ICC ಟಿ-20 ವಿಶ್ವಕಪ್‌: ಟೀಂ ಇಂಡಿಯಾ ವಿರುದ್ದ ಪಾಕ್‌ಗೆ ಮೊದಲ ಜಯ!

2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಿ-20 ವಿಶ್ವಕಪ್‌ ಸರಣಿಗಳಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ದ ಸೋಲುಂಡಿದ್ದು, ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲಿಗೆ ಬ್ಯಾಟಿಂಗ್‌ ಮಾಡಿತು. 20 ಓವರ್ ಗಳಲ್ಲಿ 7 ವಿಕೆಟ್​ಗಳ ನಷ್ಟಕ್ಕೆ 151 ರನ್ ಗಳಿಸಿತು. ಈ ಮೊತ್ತದ ರನ್‌ಗಳ ಬೆನ್ನಟ್ಟಿದ ಪಾಕಿಸ್ತಾನ ತಂಡ, ಯಾವುದೇ ವಿಕೆಟ್‌ಗಳ ನಷ್ಟವಿಲ್ಲದೆ 17.5 ಓವರ್​ಗಳಲ್ಲಿ ಸುಲಭವಾಗಿ ಟೀಂ ಇಂಡಿಯಾವನ್ನು ಮಣಿಸಿ, ಗೆಲುವಿನ ನಗೆ ಬೀರಿತು.

ಪಾಕ್‌ ತಂಡದ ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಪಾಕ್‌ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಮೊಹಮ್ಮದ್ ರಿಜ್ವಾನ್ ಅಜೇಯರಾಗಿ 79 ರನ್‌ ಬಾರಿಸಿದರೆ, ಬಾಬರ್ ಅಜಮ್ ಅಜೇಯರಾಗಿ 68 ರನ್ ಸಿಡಿಸಿದರು. ಅಂತೆಯೇ, ಬೌಲರ್ ಆದ ಶಹೀನ್ ಅಫ್ರಿದಿ ಅವರು 3 ವಿಕೆಟ್‌ಗಳನ್ನು ಪಡೆದರು. ಇದು, ಪಾಕ್‌ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಯಿತು. ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ದ ಪಾಕಿಸ್ತಾನ ತಂಡ ಗೆಲುವು ಸಾಧಿಸಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ.

ನಿರಸ ಪ್ರದರ್ಶನ ತೋರಿದ ಟೀಂ ಇಂಡಿಯಾ:

ಟೀಂ ಇಂಡಿಯಾದ ಕ್ಯಾಪ್ಟರ್ ವಿರಾಟ್‌ ಕೋಹ್ಲಿ ಅವರನ್ನು ಬಿಟ್ಟರೆ, ಉಳಿದ ಯಾವುದೇ ಆಟಗಾರರು ಉತ್ತರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ರೋಹಿತ್ ಶರ್ಮಾ ಖಾತೆ ತೆರೆಯುವ ಮುನ್ನವೇ ವಿಕೆಟ್ ನೀಡಿದರು. ಕೆಎಲ್ ರಾಹುಲ್ ಕೇವಲ 3 ರನ್‌ಗಳಿಸಿ ಔಟ್‌ ಆದರು. ಸೂರ್ಯಕುಮಾರ್ ಯಾದವ್ ಕೂಡ 11 ರನ್​ಗಳಿಗೆ ಓಟ್‌ ಆದರು. ಇನ್ನು, ವಿರಾಟ್ ಕೊಹ್ಲಿ ಮತ್ತು ಪಂತ್ ಅವರ ಜೊತೆಯಾಟದಿಂದಾಗಿ ಉತ್ತಮ ರನ್‌ ಕಲೆಹಾಕಲು ಸಾಧ್ಯವಾಯಿತು. ಪಂತ್ 30 ಎಸೆತಗಳಲ್ಲಿ 39 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 57 ರನ್‌ಗಳನ್ನು ಕಲೆಹಾಕಿದರು. ಟೀಂ ಇಂಡಿಯಾದ ಬೌಲರ್‌ಗಳೂ ಕೂಡ ವಿಕೆಟ್‌ ಪಡೆಯುವಲ್ಲಿ ವಿಫಲರಾದರು.

ಇದನ್ನೂ ಓದಿ: T-20 World cup: 9 ಬಾಲ್‌ಗಳಿಗೆ 42 ರನ್ ಸಿಡಿಸಿದ ಕನ್ನಡಿಗ ರಾಹುಲ್; ಟೀಂ ಇಡಿಯಾ ಭರ್ಜರಿ ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights