ಅಂತೆ ಕಂತೆ – ಆಕೆ 17 ಮಕ್ಕಳ ತಾಯಿ ಅಲ್ಲ ಅಸಲಿಗೆ 11 ಮಕ್ಕಳ ತಾಯಿ…

ಆಕೆ 17 ಮಕ್ಕಳನ್ನ ಹೆತ್ತಿದ್ದಾಳಂತೆ ಆಕೆ ಮಹಾತಾಯಿಯಂತೆ, 20 ಬಾರಿ ಗರ್ಭಧಾರಣೆ ಮಾಡಿದ್ದಾಳಂತೆ. ಇಂತಹ ಅಂತೆ ಕಂತೆಗಳ ಸುಧಿಯನ್ನ ನೀವು ಕೇಳಿರಬಹುದು ಇತ್ತೀಚೆಗಷ್ಟೇ ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದು ಇಂತಹ ಸುದ್ದಿಯನ್ನ ಪ್ರಕಟ ಮಾಡಿತ್ತು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಹಿಳೆ 20 ಬಾರಿ ಗರ್ಭಿಣಿಯಾಗಿ 17 ಮಕ್ಕಳನ್ನ ಹೆತ್ತಿದ್ದಾಳೆ 21 ನೇ ಬಾರಿ ಗರ್ಭಧಾರಣೆ ಮಾಡಿದ್ದು 9 ತಿಂಗಳಲ್ಲಿ ಮಗು ಗರ್ಭಧಲ್ಲೆ ಸತ್ತು ಹೋಗಿ ಗರ್ಭಪಾತ ಆಗಿದೆ ಆಕೆ ಈಗ ಬೆಳಗಾವಿ ಜಿಲ್ಲೆಯಲ್ಲಿದ್ದಾಳೆಂದು ಸುದ್ದಿ ಪ್ರಕಟ ಮಾಡಿತ್ತು. ಸುದ್ದಿ ಬರುತ್ತಿದ್ದಂತೆ ಹಲವರಿಗೆ ಆಶ್ಚರ್ಯ 17 ಮಕ್ಕಳ ಹೆತ್ತ ಆ ಮಹಾತಾಯಿ ಹೇಗಿದ್ದಾಳೆ, ಆಕೆಯನ್ನ ಒಮ್ಮೆ ನೋಡಬೇಕು ಇನ್ನು ಕೆಲವರು ಆಕೆಯ ಪತಿ ಯಾರಪ್ಪ ಅನ್ನೊದನ್ನು ಮಾತನಾಡ ತೋಡಗಿದ್ದರು.

17 ಮಕ್ಕಳ ತಾಯಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಾರ್ಖಾನೆ ಒಂದರಲ್ಲಿ ಕಬ್ಬು ಕಟಾವು ಮಾಡುವ ಕೆಲಸ ಮಾಡುತ್ತಿದ್ದಾಳೆ ಅಂತ ಸುದ್ದಿ ಪ್ರಕಟ ಆಗುತ್ತಿದ್ದಂತೆ ಜಿಲ್ಲಾಡಳಿತ ಆ ಮಹಿಳೆಯ ಹುಡುಕಾಟಕ್ಕೆ ಇಳಿದಿತ್ತು ಸ್ವತಃ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮುನ್ಯಾಳ 10 ಜನರ ಟಿಂ ಮಾಡಿ ಮಹಿಳೆಯ ಶೋದ ಕಾರ್ಯಕ್ಕೆ ಮುಂದಾಗಿತ್ತು.

ಕೊನೆಗೂ ಆ ಮಹಿಳೆ ಈಗ ಪತ್ತೆಯಾಗಿದ್ದಾಳೆ ಆಕೆಯ ಹೆಸರು ಲಂಕಾತಾಯಿ ರಾಜೇಬಾಹು ಖರಾತ ಮೂಲತಃ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾವ ಗ್ರಾಮದ ನಿವಾಸಿ ಪ್ರತಿ ವರ್ಷವೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಕಬ್ಬು ಕಾಟಾವ ಮಾಡಲು ತಮ್ಮ ಕುಟುಂಬ ಸಮೇತ ಆಗಮಿಸುತ್ತಾರೆ. ಗಬಾಳಿ ಗ್ಯಾಂಗ್ ಅಂತಲೆ ಇವರು ಇಲ್ಲಿ ಫೇಮಸ್ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಯಲ್ಲಿ ಕಬ್ಬು ಕಟಾವ ಮಾಡಿ ಮತ್ತೆ ತಮ್ಮ ಜಿಲ್ಲೆಗೆ ಈ ಗಬಾಳಿ ಗ್ಯಾಂಗ್ ಹೋಗುತ್ತೆ.

ಲಂಕಾಬಾಯಿ ಸದ್ಯ ಧಾರವಾಡ ಜಿಲ್ಲೆಯ ಶಿಗನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು ಲಂಕಾಬಾಯಿಯನ್ನ ಹುಕ್ಕೇರಿ ತಾಲೂಕು ವೈದ್ಯರ ತಂಡದವರು ಹುಡುಕುವಲ್ಲಿ ಯಶಶ್ವಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರ ಹುಡುಕಾಟದ ಬಳಿಕ ಲಂಕಾಬಾಯಿ ಶಿಗನಹಳ್ಳಿಯಲ್ಲಿ ಕಬ್ಬು ಕಟಾವ ಮಾಡುವ ವೇಳೆ ಪತ್ತೆಯಾಗಿದ್ದಾಳೆ ಅಸಲಿಗೆ ಲಂಕಾಬಾಯಿ ಹೇಳುವ ಪ್ರಕಾರ ಆಕೆಗೆ ಒಂಬತ್ತು ಹೆಣ್ಣು ಇಬ್ಬರು ಗಂಡು ಒಟ್ಟು 11 ಜನ ಮಕ್ಕಳಿದ್ದಾರೆ ಹೆಣ್ಣುಮಕ್ಕಳ ಮದುವೆ ಆಗಿದ್ದು ಮೊಮ್ಮಕ್ಕಳು ಸಹ ಇದಾರೆ ಇನ್ನು ಲಂಕಾಬಾಯಿ 21 ಬಾರಿ ಗರ್ಭಧಾರಣೆ ಮಾಡಿಲ್ಲಾ ಬದಲಾಗಿ 12 ಬಾರಿ ಗರ್ಭಧಾರಣೆ ಮಾಡಿದ್ದು 4 ತಿಂಗಳ ಗರ್ಭಿಣಿ ಆಗಿದ್ದಳು ಉದ್ಯೋಗ ಅರಸಿ ಬೀಡ್ ನಿಂದ ಇಲ್ಲಿಗೆ ಟ್ರಾಕ್ಟರ್ ನಲ್ಲಿ ಆಗಮಿಸಿದ್ದು ಈ ವೇಳೆ ಗರ್ಭಪಾತ ಆಗಿದೆ ಸದ್ಯ ನಾನು ಆರಾಮಾಗಿದ್ದನೆ ಎಂದು ಲಂಕಾಬಾಯಿ ಹೇಳಿಕೆ ಕೊಟ್ಟಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights