ಮಗನಿಂದ ಕಪಾಳಮೋಕ್ಷ : ಕುಸಿದುಬಿದ್ದ ವೃದ್ಧ ತಾಯಿ ಸ್ಥಳದಲ್ಲೇ ಸಾವು…!

ಮಗನೊಬ್ಬ ವೃದ್ಧ ತಾಯಿ ಮೇಲೆ ಕೈ ಮಾಡಿದ್ದರಿಂದ ತಾಯಿ ಮೃತಪಟ್ಟ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

76 ವರ್ಷದ ಅವತಾರ್ ಕೌರ್ ಎಂಬ ವೃದ್ಧ ಮಹಿಳೆ ಮಗ ರಣಬೀರ್‌ನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾಳೆ. ಸೋಮವಾರ ಮಧ್ಯಾಹ್ನ ಸಂಭವಿಸಿದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ ಕಪಾಳಮೋಕ್ಷ ಮಾಡಿರುವುದನ್ನು ಕಾಣಬಹುದು, ನಂತರ ಅವಳು ಪ್ರಜ್ಞೆ ತಪ್ಪಿ ನೆಲದ ಮೇಲೆ ಬೀಳುವುದನ್ನು ಕಾಣಬಹುದು.

ವಿಡಿಯೋ ಹೊರಬಿದ್ದ ನಂತರ ಪೊಲೀಸರು ವೃದ್ಧೆಯ 45 ವರ್ಷದ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಸೆಕ್ಷನ್ 304 (ಅಪರಾಧಿ ನರಹತ್ಯೆಗೆ ಶಿಕ್ಷೆ) ಯ ಅಡಿಯಲ್ಲಿ ಬಿಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

 

ಪೊಲೀಸರ ಪ್ರಕಾರ, ಘಟನೆಯ ಮೊದಲು ವಾಹನ ನಿಲುಗಡೆ ಮಾಡುವ ಬಗ್ಗೆ ಮಹಿಳೆ ಮತ್ತು ಆಕೆಯ ನೆರೆಹೊರೆಯವರ ನಡುವೆ ವಾಗ್ವಾದ ನಡೆದಿತ್ತು. ಈ ವಿಚಾರ ಅಂತ್ಯಗೊಂಡಿದ್ದರೂ ಕೂಡ ನೆರೆಹೊರೆಯವರೊಂದಿಗೆ ಜಗಳವಾಡಿದ ತಾಯಿಯೊಂದಿಗೆ ಮಗ ಜಗಳವಾಡಿದ್ದಾನೆ.

ಇಬ್ಬರ ನಡುವಿನ ವಾಗ್ವಾದದ ವೇಳೆ, ಮಗ ತನ್ನ ತಾಯಿಯ ಮುಖಕ್ಕೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ನೆಲಕ್ಕುರುಳಿದ ತಾಯಿ ಮೃತಪಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಾಗಲೇ ವೃದ್ಧ ತಾಯಿ ಪ್ರಾಣ ಬಿಟ್ಟಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ (ದ್ವಾರಕಾ) ಸಂತೋಷ್ ಕುಮಾರ್ ಮೀನಾ ತಿಳಿಸಿದ್ದಾರೆ.

ಪ್ರಕರಣ ದಾಖಲಾಗಿದ್ದು, ನಿರುದ್ಯೋಗಿಯಾಗಿರುವ ರಣಬೀರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights