ಪೊಲೀಸರಿಂದ ಸಿಸಿಟಿವಿಗೆ ಹಾನಿ : ಈ ವೀಡಿಯೊ ಜ.26 ರ ಟ್ರಾಕ್ಟರ್ ರ್ಯಾಲಿಗೆ ಸಂಬಂಧಿಸಿದ್ದಾ?

ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಜನವರಿ 26 ರಂದು ದೆಹಲಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಗಳು ಹಿಂಸಾತ್ಮಕತೆಗೆ ತಿರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಗೆ ಸಂಬಂಧವಿಲ್ಲದ ಫೋಟೋ ವೀಡಿಯೋಗಳು ವೈರಲ್ ಆಗುತ್ತಿವೆ.

ಈ ಸನ್ನಿವೇಶದಲ್ಲಿ ಭದ್ರತಾ ಸಿಬ್ಬಂದಿಗಳು ಪೆಟ್ರೋಲ್ ಬಂಕ್ ಬಳಿ ಸ್ಥಾಪಿಸಲಾದ ಸಿಸಿಟಿವಿ ಕ್ಯಾಮೆರಾವನ್ನು ಒಡೆಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಿಂಚಿಕೊಳ್ಳಲಾಗಿದೆ. ಗಣರಾಜ್ಯೋತ್ಸವದಂದು ಹಿಂಸಾಚಾರಕ್ಕೆ ಪೊಲೀಸರನ್ನು ದೂಷಿಸುವ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋ ವೈರಲ್ ಆಗಿದೆ.

ವೀಡಿಯೊದೊಂದಿಗೆ ಹಿಂದಿಯಲ್ಲಿರುವ, “ನಾನು ರೈತರೊಂದಿಗೆ ನಿಲ್ಲುತ್ತೇನೆ. ಹಿಂಸಾತ್ಮಕ ಆಂದೋಲನವನ್ನು ರೈತರು ಮಾಡಿದ್ದಾರಾ ಅಥವಾ ಮೋದಿಯ ಪೊಲೀಸರು ಮಾಡಿದ್ದಾರಾ? ಯಾರು ಮಾಡಿದ್ದಾರೆಂದು ಈಗ ನೀವು ನೋಡಬಹುದು” ಎಂದು ಬರೆಯಲಾಗಿದೆ.

ಆದರೆ ಈ ವೀಡಿಯೊ ಸುಮಾರು ಒಂದು ವರ್ಷ ಹಳೆಯದು ಮತ್ತು ಹಲವಾರು ಮಾಧ್ಯಮ ವರದಿಗಳು ಇದನ್ನು ಸಿಎಎ ವಿರೋಧಿ ಪ್ರತಿಭಟನೆ ಎಂದು ಹೇಳಿವೆ. 2020 ರ ಫೆಬ್ರವರಿಯಲ್ಲಿ ಹಲವಾರು ಸುದ್ದಿ ವೆಬ್‌ಸೈಟ್‌ಗಳ ವರದಿಗಳ ಪ್ರಕಾರ ಪೂರ್ವ ದೆಹಲಿಯ ಖುರೇಜಿ ಖಾಸ್ ನೆರೆಹೊರೆಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸುತ್ತಿದ್ದಾರೆಂದು ಹೇಳಲಾಗಿದೆ.

ದಿ ಕ್ವಿಂಟ್‌ನ ವರದಿಯಲ್ಲಿ, ಈ ವೀಡಿಯೊದಲ್ಲಿ ಕಂಡುಬರುವ ಪೆಟ್ರೋಲ್ ಬಂಕ್ ಬಳಿ ಇರುವ ಕೆಲವು ಅಂಗಡಿಯವರು ಈ ವಿಡಿಯೋ ನಿಜಕ್ಕೂ ಖುರೇಜಿ ಖಾಸ್‌ನಿಂದ ಬಂದಿದೆ ಎಂದು ದೃಢಪಡಿಸಿದ್ದಾರೆ.

https://twitter.com/30guptavivek/status/1232620183912624129?ref_src=twsrc%5Etfw%7Ctwcamp%5Etweetembed%7Ctwterm%5E1232620183912624129%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-this-video-of-police-damaging-cctv-is-not-linked-to-january-26-tractor-rally-1763750-2021-01-29

ಆದ್ದರಿಂದ ಈ ವೀಡಿಯೋ ಕಳೆದ ವರ್ಷ ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದೆ. ಜೊತೆಗೆ ಇದು ಗಣರಾಜ್ಯೋತ್ಸವದ ರೈತರ ಆಂದೋಲನಕ್ಕೆ ಸಂಬಂಧಿಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights