ಫ್ಯಾಕ್ಟ್‌ಚೆಕ್: ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ವೈರಲ್ ವಿಡಿಯೋ ಹಿಂದಿನ ವಾಸ್ತವವೇನು?

ಬುಲ್ಡೋಜರ್ ಬಳಸಿ ಹಿಂದೂ ದೇವರ ವಿಗ್ರಹಗಳನ್ನು ಕಸದಂತೆ ತೆಗೆಯುತ್ತಿರುವ ದೃಶ್ಯಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ, 11 ಆಗಸ್ಟ್ 2019 ರಂದು ಐಎಎಸ್ ಅಧಿಕಾರಿ ವಿಜಯ್ ನೆಹ್ರಾ ಅವರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪತ್ರಕರ್ತರೊಬ್ಬರು ರೀ ಟ್ವೀಟ್ ಮಾಡಿರುವ ಇದೇ ರೀತಿಯ ದೃಶ್ಯಗಳ ವೀಡಿಯೊ ಕಂಡುಬಂದಿದೆ.

ಟ್ವೀಟ್‌ನಲ್ಲಿ ಐಎಎಸ್ ವಿಜಯ್ ನೆಹ್ರಾ ಅಹಮದಾಬಾದ್ ನಾಗರಿಕರ ಮಾದರಿಯನ್ನು ಶ್ಲಾಘಿಸಿದ್ದಾರೆ. ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿ ದಶಮ (ಸ್ಥಳೀಯ ದೇವತೆ) ವಿಗ್ರಹಗಳನ್ನು ಬಿಡಲಾಗುತ್ತಿದೆ. ಹಲವಾರು ಬಳಕೆದಾರರು ಆಗಸ್ಟ್ 2019 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

2019 ರಲ್ಲಿ ಮಾಲಿನ್ಯವನ್ನು ತಡೆಗಟ್ಟವ ಸಲುವಾಗಿ, ಸಬರಮತಿ ನದಿ ನೀರಿಗೆ ವಿಗ್ರಹಗಳನ್ನು ಬಿಡದೆ, ನದಿಯ ದಡದಲ್ಲಿ ಇಡುವಂತೆ  ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ನಾಗರೀಕರನ್ನು ವಿನಂತಿಸಿತು. ಮುನ್ಸಿಪಲ್ ಕಾರ್ಪೊರೇಷನ್ ಮನವಿಗೆ, ಸ್ಪಂದಿಸಿದ್ದ ಭಕ್ತರು ತಮ್ಮ ವಿಗ್ರಹಗಳನ್ನು ಸಬರಮತಿ ನದಿಯ ದಡದಲ್ಲಿ ಬಿಟ್ಟರು. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು ಬುಲ್ಡೋಜರ್‌ಗಳು ಸಬರಮತಿ ನದಿಯ ದಡದಲ್ಲಿ ಇರಿಸಲಾಗಿರುವ ದಶಮ ವಿಗ್ರಹಗಳನ್ನು ಎತ್ತುತ್ತಿರುವಾಗ ತೆಗೆಯಲಾಗಿದೆ.

ಅದೇ ಮಾಹಿತಿಯನ್ನು ವರದಿ ಮಾಡಿ, ‘ದಿವ್ಯ ಭಾಸ್ಕರ್’ 2019 ರಲ್ಲಿ ಪ್ರಕಟವಾದ ಲೇಖನದಲ್ಲಿ ಬುಲ್ಡೋಜರ್ ದಶಮ ವಿಗ್ರಹಗಳನ್ನು ಎತ್ತುವ ಇದೇ ರೀತಿಯ ಫೋಟೋವನ್ನು ಪ್ರಕಟಿಸಿತು. ಅಹಮದಾಬಾದ್ ನಿವಾಸಿಗಳು ತಮ್ಮ ವಿಗ್ರಹಗಳನ್ನು ಸಬರಮತಿ ನದಿಯ ಮುಂಭಾಗದಲ್ಲಿ ಬಿಟ್ಟ ಘಟನೆಯನ್ನು ವರದಿ ಮಾಡಿದ ಇತರ ಕೆಲವು ಸುದ್ದಿ ಲೇಖನಗಳು ಮತ್ತು ವೀಡಿಯೊಗಳು. ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಸಂಕ್ಷಿಪ್ತವಾಗಿ ಹೇಳುವುದಾದರೆ, 2019 ರಲ್ಲಿ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಮಾಲಿನ್ಯವನ್ನು ತಡೆಗಟ್ಟಲು ದಶಮ ವಿಗ್ರಹಗಳನ್ನು ಸಬರಮತಿ ನದಿಯ ನೀರಿಗೆ ಬಿಡದೆ ದಡದಲ್ಲಿ ಇರಿಸುವಂತೆ ನಾಗರಿಕರನ್ನು ವಿನಂತಿಸಿತು. ಮುನ್ಸಿಪಲ್ ಕಾರ್ಪೊರೇಷನ್ ಮನವಿಯನ್ನು ಅನುಸರಿಸಿ, ಭಕ್ತರು ತಮ್ಮ ವಿಗ್ರಹಗಳನ್ನು ಸಬರಮತಿ ನದಿಯ ದಡದಲ್ಲಿ ಇಟ್ಟಿದ್ದರು. ಅವುಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗಿದೆ. ಈ ಹಳೆಯ ಘಟನೆಯನ್ನು, ಗಣಪತಿ ಹಬ್ಬದಂದು ನಡೆದ ಘಟನೆ ಎಂಬಂತೆ ಚಿತ್ರಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕಾರುಗಳು ನಿಗೂಢವಾಗಿ ಅಪಘಾತವಾಗುವ ವಿಡಿಯೋದ ಅಸಲಿ ಕಥೆಯೇನು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights