Categories
Breaking News District State

ಬೈಕ್ ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಡಿ 16 ರ ಮಧ್ಯರಾತ್ರಿ ಯಲ್ಲಿ ನಗರದ ಪ್ರಮುಖ‌ ರಸ್ತೆ ಹಾಗೂ ಮನೆ ಎದುರು ನಿಲ್ಲಿಸಿದ್ದ ಬೈಕ್ ಗಳಿಗೆ ಬೈಕಿನಲ್ಲಿ ಬಂದ ಕಿಡಿಗೇಡಿ ಬೆಂಕಿ ಇಡುವ ಭಯಾನಕ ದೃಶ್ಯಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು.. ರಾತ್ರೋರಾತ್ರಿ ಐದು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದ ಕಿಡಿಕೇಡಿ ಕಿಲಾಡಿತನ ಸೆರೆಯಾಗಿದೆ. ಚಿಕ್ಕಮಗಳೂರು ಪೊಲೀಸರು ಅನಾಮಿಕ ಕಿಡಿಗೇಡಿಗಾಗಿ ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.

ಒಂದೇ ರಾತ್ರಿಯಲ್ಲಿ 5 ಬೈಕಿಗೆ ಬೆಂಕಿ ಇಟ್ಟು ಪೊಲೀಸರ ನಿದ್ದೆಗೆಡಿಸಿರೋ ಖತರ್ನಾಕ್ ದುಷ್ಕರ್ಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ದೃಶ್ಯ ಸಿಸಿಟಿವಿ ದೃಶ್ಯಗಳನ್ನಿಟ್ಟುಕೊಂಡು ಕೂಲ್ ಆಗಿದ್ದ ಕಾಫಿನಾಡಿನಲ್ಲಿ ಬೆಂಕಿ ಇಟ್ಟವನಿಗಾಗಿ ಪೊಲೀಸರು ಬೆನ್ನು ಬಿದ್ದಿದ್ದಾರೆ. ನಗರದ ಮಾರ್ಕೆಟ್ ರಸ್ತೆ. ಪೆನ್ಷನ್ ಮಹಲ್‌, ಶಾದಿ ಮಹಲ್, ಗೌರಿ ಕಾಲುವೆ ಬಳಿ ಘಟನೆ ನಡೆದಿತ್ತು.

 

 

 

Categories
Breaking News District State

ಬ್ಯಾಂಕಿನಲ್ಲಿ ಹಣ ಎಗರಿಸಿದ ಕಳ್ಳರು : ಸಿಸಿಟಿವಿಯಲ್ಲಿ ಬಯಲಾಯ್ತು ಖದೀಮರ ಕೈಚಳಕ

ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದನ್ನ ಮೂರು ಲಕ್ಷ ಹಣವನ್ನ ಖದೀಮರು ಸದ್ದಿಲ್ಲದೇ ಎಗರಿಸಿರೋ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಸಂಪಿಗೆ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್ ನಿಂದ ನಾಗೇಶ್ ಎಂಬುವರು ಹಣ ಡ್ರಾ ಮಾಡಿಕೊಂಡು ಹೆಲ್ಮೆಟ್ ಹೊರಗಿಟ್ಟು ಡಿಕ್ಕಿಯಲ್ಲಿದ್ದ ಹಣ ಇಡುವ ವೇಳೆ ಎಲ್ಲಾ ಚಲನ ವಲನ ಗಮನಿಸಿದ ಖದೀಮರು ಈ ಕೃತ್ಯ ಎಸಗಿದ್ದಾರೆ. ನಾಗೇಶ್ ಅವರನ್ನ ಕಳ್ಳರು ಹಿಂಬಾಲಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಸಂಭಂದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.

Categories
Breaking News District State

ಪೋಷಕರ ಕಣ್ಮುಂದೆಯೇ ಮಗು ಸಾವು- ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಷ್ಯ…!

ಈ ದೃಷ್ಯ ನೋಡಿದರೆ ಎಂಥವರ ಮನಸ್ಸೂ ಕಣ್ಣೀರಿಡುತ್ತೆ. ಪೋಷಕರು ಅದರಲ್ಲೂ ತಮ್ಮ ಮಕ್ಕಳೊಂದಿಗೆ ರಸ್ತೆಯ ಮೇಲೆ ಹೋಗುವಾಗ ಏಕೆ ಮುನ್ನೇಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ದೃಷ್ಯ ಸಾಕ್ಷಿಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಈ ದೃಷ್ಯ ಘೋರವಾಗಿದ್ದು, ತನ್ನ ಸಂಬಂಧಿಕರೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮೂರು ವರ್ಷದ ಪುಟ್ಟ ಬಾಲಕ ರಸ್ತೆಯ ಮೇಲೆ ಓಡಿ ಹೋಗುವಾಗ ಟಂಟಂವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಈ ಭಯಾನಕ ಘಟನೆ ನಡೆದಿದ್ದು ಬಸವಣ್ಣನ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ. 3 ವರ್ಷದ ಬಾಲಕ ಭೀಮನಗೌಡ ಮೇಲ್ದಾಪೂರ ಈ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಬಾಲಕ ರಸ್ತೆ ದಾಟುವಾಗ ಟಂಟಂ ಡಿಕ್ಕಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ಟಂಟಂ ಸಮೇತ ಪರಾರಿಯಾಗಿದ್ದಾನೆ.

ಬಾಲಕ ಓಡಿ ಹೋಗುವಾಗ ಅತೀ ವೇಗದಿಂದ ಬಂದ ಟಂಟಂ ಢಿಕ್ಕಿ ಹೊಡೆದೆ ಆತನ ಪ್ರಾಣ ಹೋಗಲು ಕಾರಣವಾಗಿದೆ. ಈ ಢಿಕ್ಕಿಯ ರಭಸಕ್ಕೆ ಬಾಲಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಈ ರಸ್ತೆಯಲ್ಲಿ ವೇಗ ನಿಯಂತ್ರಕ ಹಾಕಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಸಿಪಿಐ.ಪಿಎಸ್ ಐ. ಪಿಡಬ್ಲೂಡಿ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Categories
Breaking News District State

ಕಳ್ಳರ ಕೈಚಳಕ ಯತ್ನ ವಿಫಲ, ಸಿಸಿಟಿವಿ ಯಲ್ಲಿ ದೃಶ್ಯಗಳು ಸೆರೆ…!

ಕಳ್ಳರ ಕೈಚಳಕ ಯತ್ನ ವಿಫಲವಾಗಿ ಈ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾದ ಘಟನೆ  ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕಂಟಿ ಬೀರೇಶ್ವರ ನಗರದಲ್ಲಿ ನಡೆದಿದೆ.

ಹೌದು.. ಖದೀಮರು ಶೈಲಜಾ ಬಣಕಾರ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯ ಬಾಗಿಲ ಚೀಲಕ ಮುರಿದು ಒಳಗೆ ನುಗ್ಗಿದ ಖದೀಮರು, ಕೈಗೆ ಏನೂ ಸಿಗದೇ ಮನೆ ಒಳಗಿನ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ. ಮನೆ ಬಾಗಿಲಿಗೆ ಆಗಮಿಸಿದ ಖದೀಮರ ಹಾಗೂ ಒಳಪ್ರವೇಶಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇನ್ನೊಂದೆಡೆ ಅಂಗಡಿ ಬಾಗಿಲು ಮುರಿದು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೈಲಜಾ ಬಣಕಾರ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಜನ ಆತಂಕಗೊಂಡಿದ್ದಾರೆ.

ರಾಣೇಬೆನ್ನೂರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
Breaking News District State

ಶಾಲಾ ಬಸ್ – ಬೈಕ್‌ ನಡುವೆ ಡಿಕ್ಕಿ : ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆ

ಶಾಲಾ ಬಸ್ – ಬೈಕ್‌ ನಡುವೆ ಡಿಕ್ಕಿಯಾಗಿರುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿ ವೈರಲ್ ಆಗಿದೆ. ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಅಣಜೂರು ತಿರುವಿನಲ್ಲಿ ಈ ಘಟನೆ ನಡೆದಿದ್ದು,  ಬೈಕ್-ಶಾಲಾ ವಾಹನ ಡಿಕ್ಕಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯಾವುದೇ ಸೂಚನೆ ನೀಡದೇ ಬಸ್ಸನ್ನ ಬಲಕ್ಕೆ ತಿರುಗಿಸಿದ್ದೇ ತಡ ಎದುರಿಗೆ ವೇಗವಾಗಿ ಬಂದ ಬೈಕ್ ಸವಾರ ಬಸ್ ಗೆ ಗುದ್ದಿದ್ದಾನೆ. ಬಸ್ಸಿನ ಮುಂಭಾಗದಿಂದ ಬಂದ ಬೈಕ್‌ ಸವಾರ ಬೈಕನ್ನ ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು,  ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು , ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

Categories
Breaking News District State

ಲಾಡ್ಜ್ ಗೆ ನುಗ್ಗಿದ ಜೀಪ್ : ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಅದು ಬೆಳಗಿನ ಜಾವ. ಬೇಡ ಬೇಡ ಅಂದ್ರೆ ಪರಿವಿಲ್ಲದೇ ನಿದ್ರಿಸೋ ಸಮಯ. ಈ ಸಮಯದಲ್ಲಿ ಹತ್ತಿರದಲ್ಲಿ ಗುಡ್ಡವೊಂದು ಕುಸಿದಂತಾ ಶಬ್ದ ಬಂದರೆ ಹೇಗಿರಬೇಡ. ಒಂದು ಕ್ಷಣ ಎದೆ ಬಡಿತವೇ ನಿಂತು ಹೋದಂತ ಭಾಸವಾಗುವುದಿಲ್ಲವೇ. ಇದರಂತ ಅನುಭವ ಲಾಡ್ಜ್ ವೊಂದರಲ್ಲಿ ಮಲಗಿದ ಸಿಬ್ಬಂದಿಗಳಿಗೆ ಆಗಿದೆ.

ಹೌದು.. ಚಿಕ್ಕಮಗಳೂರು ನಗರದ ಐ ಜಿ ರಸ್ತೆಯಲ್ಲಿರುವ ದಿ ಲೋಟಸ್ ಲಾಡ್ಜ್ ಗೆ ಜೀಪ್ ವೊಂದು ನುಗ್ಗಿ ಅವಾಂತರವೇ ಸೃಷ್ಟಿ ಮಾಡಿದೆ. ಅಲ್ಲೇ ಮಲಗಿದ್ದ ಸಿಬ್ಬಂದಿಗಳ ಪ್ರಾಣ ಸ್ವಲ್ಪದರಲ್ಲೇ ಪಾರಾಗಿದೆ. ಜೀಪ್ ನುಗ್ಗಿದ ರಭಸಕ್ಕೆ ಮಲಗಿದವರು  ಎದ್ದು ಬಿದ್ದು ಓಡಿದ್ದಾರೆ.

ಕಡೂರಿನಿಂದ ಬಂದ ಜೀಪ್ ಏಕಾಏಕಿ ನುಗ್ಗಿದ ಪರಿಣಾಮ ಲಾಡ್ಜ್ ನ ಗ್ಲಾಸ್ ಸಂಪೂರ್ಣ ಪುಡಿ ಪುಡಿಯಾಗಿದೆ. ಲಾಡ್ಜ್ ನ ರಿಸಷ್ಪನಿಸ್ಟ್ ನ ಹತ್ತಿರ ನುಗ್ಗಿದ ಜೀಪ್ ಕಂಡು ಅಲ್ಲೇ ಮಲಗಿದ್ದ ಲಾಡ್ಜ್ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Categories
Breaking News District State

ಶ್ರವಣಬೆಳಗೊಳದಲ್ಲಿ ತಪ್ಪದ ಚಿರತೆಯ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆ…!

ಹಾಸನದ ಶ್ರವಣಬೆಳಗೊಳದಲ್ಲಿ ತಪ್ಪದ ಚಿರತೆಯ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ಚಿರತೆ ಕಾಟ ಅಧಿಕವಾಗಿದ್ದು, ಜನ ಆತಂಕದಲ್ಲಿ ಜೀವನ ನಡೆಸುವಂತಾಗಿದೆ.ರಾತ್ರಿ ಪಟ್ಟಣದ ಜೈನ ಮಠದ ಹಿಂಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿರತೆ ಓಡಾಟದಿಂದ ಆತಂಕಗೊಂಡಿರುವ ಗ್ರಾಮಸ್ಥರು, ಕಳೆದ ಕೆಲ ತಿಂಗಳಿನಿಂದಲೂ ಚಿರತೆ ಹಾವಳಿಗೆ ಜನ ಬೇಸತ್ತಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಹಿಡಿಯುವುದಾಗಿ ಭರವಸೆ ನೀಡಿದ್ದಾರೆ.

 

Categories
Breaking News District State

ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಬಿಟ್ಟು ಪರಾರಿಯಾದ ದಂಪತಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೆತ್ತ ಮಗು ಅನಾರೋಗ್ಯಕ್ಕೀಡಾದ್ರೆ ತಾಯಿ ಜೀವ ಸಂಕಟ ಪಡುತ್ತದ, ಕೊರಗುತ್ತೆ, ನರಳಾಡುತ್ತೆ. ಆದರೆ ಇಲ್ಲೊಬ್ಬ ಮಹಾತಾಯಿ ಜೀವ ಅದ್ಯಾವುದನ್ನ ಪಡೆದೆ ಪರಾರಿಯಾಗಲು ಬಯಸಿದೆ.

ಸಮಾಜದಲ್ಲಿ ಅತೀ ಹೆಚ್ಚು ಗೌರವ, ಅತೀ ಎತ್ತರ ಸ್ಥಾನಮಾನ ಮಕ್ಕಳು ನೀಡೋದು ತಂದೆ-ತಾಯಿಗೆ. ಆದರೆ ನೀವು ಈ ಮಹಾತಾಯಿ ಮಾಡಿದ ಕಥೆ ಕೇಳಿದ್ರೆ ಅದೇನಂತಿರೋ ಏನೋ..? ಗೊತ್ತಿಲ್ಲ..

ತಾಯಿ ಕುಲಕ್ಕೆ ಕಳಂಕ ತರುವಂತ ಕೆಲಸ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ನಡೆದಿದೆ. ಹೌದು.. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಬಿಟ್ಟು ದಂಪತಿ ಪರಾರಿಯಾಗಿದ್ದಾರೆ. ಅನಾರೋಗ್ಯ ಅಂತ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದ ದಂಪತಿ,
ಮಗು ಮೃತಪಟ್ಟಿದೆ ಎಂಬ ಸುದ್ದಿ ತಿಳಿದು ಆಸ್ಪತ್ರಯಿಂದ ಪರಾರಿಯಾಗಿದ್ದಾರೆ. ಇವರಿಬ್ಬರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ದಾದಪೀರ್ ಶೇಕ್ ಹಾಗೂ ಪೂಜಾ ಠಾಕೂರ್ ಪರಾರಿಯಾದ ದಂಪತಿ. ಇವರಿಬ್ಬರು  ನಿನ್ನೆ ರಾತ್ರಿ ಮಗುವಿಗೆ ಅನಾರೋಗ್ಯ ಎಂದು ಕಿಮ್ಸ್‌ಗೆ ಕರೆತಂದಿದ್ದರು. ನಾಲ್ಕು ವರ್ಷದ ಹೆಣ್ಣುಮಗು ಅದು. ಆದರೆ ಆ ಮಗು ಅನುಮಾನಸ್ಪದವಾಗಿ ಸಾವುನ್ನಪ್ಪಿದೆ. ರೌಡಿಶೀಟರ್ ಆಗಿರುವ ಮಗುವಿನ ತಂದೆ ದಾದಾಪೀರ್ ಮತ್ತು ಈತನ ಹೆಂಡತಿ ಆಸ್ಪತ್ರೆಯಿಂದ ಹೊರಟವರೇ ರಾತೋರಾತ್ರಿ ಗೋಕುಲ ಗ್ರಾಮದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಕ್ಕೆ ಮತ್ತು ತಂದೆ-ತಾಯಿ ಪರಾರಿಯಾದ್ದರಿಂದ ಪೊಲೀಸರು ಇವರಿಬ್ಬರನ್ನು ಹುಡುಕುತ್ತಿದ್ದಾರೆ.

.

Categories
Breaking News National

ಕಾಲೇಜ್ ನಲ್ಲಿ ನಡೆದ ಅತ್ಯಾಚಾರ : ಸಿಸಿ ಟಿವಿಯಲ್ಲಿ ಸೆರೆ – ಆರೋಪಿ ಅಂದರ್!

ದೆಹಲಿ ವಿಶ್ವವಿದ್ಯಾನಿಲಯದ ಹೆಸರಾಂತ ಕಾಲೇಜ್ ಒಂದರಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಅನೇಕ ದಿನಗಳ ಹಿಂದೆ ಈ ಘಟನೆ ನಡೆದಿದೆ. ಆದ್ರೆ ಕಾಲೇಜು ಸಿಸಿ ಟಿವಿ ಮೂಲಕ ಪ್ರಕರಣ ಈಗ ಬಹಿರಂಗವಾಗಿದೆ. ಘಟನೆ ನಂತ್ರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಲೇಜಿನ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಾಲೇಜು ಸಮೀಪ ವಾಸವಾಗಿರುವ ವಿದ್ಯಾರ್ಥಿನಿ ಮೇಲೆಯೇ ಅತ್ಯಾಚಾರ ನಡೆದಿದೆ. ನಶೆಯ ತಂಪು ಪಾನೀಯ ನೀಡಿದ್ದ ಆರೋಪಿ ನಂತ್ರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ. ಆರೋಪಿ ಹೆಸರು ರಾಜ್ಕುಮಾರ್.

ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿನಿಗೆ ಪ್ರಜ್ಞೆ ಬಂದಾಗ ಬಟ್ಟೆ ಅಸ್ತವ್ಯಸ್ತವಾಗಿತ್ತು. ಅಲ್ಲಿಂದ ಹೇಗೋ ಬಂದ ವಿದ್ಯಾರ್ಥಿನಿ ಗುರುದ್ವಾರ ತಲುಪಿದ್ದಳು. ಅಲ್ಲಿನ ಜನರು ವಿದ್ಯಾರ್ಥಿನಿಗೆ ಸಹಾಯ ಮಾಡಿ ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಪೊಲೀಸರು ಅಜ್ಞಾತ ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಕಾಲೇಜಿನ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಭದ್ರತಾ ಸಿಬ್ಬಂದಿ, ವಿದ್ಯಾರ್ಥಿನಿ ಜೊತೆ ಹೋಗುತ್ತಿರುವುದು ಕಂಡಿದೆ. ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.

 

Categories
Breaking News International National

ಜೈಶ್‌ ಉಗ್ರ ಪುಲ್ವಾಮಾ ಬಾಂಬ್‌ ದಾಳಿಗೆ ಬಳಿಸಿದ್ದ ಕೆಂಪು ಇಕೋ ಕಾರ್ ಸಿಸಿಟಿವಿಯಲ್ಲಿ ಸೆರೆ

ಕನಿಷ್ಠ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಆತ್ಮಾಹುತಿ ಬಾಂಬ್‌ ದಾಳಿಗೆ ಜೈಶ್‌ ಉಗ್ರನು ಬಳಸಿದ್ದ ಕೆಂಪು ಇಕೋ ಕಾರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಿಸಿಟಿವಿಯಲ್ಲಿ ದಾಖಲಾಗಿರುವ ಚಿತ್ರಿಕೆಯಲ್ಲಿ ಪತ್ತೆ ಹಚ್ಚಿದೆ.

ಸ್ಫೋಟಕ ತುಂಬಿದ್ದ ಈ ಕೆಂಪು ಇಕೋ ಕಾರನ್ನು ಉಗ್ರ ಆದಿಲ್‌ ಅಹ್ಮದ್‌ ದಾರ್‌ ಚಲಾಯಿಸಿಕೊಂಡು ಬರುತ್ತಿರುವುದು ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬಂದಿದೆ.

ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಈ ಕೆಂಪು ಕಾರನ್ನು ಉಗ್ರ ಆದಿಲ್‌ ಢಿಕ್ಕಿ ಹೊಡೆಸುವ ಸ್ವಲ್ಪ ಹೊತ್ತಿಗೆ ಮೊದಲಿನ ದೃಶ್ಯಾವಳಿ ಈ ಸಿಸಿಟಿವಿ ವಿಡಿಯೋ ಚಿತ್ರಿಕೆಯಲ್ಲಿ ದಾಖಲಾಗಿದೆ.

ಈ ಚಿತ್ರಿಕೆಯ ಆಧಾರದಲ್ಲಿ ಸ್ಫೋಟಕ್ಕೆ ಬಳಸಲಾಗಿದ್ದ ಈ ಕೆಂಪು ಕಾರಿನ ಮಾಲಕ ಯಾರೆಂಬುದನ್ನು ಎನ್‌ಐಎ ಪತ್ತೆ ಹಚ್ಚಿದೆ. ಆತ್ಮಾಹುತಿ ದಾಳಿ ನಡೆದ ದಿನದಿಂದಲೇ ಆತನು ನಾಪತ್ತೆಯಾಗಿರುವುದು ಕೂಡ ಈಗ ಗೊತ್ತಾಗಿದೆ.

2010-11ರ ಮಾಡೆಲ್‌ನ ಈ ಕಾರನ್ನು ರೀ-ಪೇಂಟ್‌ ಮಾಡಲಾಗಿದೆ. ಆತ್ಮಾಹುತಿ ದಾಳಿ ನಡೆದ ತಾಣದಲ್ಲಿ ಈ ಕಾರಿನ ಶಾಕರ್‌ಗಳು ಪತ್ತೆಯಾಗಿವೆ. ಅವುಗಳ ಆಧಾರದಲ್ಲಿ ಕಾರಿನ ಮಾಡೆಲ್‌ ದೃಡಪಟ್ಟಿದೆ ಎಂದು ಮೂಲಗಳು ತಿಳಿಸಿವೆ.