ನಿಖಿಲ್-ರೇವತಿ ಮದುವೆಗೆ ಎರಡೇ ದಿನ ಬಾಕಿ : ಗೌಡರ ಮನೆ ಮದುವೆ ಹೇಗೆ ನಡೆಯುತ್ತೆ?

ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ಹೆಚ್.ಡಿ ದೇವೇಗೌಡರ ಮನೆ ಮದುವೆಗೆ ಸದ್ಯ ಎರಡೇ ದಿನಗಳು ಬಾಕಿ ಇವೆ. ಅದ್ಧೂರಿಯಾಗಿ ನೆರವೇರಬೇಕಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಕುಟುಂಬಸ್ಥರ ಮದ್ಯ ನೆರವೇರಲಿದೆ.

ಹೌದು.. ಏ.17ಕ್ಕೆ ನಿಗಧಿಯಾಗಿದ್ದ ನಿಖಿಲ್ ಹಾಗೂ ರೇವತಿ ಮದುವೆಗೆ ಕೊರೊನಾ ಕಂಟಕವಾಗಿದೆ. ಹೀಗಾಗಿ ಸಾವಿರಾರು ಜನರ ಮಧ್ಯೆ ನವ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಜೋಡಿ ಕೇವಲ ಕುಟುಂಬಸ್ಥರ ಮುಂದೆ ಹಸಮಣೆ ಎರಲಿದ್ದಾರೆ.

ದಿನಾಂಕ ನಿಗಧಿಯಾದಂತೆ ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿಯಾಗಿ ಮದುವೆ ನೆರವೇರಿಸಲು ಸಿದ್ಧತೆ ನಡೆಸಲಾಗಿತ್ತು. ಕೋರೋನಾ ಕಾರಣದಿಂದ ಮದುವೆ ಸ್ಥಳಾಂತರಕ್ಕೆ ತೀರ್ಮಾನಿಸಲಾಗಿತ್ತು. ವಧು ನಿವಾಸದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿತ್ತು.

ಆದರೀಗ ರಾಮನಗರ ಸಮೀಪದಲ್ಲೇ ಇರುವ ಕುಮಾರಸ್ವಾಮಿಯವರ ಫಾರ್ಮ್ ಹೌಸ್ ನಲ್ಲಿ ಮದುವೆ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮದುವೆಯಲ್ಲಿ ಬಂಧುಗಳು, ಆಪ್ತರು ಸೇರಿ ಕೆಲವೇ ಕೆಲವು ಮಂದಿಯಷ್ಟೇ ಭಾಗಿಯಾಗಲಿದ್ದಾರೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ 30 ಮಂದಿ ಮಾತ್ರ ಮದುವೆಗೆ ಆಗಮಿಸಲಿದ್ದಾರೆ. ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ ಎಂದು ಹೇಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights