ಕಾರು ನಿಲ್ಲಿಸಲು ಬಾನೆಟ್ ಮೇಲೆ ಹಾರಿದ ದೆಹಲಿ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್..!

ದೆಹಲಿ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಕಾರನ್ನು ನಿಲ್ಲಿಸಲು ಬಾನೆಟ್ ಮೇಲೆ ಹಾರಿದ ಘಟನೆ ನೈಋತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದಿದೆ. ಕಾರ್ ಮೇಲೆ ಹಾರಿದರು ಸಿಲ್ಲಿಸದ ಚಾಲಕ ಹಲವಾರು ಮೀಟರ್‌ಗಳಷ್ಟು ದೂರ ಕಾರ್ ಚಲಾಯಿಸಿದ್ದಾನೆ. ಸದ್ಯ ಈ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಆರೋಪಿ ಶುಭಮ್ ಕುಮಾರ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ನಂತರ ಸ್ಥಳೀಯರು ಆತನನ್ನು ಹಿಡಿದಿದ್ದಾರೆ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಧೌಲಾ ಕುವಾನ್‌ನಿಂದ ತಿಲಕ್ ನಗರ ಕಡೆಗೆ ಹೋಗುವ ಗಾಡಿಯಲ್ಲಿ ಈ ಘಟನೆ ನಡೆದಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಟ್ರಾಫಿಕ್ ಕಾನ್ಸ್ಟೇಬಲ್ ಮಹಿಪಾಲ್ ಯಾದವ್ ಅವರು ನೀಡಿದ ದೂರಿನ ಆಧಾರದ ಮೇಲೆ, ದೆಹಲಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ನಾವು ಅವರ ವಿರುದ್ಧ ಐಪಿಸಿ ಸೆಕ್ಷನ್ 186,353, 279, ಮತ್ತು 337 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾನ್‌ಸ್ಟೆಬಲ್ ಮಹಿಪಾಲ್ ಯಾದವ್ ಕಾರಿನ ಮೇಲೆ ಹಾರಿ ವೈಪರ್ ಹಿಡಿದಿಟ್ಟುಕೊಂಡಿದ್ದು ಕಾಣಿಸಿಸುತ್ತದೆ. ಆರೋಪಿಗಳು ಅವರನ್ನು ಬಾನೆಟ್‌ನಿಂದ ಅಲ್ಲಾಡಿಸಲು ಪ್ರಯತ್ನಿಸಿದ್ದಾರೆ. ಸ್ವಲ್ಪ ಸಮಯದ ನಂತರ, ವಾಹನ ವೇಗವಾಗಿ ಚಲಿಸುವ ಮೊದಲು ಯಾದವ್  ಕೆಳಗೆ ಬೀಳುತ್ತಾನೆ. ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ ಮತ್ತೊಂದು ಟ್ರಾಫಿಕ್ ಪೋಲೀಸ್ ಚಾಲಕನನ್ನು ಬೆನ್ನಟ್ಟಿರುವುದು ಕಂಡುಬಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights