ಮಧ್ಯಪ್ರದೇಶ: ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ; ಒಂದೂವರೆ ವರ್ಷದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟ 27 ಶಾಸಕರು

ಮಧ್ಯಪ್ರದೇಶದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಖಾಂಡ್ವಾ ಲೋಕಸಭೆ ಕ್ಷೇತ್ರ ಮತ್ತು ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಕೆಲವೇ ದಿನಗಳ ಮೊದಲು ಪಕ್ಷದ ಶಾಸಕ ಸಚಿನ್ ಬಿರ್ಲಾ ಭಾನುವಾರ ಆಡಳಿತಾರೂಢ BJPಗೆ ಸೇರ್ಪಡೆಗೊಂಡಿದ್ದಾರೆ.

2021 ಮಾರ್ಚ್ ನಿಂದ ಇಲ್ಲಿಯವರೆಗೆ ಬಿಜೆಪಿಗೆ ಸೇರಿದ ಕಾಂಗ್ರೆಸ್‌ ಶಾಸಕರಲ್ಲಿ ಇವರು 27ನೇ ಕಾಂಗ್ರೆಸ್ ಶಾಸಕರಾಗಿದ್ದಾರೆ. ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡರು. ಇದರಿಂದಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡು ಬಿಜೆಪಿ ಪಕ್ಷ ಅಧಿಕಾರಕ್ಕೇರಿತ್ತು. ನಂತರದಲ್ಲಿ ಇತರ ನಾಲ್ಕು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು.

ಖಾಂಡ್ವಾ ಲೋಕಸಭಾ ಉಪಚುನಾವಣೆಯ ಚುನಾವಣಾ ರ್ಯಾಲಿಯ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಬಿರ್ಲಾ ಅವರು ಬಿಜೆಪಿ ಸೇರಿದ್ದಾರೆ.

40 ವರ್ಷದ ಬಿರ್ಲಾ ಅವರು 2018 ರಲ್ಲಿ ಖಾರ್ಗೋನ್ ಜಿಲ್ಲೆಯ ಬದ್ವಾಹ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಹಿತೇಂದ್ರ ಸಿಂಗ್ ಸೋಲಂಕಿ ಅವರನ್ನು ಸುಮಾರು 30,500 ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದರು.

ಇದನ್ನೂ ಓದಿ: ಆರ್ಯನ್‌ ಖಾನ್ ಬಿಡುಗಡೆಗೆ ಎನ್‌ಸಿಬಿ ಅಧಿಕಾರಿಗಳು ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಕೇಳಿದ್ದಾರೆ: ಸಾಕ್ಷಿದಾರ ಆರೋಪ

ಬಿರ್ಲಾ ಪ್ರತಿನಿಧಿಸುವ ಬದ್ವಾಹ್ ಅಸೆಂಬ್ಲಿ ಕ್ಷೇತ್ರವು ಖಾರ್ಗೋನ್ ಜಿಲ್ಲೆಯಲ್ಲಿ ಬರುತ್ತದೆಯಾದರೂ, ಇದು ಖಾಂಡ್ವಾ ಲೋಕಸಭಾ ಸ್ಥಾನದ ಒಂದು ಭಾಗವಾಗಿದೆ. ಅಲ್ಲಿ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ. ಇದರ ಜೊತೆಗೆ ರಾಜ್ಯದ ಇತರ ಮೂರು ವಿಧಾನಸಭಾ ಸ್ಥಾನಗಳಿಗೂ ಉಪಚುನಾವಣೆ ನಡೆಯಲಿದೆ.

ಬಿಜೆಪಿ ಸೇರಿದ ನಂತರ ಮಾತನಡಿದ ನಿರ್ಲಾ, ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ ನಾಥ್‌ ವಿರುದ್ದ ಆರೋಪಗಳನ್ನು ಮಾಡಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಕಮಲ್‌ ನಾಥ್‌ ಅವರನ್ನು ಭೇಟಿಯಾಗಲು ಪ್ರಯತ್ನಿಸಿದಾಗಲೆಲ್ಲಾ ಅವರು ತಮಗೆ ಸಮಯ ಕೊಡಲಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ಚೌಹಾಣ್ ಅವರು ನನ್ನ ಸಮಸ್ಯೆಗಳನ್ನು ಆಲಿಸಿದರು. ನನ್ನ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಅವರು ಹೇಳಿದ್ದಾರೆ.

ಬಿರ್ಲಾ ಅವರು ಬಿಜೆಪಿ ಸೇರಿದ ನಂತರ ಕಮಲ್ ನಾಥ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಬಿಜೆಪಿ ಒಪ್ಪಂದಗಳನ್ನು ಮಾಡುವ ಮೂಲಕ ಮತ್ತೆ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದೆ. ಮತ್ತೊಮ್ಮೆ ಚೌಕಾಶಿ ರಾಜಕಾರಣ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತರುವಲ್ಲಿ ಬಿಜೆಪಿಗರು ತೊಡಗಿದ್ದಾರೆ ಮತ್ತು ಜನರ ಮತದಾನದ ಹಕ್ಕನ್ನು ಅವಮಾನಿಸಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಠೇವಣಿ ಕಳೆದುಕೊಳ್ಳುವ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೇ?: ಲಾಲೂ

“ಕಾಂಗ್ರೆಸ್ ದುರ್ಬಲವಾಗುತ್ತಿದೆ ಮತ್ತು ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಯುವ ನಾಯಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಪಕ್ಷವನ್ನು ತೊರೆಯುತ್ತಿದ್ದಾರೆ. ಈ ನಾಯಕರು ಬಿಜೆಪಿಯಲ್ಲಿ ಉತ್ತಮ ರೀತಿಯಲ್ಲಿ ಜನರಿಗೆ ಸೇವೆ ಸಲ್ಲಿಸಬಹುದು ಮತ್ತು ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಸಿಎಂ ಚೌಹಾಣ್‌ ಹೇಳಿದ್ದಾರೆ.

2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿದ ಕಾಂಗ್ರೆಸ್‌ ಸರ್ಕಾರವನ್ನು ರಚಿಸಿತ್ತು. ಆದರೆ, 2020ರ ಮಾರ್ಚ್‌ನಲ್ಲಿ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಇದರಿಂದಾಗಿ ಕಾಂಗ್ರೆಸ್‌ ಬಹುಮತ ಕಳೆದುಕೊಂಡಿತು. ಸರ್ಕಾರ ಉರುಳಿತು.

ಇದೀಗ, ಬಿರ್ಲಾ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲವು 94ಕ್ಕೆ ಇಳಿಯುತ್ತದೆ. ಬಿಜೆಪಿ 125 ಶಾಸಕರನ್ನು ಹೊಂದಿದೆ, 230 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 116 ಶಾಸಕರ ಅಗತ್ಯವಿದ್ದು, ಬಿಜೆಪಿ ಇನ್ನೂ 09 ಹೆಚ್ಚುವರಿ ಶಾಸಕರನ್ನು ಹೊಂದಿದೆ.

ಪ್ರಸ್ತುತ, ಜೋಬತ್ (ಅಲಿರಾಜಪುರ), ಪೃಥ್ವಿಪುರ (ನಿವಾರಿ) ಮತ್ತು ರಾಯಗಾಂವ್ (ಸತ್ನಾ) ಸೇರಿದಂತೆ ಮೂರು ವಿಧಾನಸಭಾ ಸ್ಥಾನಗಳು ಖಾಲಿಯಿದ್ದು, ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದೆ.

ವಿಧಾನಸಭೆಯಲ್ಲಿ ಎರಡು ಬಿಎಸ್‌ಪಿ, ಒಬ್ಬ ಎಸ್‌ಪಿ ಮತ್ತು ನಾಲ್ಕು ಸ್ವತಂತ್ರ ಶಾಸಕರು ಇದ್ದಾರೆ.

ಇದನ್ನೂ ಓದಿ: ತಾವು ಬಿಜೆಪಿಯಲ್ಲಿ ಇರುವುದರಿಂದ ಇಡಿ ದಾಳಿಯ ಭಯವಿಲ್ಲ: ಮಹಾರಾಷ್ಟ್ರ ಬಿಜೆಪಿ ಸಂಸದ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights