ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಪುಸ್ತಕ ಬಿಡುಗಡೆ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡ BJP

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಸ್ತಕ ಬಿಡುಗಡೆ ಮಾಡುತ್ತಿರುವ ದೃಶ್ಯಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ ಪುಸ್ತಕದ ಹಿಂಭಾಗವನ್ನು ತೋರಿಸಲು ಪತ್ರಕರ್ತರು ಕೇಳಿದಾಗ ಅವರು ಹಿಂದೆ ತಿರುಗಿ ಬೆನ್ನು ತೋರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

BJP ಹಾಗೂ ಬಲಪಂಥೀಯ ಪ್ರತಿಪಾದಕಿ ಶಕುಂತಲಾ ನಟರಾಜ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ರಾಹುಲ್ ಗಾಂಧಿ ಅವರ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ಆ ಪೋಸ್ಟ್‌ನ ಶೀರ್ಷಿಕೆ ಹೀಗಿದೆ. “ಅದನ್ನೂ ಹಿಂದಿನಿಂದ ತೋರಿಸು ಎಂದು ಪತ್ರಕರ್ತರು ಹೇಳಿದಾಗ.. ರಾಗಾ ರಿಯಾಕ್ಷನ್ ” ಹೇಗಿದೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿಯನ್ನು ವ್ಯಂಗ್ಯದ ರೀತಿಯಲ್ಲಿ ಚಿತ್ರಿಸಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.  ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ :

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಗೂಗಲ್ ಸರ್ಚ್ ಮಾಡಿದಾಗ, 19 ಜನವರಿ 2021 ರಂದು AICC ಪ್ರಧಾನ ಕಚೇರಿಯಲ್ಲಿ ನಡೆದ ರಾಹುಲ್ ಗಾಂಧಿಯವರ ವಿಶೇಷ ಪತ್ರಿಕಾಗೋಷ್ಠಿಯ ದೃಶ್ಯಗಳು ಲಭ್ಯವಾಗಿದೆ.

ಈ ಪತ್ರಿಕಾಗೋಷ್ಠಿಯ ಲೈವ್ ಸ್ಟ್ರೀಮಿಂಗ್ ವಿಡಿಯೊವನ್ನು ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹೊಸ ಕೃಷಿ ಕಾನೂನುಗಳ ಕುರಿತು ಬರೆದ ‘ಖೇತಿ ಕಾ ಖೂನ್’ ಕಿರುಪುಸ್ತಕವನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.  ಆ ದೃಶ್ಯಗಳನ್ನು ವೀಡಿಯೊದ 2:07 ಟೈಮ್‌ಸ್ಟ್ಯಾಂಪ್‌ನಲ್ಲಿ ನೋಡಬಹುದು.

ಈ ಕಿರುಪುಸ್ತಕವನ್ನು ಪತ್ರಕರ್ತರಿಗೆ ತೋರಿಸುತ್ತಿರುವಾಗ ರಾಹುಲ್ ಗಾಂಧಿ ಮಾತನಾಡುತ್ತ “ನಾವು ಎಷ್ಟು ದೂರದಲ್ಲಿದ್ದೇವೆ ನೋಡಿ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಬುಕ್ಲೆಟ್ ತೋರಿಸುತ್ತಿದ್ದೇವೆ. ಅದು ಬಿಜೆಪಿಯಾಗಿದ್ದರೆ, ಅವರ ನಾಯಕರು ಈ ರೀತಿ ಮರೆಮಾಚುವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದರು” ಎಂದು  2.24 ನಿಮಿಷಗಳ ವೀಡಿಯೊದಲ್ಲಿ ಹೇಳಿರುವುದನ್ನು ನಾವು ನೋಡಬಹುದು. ಬಿಜೆಪಿ ನಾಯಕರು ಮರೆಮಾಚುವ ರೀತಿಯಲ್ಲಿ ಬುಕ್ಲೆಟ್ ಅನ್ನು ಪ್ರದರ್ಶಿಸುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಆಡಿಯೋವನ್ನು ಮತ್ತು ವಿಡಿಯೊವನ್ನು ಎಡಿಟ್ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಬಲಪಂಥೀಯ ಪ್ರತಿಪಾದಕರು ಹಂಚಿಕೊಳ್ಳಲಾಗಿದೆ.

ಇಂಡಿಯನ್ ಯೂತ್ ಕಾಂಗ್ರೆಸ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಯೂಟ್ಯೂಬ್ ವೀಡಿಯೊದಲ್ಲಿ ನಾವು ಮೂಲ ಆಡಿಯೊದೊಂದಿಗೆ ಅದೇ ದೃಶ್ಯಗಳನ್ನು ನೋಡಬಹುದು. ‘ಖೇತಿ ಕಾ ಖೂನ್’ ಕಿರುಪುಸ್ತಕವನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡುವುದರ ಕುರಿತು ಪ್ರಕಟವಾದ ಲೇಖನಗಳು ಮತ್ತು ಮಾಧ್ಯಮ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ಎಡಿಟ್ ಮಾಡಲ್ಪಟ್ಟಿದೆ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, 19 ಜನವರಿ 2021 ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ಎಡಿಟ್ ಮಾಡಿದ ಕ್ಲಿಪ್ ಆಗಿದೆ. ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿ ಹೊಸ ಕೃಷಿ ಕಾನೂನುಗಳ ಕುರಿತು ಪ್ರಕಟಿಸಲಾದ ‘ಖೇತಿ ಕಾ ಖೂನ್’ (ರೈತನ ಕಗ್ಗೊಲೆ) ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪತ್ರಕರ್ತರನ್ನು ಪ್ರದರ್ಶಿಸುವಾಗ, ಬಿಜೆಪಿ ನಾಯಕರಾಗಿದ್ದರೆ ತಮ್ಮ ಪುಸ್ತಕವನ್ನು ಮರೆಮಾಚುತ್ತಿದ್ದರು ಎಂದು ಹಿಂದೆ ತಿರುಗಿ ತೋರಿಸುವ ವಿಡಿಯೋವನ್ನು ಬಲಪಂಥೀಯರು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಮುದ್ರ ಮಧ್ಯದಲ್ಲಿ ದೈತ್ಯಾಕಾರದ ಹಾವು ಹೆಡೆ ಎತ್ತಿರುವುದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights