ಫ್ಯಾಕ್ಟ್‌ಚೆಕ್ : ಬೆಳ್ಳಂದೂರಿನ ವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂಬುದು ಸುಳ್ಳು ಸುದ್ದಿ

ಇಡೀ ಬೆಂಗಳೂರು ಬಚ್ಚಲ ಮೆನೆಯಂತಾಗಿದೆ, ಪ್ರತಿ ದಿನವೂ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ವ್ಯಾಲಿಯನ್ನು ಸ್ತಬ್ಧಗೊಂಡಿದೆ. ತಗ್ಗು ಪ್ರದೇಶ, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ದೋಣಿ, ಏರ್ ಬೋಟ್‌, ಟ್ರಾಕ್ಟರ್ ಮತ್ತು ಬುಲ್ಡೋಜರ್ ಮೂಲಕ ಜನರನ್ನು ಸಾಗಿಸಲಾಗುತ್ತಿದೆ. ಇದರ ಮದ್ಯೆ ಬೆಳ್ಳಂದೂರು ಪ್ರದೇಶದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ  ಸಿಲಿಕಾನ್ ವ್ಯಾಲಿಯನ್ನು ಸ್ತಬ್ಧಗೊಳಿಸಿದೆ. ಈ ಸಂಕಷ್ಟಗಳ ನಡುವೆ ಜನರು ಜೀವ ಭಯದಿಂದ ಇರುವಂತಾಗಿದ್ದು  ಕೆಪಿಸಿಸಿ ಆನೇಕಲ್ ವಿಧಾನಸಭಾ ಕ್ಷೇತ್ರ ಸಾಮಾಜಿಕ ಜಾಲತಾಣ  ದ ಪೇಜ್‌ವೊಂದರಲ್ಲಿ “ಬೆಳ್ಳಂದೂರು ತಗ್ಗು ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು  ವಿಡಿವೊವನ್ನು ಹಂಚಿಕೊಂಡಿದೆ”. ಹಾಗಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಬೆಳ್ಳಂದೂರು ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ವಿಡಿಯೋವನ್ನು ಪರಿಶೀಲಿಸಿದಾಗ ಕೆಲವರು ಮಾಡಿದ್ದ ಕಮೆಂಟ್‌ಗಳಲ್ಲಿ ಈ ದೃಶ್ಯಗಳು ಮದ್ಯ ಪ್ರದೇಶದಿಂದ ಬಂದಿವೆ ಎಂದು ಹೇಳಿದ್ದಾರೆ. ಈ ವಿಡಿಯೊದ ವಾಸ್ತವವನ್ನು ತಿಳಿಯಲು ಕೀವರ್ಡ್ ಮೂಲಕ ಮತ್ತಷ್ಟು ಸರ್ಚ್‌ ಮಾಡಿದಾಗ ಕೆಲ ಮುಖ್ಯ ವಾಹಿನಿ ಮಾಧ್ಯಮಗಳು ಈ ವೈರಲ್ ದೃಶ್ಯಗಳನ್ನು ಮಧ್ಯಪ್ರದೇಶದ್ದು ವರದಿ ಮಾಡಿವೆ.

16 ಆಗಸ್ಟ್‌ 2022ರಲ್ಲಿ ಈ ಟಿವಿ ಭಾರತ್‌ನ ಯುಟೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವಸತಿ ಪ್ರದೇಶದಲ್ಲಿ ಮೊಸಳೆಯೊಂದು ಕಾಣಿಸಿಕೊಂಡ ಸಂದರ್ಭದಲ್ಲಿ, ಮಾಧವ್ ರಾಷ್ಟ್ರೀಯ ಉದ್ಯಾನವನದ ರಕ್ಷಣಾ ತಂಡವು ಒಂದು ಗಂಟೆಯ ಕಾರ್ಯಾಚರಣೆಯ ನಂತರ  ಸೆರೆಹಿಡಿದಿದೆ. ನಂತರ ಅದನ್ನು ಸಾಂಖ್ಯ ಸಾಗರ ಸರೋವರಕ್ಕೆ ಬಿಡಲಾಗಿದೆ ಎಂದು ವರದಿ ಮಾಡಿದೆ.

ಈ ಘಟನೆಯನ್ನು  Times of India,  the Hindustan Times ,  News 18 ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌  ವರದಿ ಮಾಡಿದೆ. ಈ ಎಲ್ಲಾ ಮಾಧ್ಯಮಗಳು  ವೈರಲ್ ದೃಶ್ಯಗಳನ್ನು ಮದ್ಯಪ್ರದೇಶದ್ದ ಎಂದು ವರದಿ ಮಾಡಿವೆ.

ಮಧ್ಯಪ್ರದೇಶದ ಶಿವಪುರಿಯಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 8 ಅಡಿ ಉದ್ದದ ಮೊಸಳೆಯೊಂದು ಆ ಪ್ರದೇಶದ ಜನರಲ್ಲಿ ಭಯದ ವಾತಾವರಣವನ್ನು ನಿರ್ಮಿಸಿತ್ತು. ಈ ದೃಶ್ಯವನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ನಂತರದಲ್ಲಿ ಈ ಮೊಸಳೆಯನ್ನು ಹಿಡಿದು ಸಮೀಪದ ಕೆರೆ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಶಿವಪುರಿಯ ಹಳೆ ಬಸ್‌ನಿಲ್ದಾಣದ ಕಾಲೋನಿಯೊಂದರಲ್ಲಿ ಈ ಘಟನೆ ನಡೆದಿದೆ. ಮಳೆ ನೀರಿನಿಂದ ತುಂಬಿದ ಕಾಲೋನಿಯ ಓಣಿಯಲ್ಲಿ ಮೊಸಳೆ ಹರಿದಾಡುತ್ತಾ ಜನವಸತಿ ಪ್ರದೇಶದತ್ತ ಬಂದಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿನ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ. ನಂತರ ಸಮೀಪದ ಮಾಧವ ರಾಷ್ಟ್ರೀಯ ಉದ್ಯಾನವನದ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ದೈತ್ಯಗಾತ್ರದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.  ನಂತರ ಈ ಮೊಸಳೆಯನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಸಂಖ್ಯಾ ಸಾಗರ್ ಕೆರೆಯ ಆವರಣದಲ್ಲಿ ಬಿಟ್ಟಿದ್ದಾರೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಅಜಯ್‌  ಭಾರ್ಗವ್‌ ಮಾಹಿತಿ ನೀಡಿದ್ದಾರೆ ಎಂದು ಏಷಿಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಪ್ರವಾಹ ಮುಂದುವರಿದಿದ್ದು, ಹಲವು ಸ್ವಯಂಸೇವಕರು ನೀರಿನಿಂದ ತುಂಬಿರುವ ರಸ್ತೆಗಳಲ್ಲಿ ಮೀನುಗಳನ್ನು ಹಡಿಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿದ್ದವು. ಆದರೆ, ಬೆಂಗಳೂರಿನಲ್ಲಿ ಮೊಸಳೆಗಳು ಕಾಣಿಸಿಕೊಂಡಿರುವ ಬಗ್ಗೆ ಯಾವುದೇ ಇತ್ತೀಚಿನ ಸುದ್ದಿ ಕಂಡುಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ಯು.ಟಿ.ಖಾದರ್ ಭಾಗವಹಿಸಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights