“ಐ ಲವ್ ಯು ರಿ” : ಪತಿಗೆ ಸಂದೇಶ ಕಳುಹಿಸಿ ಕಟ್ಟಡದಿಂದ ಹಾರಿದ ಪತ್ನಿ!
ಕೌಟುಂಬಿಕ ಕಲಹಗಳಿಂದ ಬೇಸತ್ತ ಮಹಿಳೆ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.
52 ವರ್ಷದ ನೇಹಾ ವರ್ಮಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ದೆಹಲಿಯ ಮುಖರ್ಜಿ ನಗರದ ನಿರಂಕಾರಿ ಕಾಲೋನಿಯ ನಿವಾಸಿಯಾದ ನೇಹಾ ವರ್ಮಾ ತನ್ನ ಪತಿ ಧರಂ ವರ್ಮಾ ಮಧ್ಯೆ ಆಗಾಗ ಜಗಳಗಳಾಗುತ್ತಿತ್ತು. ಹೀಗಾಗಿ ದಂಪತಿಗಳು ಬೇರೆಯಾಗಲು ಬಯಸಿದ್ದರು. ಈ ದಂಪತಿಗೆ ಅಮೆರಿಕದಲ್ಲಿ ವಾಸಿಸುತ್ತಿರುವ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಮಂಗಳವಾರ ದೆಹಲಿಯ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಗೆ ಸಂಪೂರ್ಣ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಪೋಲಿಸ್ ಪ್ರಕಾರ, ಮತ್ತು ಜಿಗಿಯುವ ಮೊದಲು ನೇಹಾ ತನ್ನ ಪತಿಗೆ “ಐ ಲವ್ ಯು” ಸಂದೇಶವನ್ನು ಕಳುಹಿಸಿದ್ದಳು. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಮಹಿಳೆಯ ಮೊಬೈಲ್ ಫೋನ್‌ಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆಕೆಯ ಮಗ ಮತ್ತು ಮಗಳು ದೆಹಲಿ ತಲುಪಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.