ಜೋರಾದ ಕಾಮಗಾರಿಗಳ ಭರಾಟೆ : ರಸ್ತೆ ದುರಸ್ಥಿಯಲ್ಲಿದೆ ನಿಧಾನವಾಗಿ ಚಲಿಸಿ…!
ಕಾಮಗಾರಿ ಪ್ರಗತಿಯಲ್ಲಿ ಇವೆ ನಿಧಾನವಾಗಿ ಚಲಿಸಿ.. ಹೌದು ಈ ಮಾತು ಬೆಳಗಾವಿ ನಗರಕ್ಕೆ ಸದ್ಯ ಸೂಕ್ತವಾಗಿ ಅನ್ವಯವಾಗಲಿದೆ. ಬೆಳಗಾವಿ ನಗರದಲ್ಲಿ ತುಂಬೆಲ್ಲ ಈಗ ಕಾಮಗಾರಿಗಳ ಭರಾಟೆ ಜೋರಾಗಿ ಸಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ನಾಲ್ಕು ತಿಂಗಳು ಕಳೆದಿದೆ. ಆದರೇ ಇದೀಗ ರಸ್ತೆ ಕಾಮಗಾರಿಗಳು ಆರಂಭವಾಗಿದೆ.
ಬೆಳಗಾವಿ ನಗರದಲ್ಲಿ ಸದ್ಯ ಕಾಲೇಜು ರಸ್ತೆ, ಬಸ್ ನಿಲ್ದಾಣ ರಸ್ತೆ, ಕೆಎಲ್ಇ ರಸ್ತೆ ಸೇರಿ ಅನೇಕ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿ ಇವೆ. ಹೀಗಾಗಿ ವಾಹನ ಸವಾರರು, ಪ್ರಯಾಣಿಕರು ಓಡಾಡೋದು ಕಷ್ಟ ಕಷ್ಟವಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ ನಾಲ್ಕು ವರ್ಷ ಕಳೆದಿದೆ. ಕೇಂದ್ರ, ರಾಜ್ಯ ಸರ್ಕಾರದಿಂದ ಯೋಜನೆ ಅನುಷ್ಠಾನಕ್ಕೆ 396 ಕೋಟಿ ರೂಪಾಯಿ ಹಣ ಸಹ ಬಿಡುಗಡೆಯಾಗಿದೆ. ಆದರೇ ಅನೇಕ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪ್ರಕ್ರಿಯೆಗಳು ವಿಳಂಬವಾಗಿವೆ.

ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆ ಕಾಮಗಾರಿ, ಅಂಡರ್ ಗ್ರೌಂಡ್ ಎಲ್ ಟಿ ವಿದ್ಯುತ್ ಕೇಬಲ್ ಅಳವಡಿಕೆ, ಸಿಟಿ ಬಸ್ ನಿಲ್ದಾಣ, ವಿವಿಧ ಕಡೆಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ ಹಾಗೂ 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ವರೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 120 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನೂ ಏಕಕಾಲದಲ್ಲಿ ಎಲ್ಲಾ ಕಾಮಗಾರಿಗಳು ನಡೆಯುತ್ತಿದ್ದು ಜನರಿಗೆ ಕಿರಿಕಿರಿ ಉಂಟಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಹೊರತು ಪಡಿಸಿ ಬೆಳಗಾವಿ ಬಸ್ ನಿಲ್ದಾಣವನ್ನು 30 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕೆಲಸ ಪ್ರಗತಿಯಲ್ಲಿ ಇದೆ. 2016ರಲ್ಲಿ ಆರಂಭವಾದ ಬಸ್ ನಿಲ್ದಾಣ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇನ್ನೂ ಬೆಳಗಾವಿಯಿಂದ ಮಹರಾಷ್ಟ್ರ, ಗೋವಾ ಸಂಪರ್ಕಿಸುವ ಸಾವಿರಾರು ಬಸ್ ಗಳು ನಿತ್ಯ ಓಡಾಡುತ್ತವೆ. ಆದರೇ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಮಾತ್ರ ಮುಗಿಯವ ಲಕ್ಷಣಗಳು ಕಾಣುತ್ತಿಲ್ಲ. ಇನ್ನೂ ರೈಲು ನಿಲ್ದಾಣದ ಉನ್ನತ್ತಿಕರಣ ಕಾಮಗಾರಿ ಸಹ ಆರಂಭವಾಗಿದೆ.

ಸ್ಮಾರ್ಟ್ ಸಿಟಿಗೆ ರಾಜ್ಯ, ಕೇಂದ್ರ ಸರ್ಕಾರ 396 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿತ್ತು. ಈ ಹಣ ಮೂರ್ನಾಲ್ಕು ವರ್ಷ ಬ್ಯಾಂಕ್ ನಲ್ಲಿಯೇ ಉಳಿದ್ದರಿಂದ ಅದಕ್ಕೆ 40 ಕೋಟಿ ರೂಪಾಯಿಯಷ್ಟು ಬಡ್ಡಿ ಸಹ ಜಮಾ ಆಗಿದೆ. ಒಟ್ಟಾರೆ ಬೆಳಗಾವಿ ನಗರದ ಸದ್ಯ ದುರಸ್ಥಿಯಲ್ಲಿ ಇದೆ. ಪ್ರಯಾಣಿಕರು ನಿಧಾನವಾಗಿ ಚಲಿಸಬೇಕು. ಇಲ್ಲವಾದಲ್ಲಿ ನಿಮಗೆ ತೊಂದರೆ ಆಗೋದು ಪಕ್ಕಾ ಎನ್ನುವಂತಾಗಿದೆ. ಇನ್ನಾದರೂ ಸರ್ಕಾರ ಶೀಘ್ರದಲ್ಲಿಯೇ ಕಾಮಗಾರಿ ಮುಗಿಸಲು ಶ್ರಮವಹಿಸಬೇಕಿದೆ.
2020ರ ಜುನ್ ತಿಂಗಳಲ್ಲಿ ಸ್ಮಾರ್ಟ್ ಸಿಟಿಯ ರಸ್ತೆ ಕಾಮಗಾರಿ ಮುಗಿಸುವ ಯೋಜನೆ ರೂಪಿಸಿದ್ದೇವೆ. ಜನರಿಗೆ ತೊಂದರೆಯಾಗದಂತೆ ನಗರ ಪೊಲೀಸ್ ಆಯುಕ್ತರ ಜತೆಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಸಿಮೆಂಟ್ ರಸ್ತೆ 28 ದಿನ ಕ್ಯೂರಿಂಗ್ ಬೇಕಾಗುತ್ತದೆ. ಹೀಗಾಗಿ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಾಗಿದೆ. ಒಮ್ಮೆ ರಸ್ತೆ ಮಾಡಿದ್ರೆ 20 ವರ್ಷ ಯಾವುದೇ ತೊಂದರೆ ಇಲ್ಲ. ಹೀಗಾಗಿ ಸಾರ್ವಜನಿಕರು ಸ್ಪಂಧಿಸಬೇಕು ಎಂದು ಸ್ಮಾರ್ಟ್ ಸಿಟಿ ಎಂಡಿ ಶಶಿಧರ್ ಕುರೇರ್ ಮನವಿ ಮಾಡಿದ್ದಾರೆ.

