ರೈತ ಹೋರಾಟದ ವಿರುದ್ದ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಜೀ ನ್ಯೂಸ್‌ಗೆ NBDSA ಛೀಮಾರಿ; ವಿಡಿಯೋ ಡಿಲೀಟ್‌ ಮಾಡುವಂತೆ ಸೂಚನೆ!

ರೈತ ಹೋರಾಟದ ವರದಿಗಾರಿಕೆಯ ವೇಳೆ ಸುಳ್ಳು ವರದಿ ಮಾಡಿದ್ದಕ್ಕಾಗಿ ZeeNews ಚಾನಲ್‌ ವಿರುದ್ದ ಸಲ್ಲಿಸಲಾಗಿದ್ದ ದೂರನ್ನು News Broadcasting and Digital Standards Authority (NBDSA) ಪರಿಶೀಲನೆ ನಡೆಸಿದೆ. ಅಲ್ಲದೆ, ಜೀ ನ್ಯೂಸ್‌ಗೆ ಛೀಮಾರಿ ಹಾಕಿದೆ. ಮಾತ್ರವಲ್ಲದೆ, ರೈತ ಹೋರಾಟದ ವಿರುದ್ದ ಪ್ರಸಾರ ಮಾಡಲಾಗಿದ್ದ, ಸುಳ್ಳು ವರದಿಗಳ ವೀಡಿಯೊಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಸೂಚಿಸಿದೆ.

ಜನವರಿ 26ರಂದು ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರಾಕ್ಟರ್‌ ರ್ಯಾಲಿ ನಡೆಸಿತ್ತು. ಇದಕ್ಕೂ ಮುನ್ನ, 19.1.2021  ರಂದು ಜೀ ನ್ಯೂಸ್‌ ರೈತ ಹೋರಾಟದ ವಿರುದ್ದ ಸುದ್ದಿ ಪ್ರಸಾರ ಮಾಡಿ, ರೈತರನ್ನು ಖಲಿಸ್ತಾನಿಗಳು ಎಂದು ಕರೆದಿತ್ತು. “ತಾಲ್ ಥೋಕ್ ಕೆ: ಖಲಿಸ್ತಾನ್ ಸೆ ಕಬ್ ಸಾವಧಾನ ಹೋಗಾ ಕಿಸಾನ್?” (ಖಲಿಸ್ತಾನಿಗಳ ಬಗ್ಗೆ ರೈತರು ಯಾವಾಗ ಎಚ್ಚರಗೊಳ್ಳುತ್ತಾರೆ) ಮತ್ತು 20.1.2021 ರಂದು “ತಾಲ್ ಥೋಕ್ ಕೆ: ಮಾನ ಕಕಸಾನ್ ತೋ ಕ್ಯಾ ರಿಪಬ್ಲಿಕ್ ಡೇ ಪರ್ ಹೋಗಾ ‘ಗೃಹಯುದ್ರ್ದ’?” (ಕಾಯ್ದೆಗಳು ವಾಪಸ್‌ ಆಗದಿದ್ದರೆ, ಗಣರಾಜ್ಯದ ದಿನ ಅಂತರ್ಯದ್ದ ನಡೆಯುತ್ತದೆಯೇ?) ಎಂದು ಸುದ್ದಿ ಪ್ರಸಾರ ಮಾಡಿತ್ತು.

ಈ ಎರಡೂ ಸುದ್ದಿಗಳ ವಿರುದ್ದ ದೂರುದಾರ ಇಂದ್ರಜಿತ್‌ ಗೋರ್‌ಪಾದ್‌ ಎಂಬುವವರು NBDSAಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ ಜೀ ನ್ಯೂಸ್‌ 19.1.2021 ಮತ್ತು 20.1.2021. ರಂದು ಪ್ರಸಾರ ಮಾಡಿದ ಸುದ್ದಿಗಳು ಆಕ್ಷೇಪಾರ್ಹವಾಗಿದ್ದು, ಇವು NBDA ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಹೇಳಿದ್ದರು.

ದೂರಿನ ವಿಚಾರಣೆ ನಡೆಸಿರುವ NBDSA ಜೀ ನ್ಯೂಸ್‌ಗೆ ವಿಡಿಯೋಗಳನ್ನು ಡಿಲೀಟ್‌ ಮಾಡಲು ಸೂಚಿಸಿದ್ದು, ಈ ವಿಡಿಯೋಗಳು ಈ ಕೆಳಗಿನ NBDSA ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ:

1. ವರದಿ ಮಾಡುವುದು ವೀಕ್ಷಕರಲ್ಲಿ ಸಂವೇದನಾಶೀಲನೆಯನ್ನು ತೊಡೆದು ಹಾಕಬಾರದು, ಭಯ, ಸಂಕಟ ಅಥವಾ ಅನಗತ್ಯ ಭಯವನ್ನು ಸೃಷ್ಟಿಸಬಾರದು.
2. ಯಾವುದೇ ವಿವಾದಾತ್ಮಕ ಸಾರ್ವಜನಿಕ ಸಮಸ್ಯೆಯ ಸಂದರ್ಭದಲ್ಲಿ ಯಾವುದಾದರೂ ಒಂದು ಬದಿಯವರಿಗೆ ಅಡ್ಡಿಪಡಿಸುವ ಉದ್ದೇಶಕ್ಕಾಗಿ ಸುದ್ದಿಗಳನ್ನು ಆಯ್ಕೆ ಮಾಡಬಾರದು.
3. ಸುದ್ದಿ ಪ್ರಸಾರಕ್ಕೂ ಮುನ್ನ, ಸಾಧ್ಯವಾದರೆ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಬೇಕು.
4. ಸತ್ಯಗಳು ಸ್ಪಷ್ಟವಾಗಿ ಭಿನ್ನವಾಗಿರಬೇಕು. ಅವುಗಳು ಅಭಿಪ್ರಾಯ, ವಿಶ್ಲೇಷಣೆ ಮತ್ತು ಕಾಮೆಂಟ್‌ಗಳೊಂದಿಗೆ ಬೆರೆಸಬಾರದು.
5. ಸತ್ಯದ ವಿರುದ್ದ ವಿದ್ದಲ್ಲಿ, ಅಂತಹ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಬೇಕು, ಸತ್ಯದ ಸರಿಯಾದ ಆವೃತ್ತಿಯ ಪ್ರಸಾರಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಬೇಕು.
6. ಸಮತೋಲಿತ ವರದಿಗಾಗಿ, ಪ್ರಸಾರಕರು ತಟಸ್ಥವಾಗಿರಬೇಕು. ವಿಶೇಷವಾಗಿ ವಿವಾದಾತ್ಮಕ ವಿಷಯದ ಕುರಿತು ಯಾವುದೇ ನಿರ್ದಿಷ್ಟವಾದ ದೃಷ್ಟಿಕೋನಕ್ಕೆ ಅನಗತ್ಯ ಪ್ರಾಮುಖ್ಯತೆಯನ್ನು ನೀಡಬಾರದು.
7. ರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವ ವರದಿಯನ್ನು ಮಾಡಬಾರದು.
8. ಮೂಢನಂಬಿಕೆಯನ್ನು ನಂಬಿಕೆ ವಿಷಯವೆಂದು ಪ್ರಚಾರ ಮಾಡಬಾರದು.

ಜೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳು NBDAಯ ಮೇಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಅಲ್ಲದೆ, ಈ ಕಾರ್ಯಕ್ರಮಗಳಲ್ಲಿ ಸಾಮಾಜಿಕ-ಮಾಧ್ಯಮದಿಂದ ಪರಿಶೀಲಿಸದ ಮಾರ್ಪಾಡು ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.

Read Also: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಪಟ್ಟ ಕಟ್ಟಿದ ನ್ಯೂಸ್‌ 18 ಮತ್ತು ಜೀ ನ್ಯೂಸ್‌!

ಜೀ ವಾಹಿನಿಯ ಈ ಕಾರ್ಯಕ್ರಮಗಳಲ್ಲಿ, ಡಿಸೆಂಬರ್ 2020ರಲ್ಲಿ ಜರ್ಮನಿಯಲ್ಲಿ ನಡೆದ ಚಾರಿಟಿ ಈವೆಂಟ್‌ ಸಂದರ್ಭದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಟ್ರಾಕ್ಟರುಗಳ ವೀಡಿಯೊವನ್ನು, ಪ್ರತಿಭಟನಾನಿರತ ರೈತರು ಜನವರಿ 26 ರಂದು ನಡೆಸಲಿರುವ ಟ್ರ್ಯಾಕ್ಟರ್-ಮಾರ್ಚ್‌ಗೆ ಸಿದ್ಧವಾಗುತ್ತಿರುವ ಟ್ರಾಕ್ಟರ್‌ಗಳು ಎಂದು ಪ್ರಸಾರ ಮಾಡಲಾಗಿತ್ತು. ಇದರ ಬಗ್ಗೆ ಹಲವು ಏಜೆನ್ಸಿಗಳು ಫ್ಯಾಕ್ಟ್‌ಚೆಕ್‌ ನಡೆಸಿ, ಪರಿಶೀಲನೆ ನಡೆಸಿವೆ. ಆದಾಗ್ಯೂ, ತನ್ನ ವೀಕ್ಷಕರನ್ನು ದಾರಿ ತಪ್ಪಿಸಿದ್ದಕ್ಕಾಗಿ ಜೀ ನ್ಯೂಸ್‌ ಪ್ರಸಾರಕರು ಇನ್ನೂ ಕ್ಷಮೆಯಾಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನಿಸಿರುವ NBDSA, ಜೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳ ಬಗ್ಗೆ ತನ್ನ ಅಸಮ್ಮತಿಯನ್ನು ಸೂಚಿಸಿದೆ. ಅಲ್ಲದೆ, ಪ್ರಸಾರ ಮಾಡಲಾಗಿರುವ ಆ ಎರಡೂ ವೀಡಿಯೊಗಳು ಚಾನಲ್‌ನ ವೆಬ್‌ಸೈಟ್, ಅಥವಾ YouTube, ಅಥವಾ ಯಾವುದೇ ಇತರ ಲಿಂಕ್‌ಗಳಲ್ಲಿ ಇನ್ನೂ ಲಭ್ಯವಿದ್ದರೆ, ತಕ್ಷಣವೇ ತೆಗೆದುಹಾಕಬೇಕು ಮತ್ತು ಆ ಬಗ್ಗೆ 7 ದಿನಗಳಲ್ಲಿ NBDSA ಗೆ ಲಿಖಿತ ರೂಪದಲ್ಲಿ ದೃಢೀಕರಿಸಬೇಕು ಎಂದು ನಿರ್ದೇಶಿಸಿದೆ.

ಯಾವುದೇ ಸುದ್ದಿಯನ್ನು ವರದಿ ಮಾಡುವಾಗ ಜಾಗರೂಕತೆ ಮತ್ತು ಎಚ್ಚರಿಕೆಯನ್ನು ವಹಿಸಬೇಕು. ಪತ್ರಿಕಾ ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳ ಮೂಲಭೂತ ತತ್ವಗಳನ್ನು ಅನುಸರಿಸಬೇಕು ಅಲ್ಲದೆ, ಸರಿಯಾದ ನಿಖರತೆ ಮತ್ತು ನಿಷ್ಪಕ್ಷಪಾತದ ತತ್ವ, ಪ್ರಸಾರದ ಸಂದರ್ಭದಲ್ಲಿ ಮಾಡಿದ ಗಮನಾರ್ಹ ತಪ್ಪುಗಳನ್ನು ತಕ್ಷಣವೇ ಸರಿಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಮಾತ್ರವಲ್ಲದೆ, ಮುಂದೆ ಪ್ರಸಾರ ಮಾಡಲಾಗುವ ಸುದ್ದಿಗಳಿಗೆ ಟ್ಯಾಗ್‌ಲೈನ್‌ಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ಚಿತ್ರಗಳು/ಛಾಯಾಚಿತ್ರಗಳ ಬಳಕೆಯನ್ನು ಪ್ರಸಾರ ಮಾಡಲು/ಪ್ರಕಟಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಿದೆ.

Read Also: ಡಿಯರ್‌ ಮೋದಿ, ದೇಶಕ್ಕೆ ನಿಮ್ಮ ಸಂದೇಶ; ನಿಮಗೆ ರೈತರ ಸಂದೇಶ: ಪ್ರಧಾನಿಗೆ ರೈತರ 6 ಅಂಶಗಳ ಪತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights