6 ತಿಂಗಳಲ್ಲಿ ಅತಿ ಕಡಿಮೆ ಕೊರೊನಾ ಕೇಸ್ ಪತ್ತೆ : ಸಾವಿನ ಸಂಖ್ಯೆಯಲ್ಲಿ ಏರಿಳಿತ!

ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು 6 ತಿಂಗಳಲ್ಲಿ ಮೊದಲ ಬಾರಿಗೆ 20,000 ಕ್ಕಿಂತ ಕಡಿಮೆ ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತವು 18,795 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಸೋಮವಾರ ದಾಖಲಿಸಿದ್ದಕ್ಕಿಂತ ಶೇಕಡಾ 27.8ರಷ್ಟು  ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ವರದಿ ತಿಳಿಸಿದೆ. ಭಾರತದಲ್ಲಿ ಕಳೆದ ಆರು ತಿಂಗಳಲ್ಲಿ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ 20,000 ಕ್ಕಿಂತ ಕಡಿಮೆಯಾಗಿದೆ.

ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,36,97,581 ಕ್ಕೆ ಏರಿಕೆಯಾಗಿದ್ದು, ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,92,206 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 26,030 ರೋಗಿಗಳು ಚೇತರಿಸಿಕೊಂಡಿದ್ದು ದೇಶಾದ್ಯಂತ ಒಟ್ಟು ಗುಣಮುಖರಾದವರ ಸಂಖ್ಯೆ 3,29,58,002 ರಷ್ಟಾಗಿದೆ.

ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ ಕೇರಳ 11,699 ಪ್ರಕರಣಗಳು, ಮಿಜೋರಾಂ 1,846 ಪ್ರಕರಣಗಳು, ತಮಿಳುನಾಡು 1,657 ಪ್ರಕರಣಗಳು, ಆಂಧ್ರ ಪ್ರದೇಶ 618 ಪ್ರಕರಣಗಳು ಮತ್ತು ಕರ್ನಾಟಕ 504 ಪ್ರಕರಣಗಳನ್ನು ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 179 ಸಾವುಗಳು ವರದಿಯಾಗಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆ 4,47,373 ಕ್ಕೆ ಏರಿಕೆಯಾಗಿದೆ. ಕೊರೊನಾಕ್ಕೆ 179 ಬಲಿಯಾದವರಲ್ಲಿ ಕೇರಳದಲ್ಲಿ 58 ಮತ್ತು ಮಹಾರಾಷ್ಟ್ರದಲ್ಲಿ 32 ದೈನಂದಿನ ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 1,02,22,525 ಡೋಸ್‌ಗಳನ್ನು ನೀಡಲಾಗಿದ್ದು ಈವರೆಗೆ ಒಟ್ಟು 87,07,08,636ಡೋಸ್‌ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 13,21,780 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights