ಬೆಂಗಳೂರು: ಪಾವತಿಯಾಗದ ಸಂಚಾರ ದಂಡದ ಮೊತ್ತ ಬರೋಬ್ಬರಿ 329 ಕೋಟಿ ರೂ!
2017 ರಿಂದ 2020 ರ ಅವಧಿಯ ಮೂರು ವರ್ಷಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿ, ಸಂಚಾರಿ ಇಲಾಖೆಗೆ ಪಾವತಿಯಾಗದ ಮೊತ್ತ ಬರೋಬ್ಬರಿ 329 ಕೋಟಿ ರೂ. ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದಂಡ ಪಾವತಿ ಮಾಡದೇ ಇರುವ ವಾಹನಗಳ ಮಾಲೀಕರ ವಿರುದ್ಧ ಸಂಚಾರಿ ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಪಾವತಿಯಾಗದೇ ಇರುವ 329 ಕೋಟಿ ರೂ. ಮೊತ್ತದ ಪೈಕಿ, ದ್ವಿಚಕ್ರ ವಾಹನಗಳ 73,84,462 ನಿಯಮ ಉಲ್ಲಂಘನೆ ಕೇಸ್ಗಳಿದ್ದು, ಇವುಗಳಿಂದ 258,27, 77 ,700 ರೂ. ದಂಡದ ಮೊತ್ತ ಬಾಕಿ ಇದೆ. ಆಟೋಗಳ 3,40,864 ಕೇಸ್ಗಳಿಂದ 10,47,48,200 ರೂ., ಕಾರುಗಳ 10,36.311 ಕೇಸ್ಗಳಿಂದ 41,05,23,500 ರೂ. ದಂಡದ ಮೊತ್ತ ಬಾಕಿ ಇದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಇವುಗಳಲ್ಲದೆ, ಗೂಡ್ಸ್ ವೆಹಿಕಲ್ಸ್, ಮ್ಯಾಕ್ಸಿ ಕ್ಯಾಬ್, ಮಿನಿಲಾರಿ, ಮೊಪೆಡ್ ಗಳಿಂದ ಕೋಟಿಗಟ್ಟಲೇ ದಂಡದ ಮೊತ್ತ ಬಾಕಿ ಇದೆ.
ಇಷ್ಟು ಭಾರೀ ಮೊತ್ತದ ದಂಡ ಬಾಕಿ ಇರುವುದರಿಂದಾಗಿ ಸಂಚಾರಿ ಇಲಾಖೆಯು ಫೈನ್ ಕಲೆಕ್ಟ್ ಮಾಡಲು ಸಂಚಾರಿ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ವಾಹನದ ನಂಬರ್ ಹಾಗೂ ಮಾಲೀಕರ ವಿಳಾಸ ನೀಡಿ ಫೈನ್ ಕಲೆಕ್ಟ್ ಮಾಡಲು ಸೂಚನೆ ನೀಡಲಾಗಿದೆ.
ಮೊದಲಿಗೆ ದಂಡ ಕಟ್ಟುವಂತೆ ವಾಹನ ಸವಾರರ ಮೊಬೈಲ್ಗೆ ಒಂದು ಬಾರಿ ಇಲಾಖೆಯಿಂದ ಸಂದೇಶ ಕಳಿಸಲಾಗುತ್ತದೆ. ಬಳಿಕ ದಂಡ ಕಟ್ಟದ ವಾಹನಗಳು ಪಾರ್ಕಿಂಗ್ ಲಾಟ್ನಲ್ಲೇ ಪೊಲೀಸರು ಸೀಜ್ ಮಾಡಲಿದ್ದು, ವಾಹನಗಳ ವೀಲ್ ಲಾಕ್ ಮಾಡಿ ವಶಕ್ಕೆ ಪಡೆಯುತ್ತಿದ್ದಾರೆ. ನಂತರ ಮನೆ ಬಳಿ ತೆರಳಿ ನೋಟಿಸ್ ಕೊಟ್ಟು ಫೈನ್ ಪಾವತಿಸಲು ಸೂಚಿಸಲಾಗತ್ತೆ.
ಒಂದು ಬಾರಿ ಸಂದೇಶ ಬಂದು ಎರಡು ಬಾರಿ ನೀಡುವ ನೋಟಿಸ್ಗೆ ಫೈನ್ ಕಟ್ಟದಿದ್ದರೆ ಸಿಕ್ಕಲ್ಲಿ ವಾಹನ ಸೀಜ್ ಮಾಡಲಾಗುತ್ತದೆ. ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆ, ಬೆಂಗಳೂರು ಒನ್ ಹಾಗೂ ನೋಟಿಸ್ ನೀಡಲು ಬಂದತಹ ವೇಳೆಯಲ್ಲಿ ಸವಾರರು ಫೈನ್ ಕಟ್ಟಬಹುದಾಗಿದೆ.
ಇದನ್ನೂ ಓದಿ: ರೈತರು ಮತ್ತು ‘ಗೋದಿ ಮೀಡಿಯಾ’: ನ್ಯೂಸ್ ಚಾನೆಲ್ಗಳ ಧೋರಣೆಗಳೇನು ಓದಿ!


Whether there is any reduction in the number of incidents of traffic violations despite this hefty fine ? If “no” how come imposing fine could be a deterrent ? If “yes” are there no traffic violations now ? The aim of the authorities should be to achieve compliance to the rules and not simply collecting the fine.