ಮೋಸ ಮಾಡಿದ ಪ್ರಿಯಕರರನ್ನು ಗಲ್ಲಿಗೇರಿಸಿ; ಡೆತ್‌ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಪ್ರೀತಿಸಿ ಮೋಸ ಮಾಡಿದ ಯುವಕನನ್ನು ಗಲ್ಲಿಗೇರಿಸಿ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಬಿಎ ವ್ಯಾಸಂಗ ಮಾಡುತ್ತಿದ್ದ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ತನ್ನದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. 5 ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಲೋಕೇಶ್ ಎಂಬಾತ ತನ್ನನ್ನು ದೈಹಿಕವಗಿಯೂ ಬಳಸಿಕೊಂಡು, ಈಗ ಮದುವೆಯಾಗಲು ನಿರಾಕಸುತ್ತಿದ್ದಾನೆ. ತನಗೆ ಮೋಸ ಮಾಡಿದ್ದಾನೆ. ಆತನನ್ನು ಗಲ್ಲಿಗೇರಿಸಿ ಎಂದು ಯುವತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಶೋಭಾಳ ಶವ ಸಂಸ್ಕಾರ ನಡೆದ ನಂತರ ಮನೆ ಸ್ವಚ್ಛ ಗೊಳಿಸುವಾಗ ಡೆತ್ ನೋಟ್ ದೊರೆತಿದ್ದು, ಯುವತಿಯ ಕುಟುಂಬ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights