ತಂದೆ ಅಫ್ಘಾನ್ ವಿರೋಧಿ ಪಡೆಯ ನಾಯಕ ಎಂದು ಮಗುವನ್ನು ಗಲ್ಲಿಗೇರಿಸಿದ ತಾಲಿಬಾನಿಗಳು!

ತಂದೆ ತಾಲಿಬಾನ್ ವಿರೋಧಿ ಪಡೆಗಳ ಭಾಗವಾಗಿದ್ದಾನೆ ಎಂಬ ಶಂಕೆಯಿಂದ ಮಗುವನ್ನು ಗಲ್ಲಿಗೇರಿಸಿದ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ತಾಲಿಬಾನ್ ಮಗುವನ್ನು ಗಲ್ಲಿಗೇರಿಸಿದ್ದು, ಈ ಮಗು ತಾಲಿಬಾನ್ ವಿರುದ್ಧ ಹೋರಾಟ ನಡೆಸಿದ ಪ್ರತಿರೋಧ ಪಡೆಯ ಸದಸ್ಯನ ಮಗ ಎಂದು ಶಂಕಿಸಲಾಗಿದೆ.

ಪಂಜಶೀರ್ ಅಬ್ಸರ್ವರ್ ವರದಿಗಳ ಪ್ರಕಾರ, ಮಗುವನ್ನು ತಾಲಿಬಾನ್ ಗಲ್ಲಿಗೇರಿಸಿದೆ. ಸ್ಥಳೀಯ ಮಾಧ್ಯಮಗಳು ಟ್ವೀಟ್‌ನಲ್ಲಿ ಮಗುವಿನ ರಕ್ತದ ಮಡುವಿನಲ್ಲಿ ಮಲಗಿರುವ ವೀಡಿಯೊವನ್ನು ಹಂಚಿಕೊಂಡಿದ್ದು, ಇತರ ಮಕ್ಕಳು ದೇಹದ ಸುತ್ತಲೂ ಅಳುತ್ತಿರುವ ದೃಶ್ಯ ವೈರಲ್ ಆಗಿದೆ.

ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಪಂಜಶೀರ್ ಕಣಿವೆಯಿಂದ ತಾಲಿಬಾನ್ ವಿರುದ್ಧ ಹೋರಾಡಿದ ಕೆಲ ಪ್ರತಿರೋಧ ಪಡೆಗಳು ಸೋಲಿಸಲ್ಪಟ್ಟವು. ಇಂದಿಗೂ ಪಂಜಶೀರ್ ಕಣಿವೆಯ ಸುತ್ತ ತಾಲಿಬಾನ್ ಸಶಸ್ತ್ರ ಗುಂಪು ಸುತ್ತುವರಿದೆ. ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಅಧಿಕಾರವನ್ನು ಪಡೆದ ತಾಲಿಬಾನ್ ಪಂಜ್‌ಶಿರ್ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ತನ್ನ ವಿರೋಧಿ ಪಡೆಗಳ ಮೇಲೆ ತೀಕ್ಷ್ಣ ಕಣ್ಣು ನೆಟ್ಟಿದೆ. ತನ್ನ ಪ್ರತಿರೋಧ ಗುಂಪಿನ ಸದಸ್ಯರು ಹಾಗೂ ಅವರ ಮಕ್ಕಳು ಸಿಕ್ಕರೆ ಅವರಿಗೆ ಕ್ರೂರವಾಗಿ ಶಿಕ್ಷೆ ನೀಡಿ ಕೊಲ್ಲಲಾಗುತ್ತಿದೆ ತಾಲಿಬಾನ್.

ಕಳೆದ ವಾರ, ತಾಲಿಬಾನ್ ಆಳ್ವಿಕೆಯಲ್ಲಿ ಅಪಹರಣವನ್ನು ಸಹಿಸುವುದಿಲ್ಲ ಎಂದ ಆಫ್ಘನ್ನರಿಗೆ ಪಾಠ ಕಲಿಸಲು ತಾಲಿಬಾನ್ ನಾಲ್ಕು ಅಪಹರಣಕಾರರ ಮೃತದೇಹಗಳನ್ನು ಹೆರಾತ್ ನಲ್ಲಿ ಸಾರ್ವಜನಿಕ ಸಮ್ಮುಖದಲ್ಲಿ ಕೊಂದು ಗಲ್ಲಿಗೇರಿಸಿತು.

ಕ್ರೇನ್‌ಗಳಿಂದ ನೇತಾಡುತ್ತಿರುವ ನಾಲ್ಕು ಶವಗಳ ಭಯಾನಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಾಲ್ಕು ಶವಗಳನ್ನು ಕಂಡು ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇನ್ನೂ ಅಲ್ಲಿನ ಆಫ್ಘನ್ನರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಅಸಾಧ್ಯವಾಗಿದೆ.

ಮಾತ್ರವಲ್ಲ ಸೋಮವಾರ ತಾಲಿಬಾನ್ ಹೆಲ್ಮಂಡ್ ಪ್ರಾಂತ್ಯದ ಕ್ಷೌರಿಕರಿಗೆ ಅಫ್ಘನ್ನರ ಗಡ್ಡವನ್ನು ಕ್ಷೌರ ಮಾಡುವುದನ್ನು ಮತ್ತು ಟ್ರಿಮ್ ಮಾಡುವುದನ್ನು ನಿಲ್ಲಿಸಬೇಕು ಎಂದು ಆದೇಶಗಳನ್ನು ನೀಡಿದೆ. ಈ ಅಭ್ಯಾಸಗಳು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿವೆ ಎಂದು ಹೇಳಿದೆ. ಆಫ್ಘನ್ನರು “ಅಮೇರಿಕನ್ ಶೈಲಿಗಳನ್ನು” ಅನುಸರಿಸುವುದನ್ನು ನಿಲ್ಲಿಸಬೇಕು ಎಂದು ತಾಲಿಬಾನ್ ಹೊಸ ದಿಕ್ಸೂಚಿಯು ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights