ಫೀಸ್ ಟಾರ್ಚರ್ ನಿಂದ ಬೇಸತ್ತ ಪೋಷಕರಿಗೆ ಗುಡ್ ನ್ಯೂಸ್ : ಖಾಸಗೀ ಶಾಲೆಗಳ ಶುಲ್ಕ ನಿಗಧಿ!

ಫೀಸ್ ಟಾರ್ಚರ್ ನಿಂದ ಬೇಸತ್ತ ಪೋಷಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ ಖಾಸಗೀ ಶಾಲೆಗಳ ಶುಲ್ಕ ನಿಗಧಿ ಮಾಡಿದೆ.

ಸದ್ಯಕ್ಕೆ 70%ರಷ್ಟು ಮಾತ್ರ ಶಾಲಾ ಶುಲ್ಕ ಪಾವತಿಗೆ ಆದೇಶ ಹೊರಡಿಸಲಾಗಿದೆ. ಇಂದು ಬೆಳಗೂರಿನಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ” 2019ರಲ್ಲಿ ಪಡೆದ ಭೋದನ ಶುಲ್ಕದಲ್ಲಿ ಶೇ.70ರಷ್ಟು ಮಾತ್ರ 2020-2021ಕ್ಕೆ ತೆಗೆದುಕೊಳ್ಳಬೇಕು. ಶಾಲೆಗಳು ಅಭಿವೃದ್ಧಿ ಶುಲ್ಕವನ್ನು ಪಡಿಯೋಹಾಗಿಲ್ಲ. ರಾಜ್ಯದ ಎಲ್ಲಾ ಮಾದರಿಯ ಶಾಲೆಗಳಿಗೂ ಇದು ಅನ್ವಯವಾಗುತ್ತದೆ” ಎಂದು ಆದೇಶ ಹೊರಡಿಸಿದ್ದಾರೆ.

ಜೊತೆಗೆ 1,2 ಮತ್ತು 3 ಕಂತುಗಳಲ್ಲಿ ಫೀಸ್ ಪಡೆದುಕೊಳ್ಳಬಹುದು ಎಂದಿದ್ದಾರೆ. ಈಗಾಗಲೇ ಹೆಚ್ಚುವರಿ ಪೀಸ್ ಕಟ್ಟಿದ್ದರೆ ಮುಂದಿನ ವರ್ಷಕ್ಕೆ ಸರಿದೂಗಿಸಿಕೊಳ್ಳಬೇಕು. ಈ ಒಂದು ವರ್ಷ ಎಲ್ಲರಿಗೂ ಕಷ್ಟವಾಗಿದೆ. ಹೀಗಾಗಿ ಎಲ್ಲರಿಗೂ ನಾನು ನಮ್ಮವರು ಎನ್ನುವ ಮನೋಭಾವ ಬರಬೇಕು. ಈ ಮನೋಭಾವ ಪೋಷಕರಿಗೂ ಬರಲಿ ಆಡಳಿತ ಮಂಡಳಿಗೂ ಬರಲಿ ಎಂದಿದ್ದಾರೆ.

ನಿನ್ನೆಯಷ್ಟೇ ಪೋಷಕರು ಅಧಿಕ ಶಾಲಾ ಶುಲ್ಕ ಪಾವತಿ ವಿಚಾರವಾಗಿ ಮತ್ತೆ ಧ್ವನಿ ಎತ್ತಿದ್ದರು. ಒಂದು ವೇಳೆ ಸರ್ಕಾರ ಶುಲ್ಕ ನಿರ್ಧಾರ ಮಾಡದೇ ಹೋದಲ್ಲಿ ಇದೇ ಭಾನುವಾರ ಜನವರಿ 31ಕ್ಕೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಇಂದು ಸಭೆ ಬಳಿಕ ಮಾತನಾಡಿದ ಸುರೇಶ್ ಕುಮಾರ್ ಪೋಷಕರ ಆರ್ಥಿಕ ಹೊರೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights