ದೇಶದಲ್ಲಿ ಹೆಚ್ಚಿದ ಕೊರೊನಾ ಕೇಸ್ : ಸಿಎಂಗಳೊಂದಿಗೆ ಮೋದಿ ಸಭೆ!

ದೇಶದಲ್ಲಿ ಮತ್ತೆ ಕೊರೊನಾ 2ನೇ ದಾಳಿ ಶುರುವಾಗಿದೆ. ಕಳೆದ ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದ ಎಲ್ಲಾ ಸಿಎಂಗಳ ಜೊತೆಗೆ ಪ್ರಧಾನಿ ಮೋದಿ ಸಭೆ ಇಂದು ನಡೆಸುತ್ತಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದೆ. 12ಗಂಟೆಗೆ ಸರಿಯಾಗಿ ಈ ಸಭೆ ಆರಂಭವಾಗಲಿದೆ. 2021 ರಲ್ಲಿ ನಿನ್ನೆ ದೇಶದಲ್ಲಿ 28,903 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕಳೆದ ವರ್ಷದಂತೆ ಈ ವರ್ಷವೂ ಕೊರೊನಾದಿಂದ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ ಎನ್ನುವ ಭಯ ಶುರುವಾಗಿದೆ.

ಸಭೆಯಲ್ಲಿ ಕೊರೊನಾ ಹೆಚ್ಚಿರುವ 5 ರಾಜ್ಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕಂಟ್ರೋಲ್ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಲಸಿಕೆಗೆ ಒತ್ತು ನೀಡುವ ಸಲಹೆ ನೀಡುವ ಸಾಧ್ಯತೆ ಇದೆ.

ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣವೇನು? ರಾಜ್ಯದಲ್ಲಿ ತೆಗೆದುಕೊಳ್ಳುವ ಕ್ರಮಗಳು ಸರಿಹೋಗುತ್ತಿಲ್ವಾ ಎನ್ನುವ ವಿಚಾರಗಳ ಬಗ್ಗೆ, ನಿಯಂತ್ರಣದ ಬಗ್ಗೆ, ಕಠಿಣ ಕ್ರಮಗಳನ್ನು ನಿರ್ವಹಿಸುವುದಾ? ಸೂಚನೆಗಳು ಹೇರಬೇಕಾ? ಈ ಬಗ್ಗೆ ಸಿಎಂಗಳೊಂದಿಗೆ ಚರ್ಚಿಸಿ ತಾಂತ್ರಿಕ ಸಮಿತಿ ನೀಡುವ ಸಲಹೆ, ತಜ್ಞರಿಂದ ಇದನ್ನು ತಡೆಯಲು ಮಾಹಿತಿ ಪಡೆದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಬೆಂಗಳೂರಿನಲ್ಲೂ ಕಿಲ್ಲರ್ ಕೊರೊನಾ ಅರ್ಭಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 710 ಪ್ರಕರಣಗಳು ನಿನ್ನೆ ದಾಖಲಾಗಿದ್ದು, ಕಳೆದ ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಜನರಲ್ಲಿ ಆತಂಕ ಕೂಡ ಹೆಚ್ಚಾಗಿದ್ದು ಇಂದು ಸಭೆ ಬಳಿಕ ಮೋದಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights