ಕೊರೊನಾ ಹುಟ್ಟು ಆಕಸ್ಮಿಕವೋ? ಉದ್ದೇಶಪೂರ್ವಕವೋ? ಮೂಲ ಪತ್ತೆಗಾಗಿ ಜೋ ಬಿಡನ್ ಆದೇಶ!

ಇಡೀ ವಿಶ್ವವನ್ನೇ ಕಿತ್ತು ತಿನ್ನುತ್ತಿರುವ ಕೊರೊನಾದಿಂದ ಮುಕ್ತಿ ಯಾವಾಗ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಯಾರ ಹಿಡಿತಕ್ಕೂ ಸಿಗದೆ ಇಷ್ಟೊಂದು ಅಟ್ಟಹಾಸ ಮೆರೆಯುತ್ತಿರುವ ಈ ಕೊರೊನಾ ಮೂಲ ಯಾವುದು ಅನ್ನೋದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಇದನ್ನು ಬುಡದಿಂದಲೇ ಕಿತ್ತು ಹಾಕಲು ವಿಶ್ವದ ದೊಡ್ಡಣ್ಣ ಮಹತ್ತರ ಹೆಜ್ಜೆ ಇಟ್ಟಿದ್ದಾರೆ. ಹೌದು… ಕೊರೊನಾ ಮೂಲ ಪತ್ತೆಗಾಗಿ ಗುಪ್ತಚರ ಸಂಸ್ಥೆ ಸಿಐಎಗೆ ಜೋ ಬಿಡನ್ ಆದೇಶ ನೀಡಿದ್ದಾರೆ.

ಕೊರೊನಾ ವೈರಸ್ ಹರಡಿ ಒಂದೂವರೆ ವರ್ಷ ಕಳೆದಿದೆ. ನಮ್ಮಲ್ಲಿ ವೈರಲ್ ಗೆ ಲಸಿಕೆ ಕಂಡುಹಿಡಿಯಲಾಯ್ತೆ ವಿನ: ಕೊರೊನಾ ವೈರಸ್ ಮೂಲ ಮಾತ್ರ ಸ್ಪಷ್ಟವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಿಂದ ನೇಮಕವಾದ ಅಂತಾರಾಷ್ಟ್ರೀಯ ತಜ್ಞರ ಸಮಿತಿಯು ಚೀನಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತನ್ನ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದೆ. ಆದರೇ ನಿರ್ದಿಷ್ಟವಾಗಿ ಇಲ್ಲಿಂದಲೇ ವೈರಸ್ ಸೃಷ್ಟಿಯಾಗಿ ಇಡೀ ಜಗತ್ತಿಗೆ ಹರಡಿದೆ ಎಂದು ಹೇಳಲು ಅಂತಾರಾಷ್ಟ್ರೀಯ ತಜ್ಞರಿಗೆ ಈವರೆಗೆ ಸಾಧ್ಯವಾಗಿಲ್ಲ. ಬಾವಲಿಗಳಿಂದ ಬೇರೆ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನೇಮಿಸಿದ್ದ ತಜ್ಞರ ಸಮಿತಿ ಹೇಳಿತ್ತು.

ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಎಲ್ಲಿಂದ ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ. ಕೊರೊನಾ ಸೃಷ್ಟಿಗೆ ಎರಡು ಸಾಧ್ಯತೆಗಳಿವೆ. ಮೊದಲನೆಯದಾಗಿ ಕೊರೊನಾ ವೈರಸ್ ಈಗಾಗಲೇ ತಗುಲಿದ್ದ ಪ್ರಾಣಿಯಿಂದ ಅದು ಮನುಷ್ಯರಿಗೆ ಬಂದಿರಬಹುದು. ಎರಡನೆಯದಾಗಿ ಚೀನಾದ ವುಹಾನ್ ಲ್ಯಾಬೋರೇಟರಿಯಲ್ಲಿ ಕೊರೊನಾ ವೈರಸ್ ಪರೀಕ್ಷೆ ವೇಳೆ ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ ಸೋರಿಕೆಯಾಗಿ ವಿಶ್ವಕ್ಕೆ ಹರಡಿರಬಹುದು. ಕೊರೊನಾ ವೈರಸ್ ಸೃಷ್ಟಿಯಾಗಿ ಹರಡಿದ್ದರ ಬಗ್ಗೆ ಈ ಎರಡು ಸಾಧ್ಯತೆಗಳ ಬಗ್ಗೆ ಕಳೆದ ವರ್ಷದಿಂದ ಚರ್ಚೆಯಲ್ಲಿದೆ.

ಕೊರೊನಾ ವೈರಸ್ ಸೋಂಕು ಹೇಗೆ ಹರಡಿತು ಎನ್ನುವುದು ಚೀನಾದ ವಿಜ್ಞಾನಿಗಳು ಹಾಗೂ ಸರ್ಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಆದರೆ, ತಮಗೆ ಗೊತ್ತಿರುವ ಸತ್ಯವನ್ನು ಜಗತ್ತಿನ ಎದುರು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. ಕೊರೊನಾ ವೈರಸ್ ಚೀನಾ ದೇಶದಲ್ಲೇ ಮೊದಲು ಸೃಷ್ಟಿಯಾಗಿದ್ದರೂ, ಚೀನೀ ವೈರಸ್ ಎಂದು ಕರೆಯಬೇಡಿ ಅಂತ ಆಮೆರಿಕಾದ ಅಧ್ಯಕ್ಷರಿಗೆ ಹೇಳಿದೆ. ಈಗಲೂ ಚೀನಾ ದೇಶದ್ದು ಅದೇ ನಿಲುವು. ಕೊರೊನಾ ವೈರಸ್ ಮೂಲದ ಬಗ್ಗೆ ಚೀನಾ ದೇಶವೇ ಇಷ್ಟೊತ್ತಿಗೆ ತನಿಖೆ ನಡೆಸಿ ಸತ್ಯವನ್ನು ಜಗತ್ತಿಗೆ ಹೇಳಿದ್ದರೆ, ಒಳ್ಳೆಯದಿತ್ತು. ಆದರೆ, ಚೀನಾ ಸತ್ಯವನ್ನು ಜಗತ್ತಿನ ಎದುರು ಒಪ್ಪಿಕೊಳ್ಳುವಂತೆ ತೋರುತ್ತಿಲ್ಲ.

ಈಗ ವಿಶ್ವದ ಪ್ರಭಾವಿ ದೇಶ ಆಮೆರಿಕದ ಅಧ್ಯಕ್ಷ ಜೋಸೆಫ್ ಬೈಡೆನ್, ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಹೇಗೆ? ವೈರಸ್ ಮೂಲ ಯಾವುದು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ನೀಡುವಂತೆ ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎಗೆ ಸೂಚನೆ ನೀಡಿದ್ದಾರೆ. ಸಿಐಎ, ವುಹಾನ್ ಲ್ಯಾಬೋರೇಟರಿಯಿಂದ ವೈರಸ್ ಸೋರಿಕೆಯಾಗಿದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights