ ಪಾಸಿಟಿವ್‌ ಬಂದಿವೆ.

ಈ ಅವಧಿಯಲ್ಲಿ, ನೈನಿತಾಲ್ ಜಿಲ್ಲೆಯಲ್ಲಿ  ಅತಿ ಹೆಚ್ಚು ಪಾಸಿಟಿವ್‌ ದರ 25.2% ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿ ಡೆಹ್ರಾಡೂನ್ (21.6%), ಟೆಹ್ರಿ (21%), ಉಧಮ್ ಸಿಂಗ್ ನಗರ (20.7%), ಉತ್ತರಕಾಶಿ (19.5%), ಚಮೋಲಿ (19.2%), ಪೌರಿ (18.6%), ಚಂಪಾವತ್ (17.8%), ಅಲ್ಮೋರಾ (14.6%), ಪಿಥೋರಗಡ್‌ (13.8%), ರುದ್ರಪ್ರಯಾಗ್ (13.8%) ಮತ್ತು ಬಾಗೇಶ್ವರ (10.1%) ಸೋಂಕಿತ ಪ್ರಕರಣಗಳು ದಾಖಲಾಗಿವೆ.

ತಜ್ಞರು ಹರಿದ್ವಾರದ ಡೇಟಾವನ್ನು ಪ್ರಶ್ನಿಸುತ್ತಿದ್ದಾರೆ. ವಿಶೇಷವಾಗಿ ಪಾಸಿಟಿವ್‌ ದರ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2020 ರಿಂದ ಕೋವಿಡ್ ಡೇಟಾವನ್ನು ವಿಶ್ಲೇಷಿಸುತ್ತಿರುವ ಅನೂಪ್ ನೌತಿಯಾಲ್, “ಸಂಪೂರ್ಣ 392% ಪಾಸಿಟಿವ್‌ ದರ (ಪಿಆರ್) ವ್ಯತ್ಯಾಸವಿದೆ. 91 ಲಕ್ಷ ಯಾತ್ರಾರ್ಥಿಗಳು ಭಾಗಿಯಾಗಿದ್ದ ಮಹಾ ಕುಂಭ ನಡೆದ ಹರಿದ್ವಾರದಲ್ಲಿ ಏಪ್ರಿಲ್ 1-29 ರಿಂದ 5,91,902 ಪರೀಕ್ಷೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 16,519 ಮಾದರಿಗಳು (2.8%) ಪಾಸಿಟಿವ್‌ ಬಂದಿವೆ. ಅದೇ ಅವಧಿಯಲ್ಲಿ  ಇದಕ್ಕೆ ವಿರುದ್ಧವಾಗಿ, ಉತ್ತರಾಖಂಡದ ಉಳಿದ 12 ಜಿಲ್ಲೆಗಳಲ್ಲಿ 13.8% ಪಾಸಿಟಿವ್‌ ದರ ಇದೆ, 4,20,792 ಪರೀಕ್ಷೆಗಳಿಂದ 57,937 ಪ್ರಕರಣಗಳು ದಾಖಲಾಗಿವೆ ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕುಂಭಮೇಳದ ಕುರಿತ ದಿವ್ಯ ಮೌನ – ಮುಸ್ಲಿಮರೇ ಕೋವಿಡ್ ಹರಡುತ್ತಾರೆಂಬ ಭ್ರಮೆ!

ನೈನಿತಾಲ್‌ನಲ್ಲಿ ಒಟ್ಟು 17,062 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 4,300 ಪಾಸಿಟಿವ್‌ ಬಂದಿವೆ. ಡೆಹ್ರಾಡೂನ್ ಒಟ್ಟು 63,754 ಮಾದರಿಗಳನ್ನು ಪರೀಕ್ಷಿಸಿದ್ದು, 13,799 ಪಾಸಿಟಿವ್‌ ಬಂದಿವೆ.

ಟೆಹ್ರಿಯಲ್ಲಿ ಒಟ್ಟು 4,477 ಮಾದರಿಗಳಲ್ಲಿ 941, ಯುಎಸ್ ನಗರದಲ್ಲಿ 15746 ರಲ್ಲಿ 3,266, ಉತ್ತರಕಾಶಿ ಯಲ್ಲಿ ಒಟ್ಟು 4447 ರಲ್ಲಿ 865, ಚಮೋಲಿ ಜಿಲ್ಲೆಯಲ್ಲಿ 4839 ರಲ್ಲಿ 928, ಪೌರಿಯಲ್ಲಿ 9776 ರಲ್ಲಿ 1816, ಚಂಪಾವತ್‌ನಲ್ಲಿ 6061 ರಲ್ಲಿ 1080, ಅಲ್ಮೋರಾದಲ್ಲಿ 6505 ರಲ್ಲಿ 952, ಪಿಥೋರಘಡ್‌ ಜಿಲ್ಲೆಯಲ್ಲಿ 3647 ಮಾದರಿಗಳಲ್ಲಿ 505, ರುದ್ರಪ್ರಯಾಗದಲ್ಲಿ 3071 ಮಾದರಿಗಳಲ್ಲಿ  423 ಮತ್ತು ಬಾಗೇಶ್ವರ ಜಿಲ್ಲೆಯಲ್ಲಿ 3938 ರಲ್ಲಿ 398 ಮಾದರಿಗಳು ಕೊರೊನಾ ಪಾಸಿಟಿವ್‌ ಬಂದಿವೆ.

ಏತನ್ಮಧ್ಯೆ, ಉತ್ತರಾಖಂಡದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 49,492 ಕ್ಕೆ ತಲುಪಿದ್ದು, 5654 ಹೊಸ ಸಕಾರಾತ್ಮಕ ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ.

ರಾಜ್ಯದ ಕೊರೊನಾ ಪಾಸಿಟಿವ್‌ ದರವು 4.77% ರಷ್ಟಿದ್ದು, ಚೇತರಿಕೆಯ ಪ್ರಮಾಣ 69% ಆಗಿದೆ.

ರಾಜ್ಯವು ಒಟ್ಟು 16,60,499 ಜನರಿಗೆ ಲಸಿಕೆ ನೀಡಿದೆ, ಅದರಲ್ಲಿ 4,10,918 ಜನರಿಗೆ ಎರಡನೇ ಡೋಸ್ ಕೂಡ ಸಿಕ್ಕಿದೆ.

ಇದನ್ನೂ ಓದಿ: ಹರಿದ್ವಾರದ ಕುಂಭ ಮೇಳದಲ್ಲಿ ಭಾಗವಹಿಸಿದ 30 ಸಾಧುಗಳಿಗೆ ಕೊರೊನಾ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights