ಆರ್ಯನ್‌ ಖಾನ್ ಬಿಡುಗಡೆಗೆ ಎನ್‌ಸಿಬಿ ಅಧಿಕಾರಿಗಳು ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಕೇಳಿದ್ದಾರೆ: ಸಾಕ್ಷಿದಾರ ಆರೋಪ

ಮುಂಬೈನ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯ ಸಂದರ್ಭದಲ್ಲಿ ಡ್ರಗ್ಸ್‌ ಪ್ರಕರಣದ ಮೇಲೆ ಬಂಧಿಸಲಾಗಿರುವ ಬಾಲಿವುಡ್ ನಟ ಶಾರುಖ್ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರನ್ನು ಬಿಡುಗಡೆ ಮಾಡಲು ಎನ್‌ಸಿಬಿ ಅಧಿಕಾರಿಗಳು 25 ಕೋಟಿ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

ಡ್ರಗ್ಸ್‌ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪ್ರ ಭಾಕರ್ ಸೈಲ್‌ ಎಂಬುವವರು ಈ ಆರೋಪ ಮಾಡಿದ್ದಾರೆ. ಎನ್‌ಸಿಬಿ ಅಧಿಕಾರಿಗಳು ತಮ್ಮಿಂದ 09 ಖಾಲಿ ಹಾಳೆಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಎನ್‌ಸಿಬಿ ಅಧಿಕಾರಿಗಳು ಮತ್ತು ಇನ್ನಿಬ್ಬರು ಸಾಕ್ಷಿದಾರ ಸೇರಿಕೊಂಡು ಶಾರುಖ್‌ ಖಾನ್‌ ಬಳಿ 25 ಕೋಟಿ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸೈಲ್‌ ಆರೋಪಿಸಿದ್ದಾರೆ.

ಸೈಲ್‌ ಅಲ್ಲದೆ, ಇನ್ನಿಬ್ಬರು ಸಾಕ್ಷಿಗಳಾದ ಗೋಸಾವಿ ಮತ್ತು ಸ್ಯಾಮ್‌ ಡಿಸೋಜಾ ಎಂಬುವವರು ಎನ್‌ಸಿಬಿ ಅಧಿಕಾರಿಗಳೊಂದಿಗೆ ಸೇರಿ 25 ಕೋಟಿ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಣ ಕೊಟ್ಟರೆ ಆರ್ಯನ್‌ ಖಾನ್‌ರನ್ನು ಬಿಡುಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಸೈಲ್‌ ಆರೋಪಿಸಿದ್ದಾರೆ.

ಈ ಆರೋಪವನ್ನು ಎನ್‌ಸಿಬಿ ಅಧಿಕಾರಿಗಳು ಅಲ್ಲಗಳೆದಿದ್ದು, ಈ ಆರೋಪ ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್‌ ಸಕ್ಕರೆ ಪುಡಿಯಾಗಿ ಮಾರ್ಪಡುತ್ತದೆ: ಸಚಿವ ಛಗನ್ ಭುಜ್ಬಾಲ್ ವ್ಯಂಗ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights