Cricket ಆಟಗಾರರು ಕೊರೊನಾ ಸೋಂಕಿನ ಜೊತೆ ಬದುಕಬೇಕು: ಗೌತಮ್ ಗಂಭೀರ್

ಕೊರೊನಾ ವೈರಸ್‌  ಜಗತ್ತಿನಾದ್ಯಂತ ವ್ಯಾಪಿಸಿದ್ದು, ಇದೇ ಕಾರಣಕ್ಕೆ ಈ ವರ್ಷ ಕ್ರಿಕೆಟ್‌ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಭವಿಷ್ಯದ ಸಲುವಾಗಿ ಕ್ರಿಕೆಟಿಗರು ಕೊರೊನಾ ಸೋಂಕಿನ ಜೊತೆಗೆ ಬದುಕುವುದನ್ನು ಕಲಿತುಕೊಳ್ಳಬೇಕು ಎಂದು ಟೀಮ್‌ ಇಂಡಿಯಾದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕ್ರಿಕೆಟ್‌ ಟೂರ್ನಿಗಳು ಮತ್ತೆ ಆರಂಭವಾದರೂ ಕೆಲ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಪ್ರಮುಖವಾಗಿ ಚೆಂಡಿನ ಹೊಳಪು ತರಲು ಸಾಂಪ್ರದಾಯಿಕೆವಾಗಿ ಆಟಗಾರರು ಉಗುಳು ಅಥವಾ ಬೆವರನ್ನು ಹಚ್ಚುತ್ತಿದ್ದರು. ಆದರೆ, ಈಗ ವೈರಸ್‌ ಹರಡುವ ಅಪಾಯ ಇರುವುದರಿಂದ ಈ ಅಭ್ಯಾಸವನ್ನು ತಡೆಯುವ ಸ್ಥಿತಿ ಎದುರಾಗಿದೆ.

ಹಲವು ಕ್ರಿಕೆಟಿಗರು ಚೆಂಡಿಗೆ ಹೊಳಪು ನೀಡಲು ಕೃತಕ ವಸ್ತು ಬಳಕೆಯನ್ನು ಕಾನೂನಾತ್ಮಕವಾಗಿ ಜಾರಿಗೆ ತರಬೇಕು ಎಂದಿದ್ದಾರೆ. ಇನ್ನು ಕೆಲ ಆಟಗಾರರು ಬೆವರು ಮತ್ತು ಉಗುಳಿನ ಬಳಕೆ ನಿಷೇಧವಾದರೆ ಬ್ಯಾಟ್ಸ್‌ಮನ್‌ಗಳ ಆಟ ಸುಲಭವಾಗಿಬಿಡುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.

ಹೀಗಾಗಿ, ಅಧಿಕೃತವಾಗಿ ಬಾಲ್‌ ಟ್ಯಾಂಪರಿಂಗ್‌ಗೆ ಈಗ ಚಾಲನೆ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆಲ್ಲಾ ಉಗುಳು ಅಥವಾ ಬೆವರು ಹೊರತಾಗಿ ಚೆಂಡಿನ ಹೊಳಪಿಗೆ ಬೇರೆ ಯಾವ ಪದಾರ್ಥ ಬಳಕೆ ಮಾಡಿದರೂ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತಿತ್ತು.

“ಮುಂದಿನ ದಿನಗಳಲ್ಲಿ ಆಟಗಾರರು ಮತ್ತು ಪ್ರತಿಯೊಬ್ಬರು ಕೂಡ ಈ ವೈರಸ್‌ನೊಂದಿಗೆ ಬದುಕಬೇಕಾಗುತ್ತದೆ. ವೈರಸ್‌ ಇದೆ, ಅದು ಇಲ್ಲೇ ಸುತ್ತ ಮುತ್ತ ಇರಬಹುದು ಎಂಬುದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಇಂತಹ ಸಂದರ್ಭದಲ್ಲಿ ಆಟಗಾರರಲ್ಲಿ ವೈಸರ್‌ ಕಾಣಿಸಿಕೊಳ್ಳಬಹುದು. ಆದರೆ ಅದರೊಟ್ಟಿಗೆ ಬದುಕುವುದನ್ನು ಕಲಿತುಕೊಳ್ಳಬೇಕು,” ಎಂದು ಗಂಭೀರ್‌ ಹೇಳಿದ್ದಾರೆ.

“ಇನ್ನು ಕ್ರಿಕೆಟ್‌ ಆಟದಲ್ಲಿ ಸೋಷಿಯಲ್‌ ಡಿಸ್ಟನ್ಸಿಂಗ್‌ ಕಾಯ್ದುಕೊಳ್ಳುವುದು ಸುಲಭ. ಇತರ ಕ್ರೀಡೆಗಳಲ್ಲಿ ಇದು ಕಷ್ಟವಾಗಬಹುದು. ಹಾಕಿ, ಫುಟ್ಬಾಲ್‌ ಮತ್ತು ಇತರ ಕ್ರೀಡೆಗಳಲ್ಲಿ ಸೋಷಿಯಲ್‌ ಡಿಸ್ಟನ್ಸಿಂಗ್ ಖಂಡಿಯಾ ಸಾಧ್ಯವಿಲ್ಲ. ಹೀಗಾಗಿ ವೈರಸ್‌ ಜೊತೆಗೇ ಬದುಕುವುದನ್ನು ಆಟಗಾರರು ಕಲಿಯಬೇಕು. ಆದಷ್ಟು ಬೇಗ ಇದನ್ನು ಆರ್ಥಮಾಡಿಕೊಂಡರೆ ಮುಂದಿನ ಕೆಲಸ ಸುಲಭವಾಗುತ್ತದೆ,” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights