ಫ್ಯಾಕ್ಟ್‌ಚೆಕ್: ಈ ಹದಗೆಟ್ಟ ರಸ್ತೆ ವಿಡಿಯೋ ಜಮ್ಮುವಿನದ್ದಲ್ಲ, ಬದಲಿಗೆ ಬೆಂಗಳೂರಿನದ್ದು

ಗಗನಯಾತ್ರಿಯ ಸೂಟ್ ಧರಿಸಿದ ವ್ಯಕ್ತಿಯೊಬ್ಬರು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಎಲ್ಲಾ ಕಾಶ್ಮೀರಿಗಳಿಗೆ ಅಭಿನಂದನೆಗಳು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರಿ ಸರ್ಕಾರವು ಚಂದ್ರನ ಮೇಲೆ ಇಳಿಯುವ ಇಂತಹ ಸಾಧನೆಯನ್ನು ಸಾಧಿಸಲು, ಶ್ರಮಿಸಿದ ಜಮ್ಮು ಮತ್ತು ಕಾಶ್ಮೀರದ ಸರ್ಕಾರಕ್ಕೆ ಜನರು ಎಲ್ಲ ರೀತಿಯ ಬೆಂಬಲ ನೀಡಬೇಕು ಎಂಬ ವ್ಯಂಗ್ಯ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

 

ಈ ದೃಶ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹದಗೆಟ್ಟಿರುವ ರಸ್ತೆಗಳ ಸ್ಥಿತಿಯನ್ನು ತೋರಿಸುತ್ತವೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರು ವಿಡಿಯೊ ದೃಶ್ಯಗಳು ನಿಜವಾಗಿಯೂ ಜಮ್ಮು ಮತ್ತು ಕಾಶ್ಮೀರದ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ವಾಸ್ತವವಾಗಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಗಗನಯಾತ್ರಿ ಉಡುಪು ಧರಿಸಿ ರಸ್ತೆಯಲ್ಲಿ ಗುಡಿಗಳನ್ನು ದಾಟುತ್ತಿರುವ ವಿಡಿಯೋದ ದೃಶ್ಯಗಳು ಜಮ್ಮು ಮತ್ತು ಕಾಶ್ಮೀರದಿಂದ ಬಂದಿದೆಯೇ ಎಂದು ಪರಿಶೀಲಿಸಿದಾಗ, ವೈರಲ್ ವಿಡಿಯೋ 2019 ರದ್ದು ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್, NDTV ಮತ್ತು ETV ಭಾರತ್ ಪ್ರಕಟಿಸಿದ ಹಲವಾರು ಮಾಧ್ಯಮ ವರದಿಗಳನ್ನು ಲಭ್ಯವಾಗಿವೆ.

https://twitter.com/baadalvirus/status/1168333067221532672?ref_src=twsrc%5Etfw%7Ctwcamp%5Etweetembed%7Ctwterm%5E1168333067221532672%7Ctwgr%5Efb9f2aa9360104e03ca3bb52780a19709074f7ff%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-this-astronaut-was-highlighting-bengaluru-pothole-problem-not-jammu-and-kashmir-1996653-2022-09-05

ಈ ವರದಿಗಳ ಪ್ರಕಾರ, ಸೆಪ್ಟೆಂಬರ್ 2019 ರಲ್ಲಿ, ಬೆಂಗಳೂರಿನ ಜನಪ್ರಿಯ  ಕಲಾವಿದರಾದ ಬಾದಲ್ ನಂಜುಂಡಸ್ವಾಮಿಯವರು ಈ ವಿಡಿಯೋವನ್ನು ತಯಾರಿಸಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ ರೀತಿ ವಾಕಿಂಗ್ ಮಾಡುವ ಪರಿಕಲ್ಪನೆಯಲ್ಲಿ ವಿಡಿಯೋ ಮಾಡಿದ್ದರು. ನಗರದ ರಸ್ತೆ ಗುಂಡಿಗಳ ದುಸ್ಥಿತಿಯನ್ನು ಕಟ್ಟಿಕೊಟ್ಟು, BBMP ಗೆ ಚುರುಕು ಮುಟ್ಟುವಂತೆ ಮಾಡಿದ್ದರು ಬಾದಲ್ ನಂಜುಂಡಸ್ವಾಮಿ. ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು BBMP ಗಮನ ಹರಿಸುವಂತೆ ಮಾಡಲು ಬೆಂಗಳೂರಿನ ಹೇರೋಹಳ್ಳಿಯ ರಸ್ತೆಗಳಲ್ಲಿ ನಟ ಪೂರ್ಣಚಂದ್ರ ಮೈಸೂರು ಅವರೊಂದಿಗೆ ಸೇರಿ ‘ಮೂನ್‌ವಾಕ್’ ಮಾಡುವ ಮೂಲಕ BBMP ಯ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ನಗರದ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಈಜಾಡುವಂತೆ ರಚಿಸಿದ ಬಾದಲ್
ನಗರದ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಈಜಾಡುವಂತೆ ರಚಿಸಿದ ಬಾದಲ್

ಬಾದಲ್ ನಂಜುಂಡಸ್ವಾಮಿ ಕೈಚಳಕ :

ಬಾದಲ್ ನಂಜುಂಡಸ್ವಾಮಿ ಸ್ಥಳೀಯ ಆಡಳಿತಕ್ಕೆ ಬಿಸಿ ಮುಟ್ಟಿಸಲು ಗಗನಯಾತ್ರಿ ವಾಕಿಂಗ್ ಮಾಡುವ ಕೈಚಳಕ 2019 ರಲ್ಲಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು, ಟ್ವೀಟರ್‌ನಲ್ಲಿ ಟ್ರೆಂಡ್‌ ಆಗಿತ್ತು ಎಂಬುದು ಗಮನಾರ್ಹ. ಅದೇ ರೀತಿ ಬಾದಲ್ ಅವರು ರಸ್ತೆ ಬದಿಯಲ್ಲಿ ಮಾಡುವ ಕಲಾಕೃತಿಗಳು ದೇಶದ ಗಮನ ಸೆಳೆದಿವೆ. ಬೆಂಗಳೂರಿನ ರಸ್ತೆಯಲ್ಲಿ ಮೊಸಳೆ ಚಿತ್ರ ಬರೆದು ಸುದ್ದಿ ಮಾಡಿದ್ದ ಬಾದಲ್, ನಗರದ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಈಜಾಡುವಂತೆ ಮಾಡಿದ್ದರು. ಅವರ ಮೂನ್ ವಾಕ್ ವಿಡಿಯೋ ನಂತರ ಎಚ್ಚೆತ್ತ ಬಿಬಿಎಂಪಿ ರಾತ್ರೋ ರಾತ್ರಿ ರಸ್ತೆ ಸರಿ ಮಾಡಲು ಮುಂದಾಗಿತ್ತು.

https://twitter.com/baadalvirus/status/1168768787161571329?ref_src=twsrc%5Etfw%7Ctwcamp%5Etweetembed%7Ctwterm%5E1168768787161571329%7Ctwgr%5Efb9f2aa9360104e03ca3bb52780a19709074f7ff%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-this-astronaut-was-highlighting-bengaluru-pothole-problem-not-jammu-and-kashmir-1996653-2022-09-05

ಸರ್ಕಾರಿ ಅಂಕಿಅಂಶಗಳ ಪ್ರಕಾರ ಹದಗೆಟ್ಟ ಮತ್ತು ಗುಂಡಿ ಬಿದ್ದ ರಸ್ತೆಗಳಿಂದಾಗಿ , 2016 ರಿಂದ 2020 ರವರೆಗೆ ವರ್ಷಕ್ಕೆ ಸರಾಸರಿ 2,300 ಜೀವಗಳು ಬಲಿಯಾಗುತ್ತಿವೆ ಎಂದು ವರದಿಗಳು ಹೇಳುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಸೆಪ್ಟೆಂಬರ್ 2019 ರಲ್ಲಿ ಬೆಂಗಳೂರಿನ ಹೇರೋಹಳ್ಳಿಯಲ್ಲಿನ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು  BBMP ಗಮನಹರಿವಂತೆ ಮಾಡಲು ರಚಿಸಲಾದ ವಿಡಿಯೋ. ಇದು ಜಮ್ಮು ಮತ್ತು ಕಾಶ್ಮೀರದ ರಸ್ತೆಯ ಸ್ಥಿತಿಗೆ ಸಂಬಂಧಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮೊಸಳೆ ವಿರುದ್ಧ ಹೋರಾಡಿದ ಬಾಲಕ ಎಂಬ ವಿಡಿಯೋ ನಿಜವೇ?


.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights