ಜೆಡಿಎಸ್ ಮತ್ತು ಬಿಜೆಪಿಯದ್ದು ಪ್ರಕೃತಿ ಸಹಜ ಸಂಬಂಧ; ಜಗದೀಶ್‌ ಶೆಟ್ಟರ್

ಕಾಂಗ್ರೆಸ್‌ ನಂಬಿ ಮೋಸಹೋದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿರುವುದು ಸರಿಯಾಗಿದೆ. ಕುಮಾರಸ್ವಾಮಿ ಬಿಜೆಪಿ ಜೊತೆಗೆ ಇದ್ದಿದ್ದರೆ ಅಧಿಕಾರದಲ್ಲಿ ಇರುತ್ತಿದ್ದರು. ಇದೀಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಜಗದೀಶ್‌ ಶೆಟ್ಟರ್ ಹೇಳಿದ್ದಾರೆ.

‘ಜೆಡಿಎಸ್ ಮತ್ತು ಬಿಜೆಪಿಯದ್ದು ಪ್ರಕೃತಿ ಸಹಜ ಸಂಬಂಧ. ಅವರು ನಮಗೆ ಬೆಂಬಲ ನೀಡಲು ಮುಂದೆ ಬಂದರೆ ಯಾವತ್ತೂ ಸ್ವಾಗತವಿದೆ. ವಿಧಾನ ಪರಿಷತ್‌ ಸಭಾಪತಿಯವರನ್ನು ಕೆಳಗಿಳಿಸಲು ಜೆಡಿಎಸ್ ನಮ್ಮ ಜೊತೆಗೆ ಕೈಜೋಡಿಸಿದರೆ ಒಳ್ಳೆಯದು. ಅದರ ನಿರೀಕ್ಷೆಯಲ್ಲಿವಿದ್ದೇವೆ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಗಾಂಧಿ ಕುಟುಂಬವನ್ನು ಬಿಟ್ಟು ಬೇರೇನೂ ಬೆಳೆಸಿಲ್ಲ. ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಯೇ ಇತರ ಪಕ್ಷಗಳು ಹುಟ್ಟಿಕೊಂಡಿವೆ. ಕಾಂಗ್ರೆಸ್‌ನವರು ಆರಂಭದಲ್ಲಿ ಎಲ್ಲರ ಜೊತೆಗೆ ಚೆನ್ನಾಗಿರುತ್ತಾರೆ. ಅವರನ್ನು ನಂಬಿ ಹೋದವರು ಮೋಸ ಹೋಗಿ ಹೊರಗೆ ಬರುತ್ತಾರೆ’ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ನಾನು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನುವು ಕೇವಲ ಊಹಾಪೋಹ. ಅಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಬಗ್ಗೆ ಈವರೆಗೆ ಎಲ್ಲಿಯೂ ಚರ್ಚೆಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ರೈತ ಹೋರಾಟಕ್ಕೆ ಬಾಲಿವುಡ್ ಗಾಯಕ ದಿಲ್ಜಿತ್ ದೋಸಂಜ್‌ ಬೆಂಬಲ; ಹೊದಿಕೆಗಾಗಿ 1 ಕೋಟಿ ರೂ ದೇಣಿಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights